AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo X70: ಬಿಡುಗಡೆಗೂ ಮುನ್ನ ಫೀಚರ್ಸ್​ಗಳಿಂದಲೇ ಕಿಕ್ಕೇರಿಸುತ್ತಿದೆ ವಿವೋ X70 ಸರಣಿ ಸ್ಮಾರ್ಟ್​ಫೋನ್

ವಿವೋ X70 (Vivo X70) ಸರಣಿಯ ಸ್ಮಾರ್ಟ್​ಫೋನ್ ಸದ್ಯ ಚೀನಾದ ಸರ್ಟಿಫಿಕೇಶನ್ ಸೈಟ್​ನಲ್ಲಿ ಮತ್ತು TENAA ನಲ್ಲಿ ಕಾಣಿಸಿಕೊಂಡಿದ್ದು ಇದರ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

Vivo X70: ಬಿಡುಗಡೆಗೂ ಮುನ್ನ ಫೀಚರ್ಸ್​ಗಳಿಂದಲೇ ಕಿಕ್ಕೇರಿಸುತ್ತಿದೆ ವಿವೋ X70 ಸರಣಿ ಸ್ಮಾರ್ಟ್​ಫೋನ್
Vivo X70
TV9 Web
| Updated By: Vinay Bhat|

Updated on: Sep 04, 2021 | 1:25 PM

Share

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಫೋನುಗಳನ್ನು ಪರಿಯಿಸಿ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ವಿವೋ ಕಂಪೆನಿ ಇದೀಗ ತನ್ನ ಹೊಸ ವಿವೋ X70 (Vivo X70) ಸರಣಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಕಂಪೆನಿ ಖಚಿತ ಪಡಿಸಿದ್ದು, ವಿವೋ X70 ಹಾಗೂ ವಿವೋ X70 ಪ್ರೊ (Vivo X70 Pro) ಮತ್ತು ವಿವೋ X70 ಪ್ರೊ+ (Vivo X70 Pro+) ಸ್ಮಾರ್ಟ್​ಫೋನ್ ಸೆಪ್ಟೆಂಬರ್ 9 ರಂದು ಅನಾವರಣಗೊಳ್ಳಲಿದೆ. ಈಗಾಗಲೇ ಈ ಫೋನಿನ ಕೆಲ ಫೋಟೋಗಳು ಸೋರಿಕೆಯಾಗಿದ್ದು ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ.

ಆದರೆ, ಈ ಫೋನ್ ಸದ್ಯ ಚೀನಾದ ಸರ್ಟಿಫಿಕೇಶನ್ ಸೈಟ್​ನಲ್ಲಿ ಮತ್ತು TENAA ನಲ್ಲಿ ಕಾಣಿಸಿಕೊಂಡಿದ್ದು ಇದರ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಮೂಲಗಳ ಪ್ರಕಾರ ವಿವೋ X70 ಸ್ಮಾರ್ಟ್‌ಫೋನ್‌ 6.56-ಇಂಚಿನ ಡಿಸ್​ಪ್ಲೇ ಹೊಂದಿರಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ನಿಂದ ಕೂಡಿರಲಿದ್ದು, ಭವಿಷ್ಯದ ರೂಪಾಂತರವು ಸ್ಯಾಮ್‌ಸಂಗ್ ಎಕ್ಸಿನೋಸ್ 1080 ಚಿಪ್‌ಸೆಟ್ ಅನ್ನು ಸ್ವೀಕರಿಸಬಹುದು ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರ ಸೆಟಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 40 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಇದು 4,400mAh ಬ್ಯಾಟರಿಯನ್ನು 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಹೊಂದಿರುವ ಸಾಧ್ಯತೆ ಇದೆ.

ಇನ್ನು ವಿವೋ X70 ಪ್ರೊ ಸ್ಮಾರ್ಟ್‌ಫೋನ್‌ 6.5 ಡಿಸ್‌ಪ್ಲೇ ಹೊಂದಿದರಲಿದೆ. ಸ್ಯಾಮ್‌ಸಂಗ್ ಎಕ್ಸಿನೋಸ್ 1080 ಪ್ರೊಸೆಸರ್ ಇರಲಿದ್ದು, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ, 13 ಮೆಗಾಪಿಕ್ಸೆಲ್ ತೃತೀಯ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ 5x ಆಪ್ಟಿಕಲ್ ಜೂಮ್ ಇರುತ್ತದೆ. ಸಾಧನವು ಕಪ್ಪು, ಬಿಳಿ ಮತ್ತು ಅರೋರಾ ಬಣ್ಣಗಳಲ್ಲಿ ಬರಬಹುದು. ಇದು 4,400mAh ಬ್ಯಾಟರಿ 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಇನ್ನೂ ವಿವೋ X70 ಪ್ರೊ+ ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿರಲಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಲಿದೆ. ಜೊತೆಗೆ 8GB RAM ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಮೂರೂ ಸ್ಮಾರ್ಟ್​ಫೋನ್​ಗಳ ಬೆಲೆ ಎಷ್ಟಿರಬಹುದೆಂದು ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ ವಿವೋ X70 ಭಾರತೀಯ ಮಾರುಕಟ್ಟೆಗೆ 70,000 ರೂ. ಅಸುಪಾಸಿನ ಬೆಲೆಯೊಂದಿಗೆ ಬರುವ ಸಾದ್ಯತೆ ಇದೆ. ಹಾಗೆಯೇ ವಿವೋ X70 ಪ್ರೊ ಸ್ಮಾರ್ಟ್‌ಫೋನ್‌ ಬೆಲೆ ಸುಮಾರು 50,000ರೂ ಬೆಲೆ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ

Flipkart Smartphones Carnival Sale 2021: ಫ್ಲಿಪ್​ಕಾರ್ಟ್​ನಲ್ಲಿ ಕಾರ್ನಿವಲ್ ಸೇಲ್: ಬಂಪರ್ ಡಿಸ್ಕೌಂಟ್​ಗೆ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು

(Vivo X70 ProPlus Vivo X70 Specifications Tipped by TENAA Listings Ahead of sep 9 Launch)

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​