AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook: “ನಮ್ಮಿಂದ ತಪ್ಪಾಗಿದೆ”: ಬಳಕೆದಾರರ ಬಳಿ ಕ್ಷಮೆಯಾಚಿಸಿದ ಫೇಸ್​ಬುಕ್ ಸಂಸ್ಥೆ

ಫೇಸ್​ಬುಕ್ ಸಂಸ್ಥೆ ಬಳಕೆದಾರರಿಗೆ ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯವನ್ನೇ ಹಿಂಪಡೆದಿದೆ. ಅಲ್ಲದೆ ಈ ರೀತಿಯ ತಪ್ಪು ಹೇಗೆ ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಸಲು ಸೂಚಿಸಿದೆ.

Facebook: ನಮ್ಮಿಂದ ತಪ್ಪಾಗಿದೆ: ಬಳಕೆದಾರರ ಬಳಿ ಕ್ಷಮೆಯಾಚಿಸಿದ ಫೇಸ್​ಬುಕ್ ಸಂಸ್ಥೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Sep 04, 2021 | 2:17 PM

Share

ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್​ಬುಕ್ (Facebook) ಸಂಸ್ಥೆ ತನ್ನ ಬಳಕೆದಾರರಲ್ಲಿ ಕ್ಷಮೆಯಾಚಿಸಿದೆ. ಇತ್ತೀಚೆಗಷ್ಟೆ ಫೇಸ್​ಬುಕ್​ನಲ್ಲಿ ಕಪ್ಪು ವರ್ಣದ ಪುರುಷರನ್ನು ಸಸ್ತನಿ ವರ್ಗದ ಇತರೆ ಪ್ರಾಣಿಗಳು ಎಂಬ ತಪ್ಪಾದ ವಿಡಿಯೋ ಕಾಣಿಸಿಕೊಂಡಿತ್ತು. ಸದ್ಯ ಇದರಿಂದ ಎಚ್ಚೆತ್ತು ಗೊಂಡಿರುವ ಕಂಪೆನಿ ಬಳಕೆದಾರರಿಗೆ ಈ ವಿಷಯಗಳನ್ನು ಶಿಫಾರಸು ಮಾಡುತ್ತಿದ್ದ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿದೆ ಎಂದು ಮಾಹಿತಿ ನೀಡಿದೆ.

ಈ ಬಗ್ಗೆ ಫೇಸ್​ಬುಕ್​ ವಕ್ತಾರ ಮಾಹಿತಿ ನೀಡಿದ್ದು, ಇದು ನಿಜಕ್ಕೂ ಕ್ಷಮಿಸಲಾಗದಂತಹ ಪ್ರಮಾದವಾಗಿದೆ. ನಮ್ಮ ಕಡೆಯಿಂದ ಬಹುದೊಡ್ಡ ತಪ್ಪಾಗಿದೆ. ಈ ರೀತಿಯಾದ ಶಿಫಾರಸು ನೀಡಿದ ಸಾಫ್ಟ್​ವೇರ್​​ನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ. ಈ ತಪ್ಪಾದ ಶಿಫಾರಸ್ಸು ಯಾರಿಗೆಲ್ಲಾ ಕಂಡಿದೆಯೋ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಫೇಸ್​ಬುಕ್ ಸಂಸ್ಥೆ ಬಳಕೆದಾರರಿಗೆ ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯವನ್ನೇ ಹಿಂಪಡೆದಿದೆ. ಅಲ್ಲದೆ ಈ ರೀತಿಯ ತಪ್ಪು ಹೇಗೆ ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಸಲು ಸೂಚಿಸಿದೆ. ಮುಂದೆ ಇಂತಹ ಪ್ರಮಾದ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಮಾತು ನೀಡಿದೆ.

ಫೇಸ್​ಬುಕ್​ನಲ್ಲಿ ಸಾಮಾನ್ಯವಾಗಿ ನಾವು ಯಾವುದಾದರೂ ವಿಡಿಯೋಗಳನ್ನು ವೀಕ್ಷಣೆ ಮಾಡಿದರೆ ಬಳಿಕ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಅದರ ಕೆಳಗೆ ಕಾಣಿಸುತ್ತವೆ. ಈ ವೈಶಿಷ್ಟ್ಯವನ್ನು ಫೇಸ್​ಬುಕ್​ ಹೊಂದಿದೆ. ಅದೇ ರೀತಿ ಕಪ್ಪು ಪುರುಷರನ್ನು ಒಳಗೊಂಡ ಬ್ರಿಟಿಷ್​ ಟಾಬ್ಲ್ಯಾಯ್ಡ್​​ ವಿಡಿಯೋಗಳನ್ನ ನೋಡಿದ ಫೇಸ್​ಬುಕ್​ ಬಳಕೆದಾರರ ಬಳಿ ಸಸ್ತನಿಗಳ ವಿಡಿಯೋ ನೋಡಬಯಸುತ್ತೀರಾ ಎಂಬ ಶಿಫಾರಸು ಫೇಸ್​ಬುಕ್​ ಬಳಕೆದಾರರ ಬಳಿ ಕೇಳಿದೆ.

ಇದನ್ನ ಕಂಡ ಅನೇಕರು ಫೇಸ್​ಬುಕ್ ಬಗ್ಗೆ ದೂರು ನೀಡಿದ್ದರು. ಅಲ್ಲದೆ ಈ ವೈಶಿಷ್ಟ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು. ಸದ್ಯ ಈ ವಿಚಾರ ಕಂಪೆನಿಯ ಗಮನಕ್ಕೆ ಬಂದು ತನಿಖೆಗೆ ಸೂಚಿಸಿದ್ದು, ಆಗಿರುವ ತಪ್ಪಿಗೆ ಕ್ಷಮೆಯಾಚಿಸಿದೆ.

Vivo X70: ಬಿಡುಗಡೆಗೂ ಮುನ್ನ ಫೀಚರ್ಸ್​ಗಳಿಂದಲೇ ಕಿಕ್ಕೇರಿಸುತ್ತಿದೆ ವಿವೋ X70 ಸರಣಿ ಸ್ಮಾರ್ಟ್​ಫೋನ್

Flipkart Smartphones Carnival Sale 2021: ಫ್ಲಿಪ್​ಕಾರ್ಟ್​ನಲ್ಲಿ ಕಾರ್ನಿವಲ್ ಸೇಲ್: ಬಂಪರ್ ಡಿಸ್ಕೌಂಟ್​ಗೆ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು

(Clearly Unacceptable Error Facebook After Labeling Black Men Primates)

Published On - 2:16 pm, Sat, 4 September 21

Follow Us
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?
ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು
ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು