Galaxy M33 5G: ಬರೋಬ್ಬರಿ 6000mAh ಬ್ಯಾಟರಿ, 50MP ಕ್ಯಾಮೆರಾದ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ ಒಟ್ಟು ಎರಡು ಸ್ಟೋರೆಜ್ ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಸದ್ಯ ಇದರ 8GB RAM ಮತ್ತು 128GB ಸ್ಟೋರೇಜ್ ಆವೃತ್ತಿಯ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ.

Galaxy M33 5G: ಬರೋಬ್ಬರಿ 6000mAh ಬ್ಯಾಟರಿ, 50MP ಕ್ಯಾಮೆರಾದ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್
Samsung Galaxy M33

Updated on: May 26, 2023 | 3:48 PM

ಸ್ಯಾಮ್​ಸಂಗ್ (Samsung) ಕಂಪನಿಯ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್​ಫೋನ್​ಗಳಿಗೆ (Smartphone) ಭಾರತದಲ್ಲಿ ಉತ್ತಮ ಬೇಡಿಕೆ ಇದೆ. ಈ ಸರಣಿ ಅಡಿಯಲ್ಲಿ ಫೋನ್​ಗಳು ಬಿಡುಗಡೆ ಆಯಿತು ಎಂದಾದರೆ ಅದು ಭರ್ಜರಿ ಸೇಲ್ ಆಗುತ್ತದೆ. ಕಳೆದ ವರ್ಷ ಕಂಪನಿ ಗ್ಯಾಲಕ್ಸಿ M ಸರಣಿಯಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಮ್​​33 5G (Galaxy M33 5G) ಮೊಬೈಲ್ ಅನ್ನು ಬಿಡುಗಡೆ ಮಾಡಿತ್ತು. ಆಕರ್ಷಕ ಫೀಚರ್​​ಗಳಿಂದ ಕೂಡಿರುವ ಈ ಫೋನ್ ಇದೀಗ ಅತಿ ಕಡಿಮೆ ಬೆಲೆಗೆ ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್​ನಲ್ಲಿ ಸೇಲ್ ಕಾಣುತ್ತಿದೆ. ಇದು ಬಜೆಟ್ ಬೆಲೆಗೆ ಲಭ್ಯವಿದ್ದು 50 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ. ಅಲ್ಲದೆ ದೀರ್ಘ ಸಮಯದ ಬಾಳಿಕೆಗಾಗಿ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.

ಬೆಲೆ ಎಷ್ಟು?-ಏನು ಆಫರ್?:

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ ಒಟ್ಟು ಎರಡು ಸ್ಟೋರೆಜ್ ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಸದ್ಯ ಇದರ 8GB RAM ಮತ್ತು 128GB ಸ್ಟೋರೇಜ್ ಆವೃತ್ತಿಯ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಫೋನಿನ ಮೂಲ ಬೆಲೆ 25,999 ರೂ. ಆಗಿದೆ. ಆದರೀಗ ಶೇ. 35 ರಷ್ಟು ರಿಯಾಯಿತಿ ಪಡೆದುಕೊಂಡಿದ್ದು ಕೇವಲ 16,999 ರೂ. ಗೆ ಸೇಲ್ ಕಾಣುತ್ತಿದೆ. 9,000 ರೂ. ಗಳನ್ನು ಉಳಿತಾಯ ಮಾಡಬಹುದು. ಇದರ ಜೊತೆಗೆ 16,100 ರೂ. ಗಳ ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ
Vivo Y36: 4G, 5G ಆವೃತ್ತಿಯಲ್ಲಿ ಕಡಿಮೆ ಬೆಲೆಗೆ ಒಂದು ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ವಿವೋ
Xiaomi Civi 3: ಒಂದಲ್ಲ ಎರಡು ಸೆಲ್ಫಿ ಕ್ಯಾಮೆರಾ: ಮಾರುಕಟ್ಟೆಯನ್ನು ನಡುಗಿಸಿದ ಶವೋಮಿ Civi 3 ಸ್ಮಾರ್ಟ್​ಫೋನ್
HTC U23 Pro: ಗ್ಯಾಜೆಟ್ ಮಾರುಕಟ್ಟೆಗೆ ಬಂತು ಹೊಸ ಎಚ್​ಟಿಸಿ ಸ್ಮಾರ್ಟ್​ಫೋನ್
Realme Narzo N53: ಬಜೆಟ್ ದರಕ್ಕೆ ಲಭ್ಯವಾಗುತ್ತಿದೆ ಸೂಪರ್ ರಿಯಲ್​ಮಿ ಸ್ಮಾರ್ಟ್​ಫೋನ್

Tech Tips: ಆಧಾರ್ ಕಾರ್ಡ್ ಕಳೆದು ಹೋದರೆ ಟೆನ್ಶನ್ ಬೇಡ: ಮರಳಿ ಪಡೆಯಲು ಹೀಗೆ ಮಾಡಿ ಸಾಕು

ಏನು ವಿಶೇಷತೆ?:

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಇನ್ಫಿನಿಟಿ V ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಆಕ್ಟಾ-ಕೋರ್ 5nm ಎಕ್ಸಿನೋಸ್‌ ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 12 UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಸ್ಯಾಮ್‌ಸಂಗ್‌ನ RAM ಪ್ಲಸ್ ಫೀಚರ್ಸ್‌ ಮೂಲಕ, RAM ಅನ್ನು ಅದರ 16GB ವರೆಗೆ ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಜೊತೆಗೆ 120-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಬೊಕೆ ಎಫೆಕ್ಟ್, ಸಿಂಗಲ್ ಟೇಕ್, ಆಬ್ಜೆಕ್ಟ್ ಎರೇಸರ್ ಮತ್ತು ವೀಡಿಯೋ TNR ಮತ್ತು ವೀಡಿಯೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ದೀರ್ಘ ಸಮಯದ ಬಾಳಿಕೆಗಾಗಿ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ ಮತ್ತು GPS ಅನ್ನು ಒಳಗೊಂಡಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಯನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 26 May 23