Trending Smartphones: 20,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

|

Updated on: Dec 13, 2023 | 2:46 PM

Best Smartphones Under 20K: ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್ ಇರುವ ಅನೇಕ ಸ್ಮಾರ್ಟ್​ಫೋನ್​ಗಳು ಲಭ್ಯವಿವೆ. ನೀವು ಉತ್ತಮ ಫೀಚರ್ ಪ್ಯಾಕ್ಡ್ ಫೋನ್ ಖರೀದಿಸಲು ಬಯಸಿದರೆ ರೂ. 20,000 ಒಳಗಿನ ಟಾಪ್ ಸ್ಮಾರ್ಟ್​ಫೋನ್‌ಗಳ ಪಟ್ಟಿ ಇಲ್ಲಿದೆ.

Trending Smartphones: 20,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Best Smartphones Under 20K
Follow us on

ಇಂದು ಸ್ಮಾರ್ಟ್​ಫೋನ್ (Smartphone) ಎಂಬುವುದು ಅತ್ಯಗತ್ಯ ವಸ್ತುವಾಗಿಬಿಟ್ಟಿದೆ. ಹಿಂದಿನ ಕಾಲದಲ್ಲಿ ಕರೆ ಮಾಡಲು ಮಾತ್ರ ಬಳಸುತ್ತಿದ್ದ ಫೋನ್ ಈಗ ಅಂಗೈಯಲ್ಲಿ ಎಲ್ಲವನ್ನೂ ಸ್ಮಾರ್ಟ್​ಫೋನ್ ರೂಪದಲ್ಲಿ ತಂದಿದೆ. ಇದಕ್ಕೆ ಪ್ರಮುಖ ಕಾರಣ ಇಂದು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಉತ್ತಮ ಫೀಚರ್​ಗಳನ್ನು ಹೊಂದಿರುವ ಹೊಸ ಸ್ಮಾರ್ಟ್​ಫೋನ್​ಗಳು ಲಭ್ಯವಿರುವುದು. ನೀವು ಕೂಡ ಉತ್ತಮ ಫೀಚರ್ ಪ್ಯಾಕ್ಡ್ ಫೋನ್ ಖರೀದಿಸಲು ಬಯಸಿದರೆ ರೂ. 20,000 ಒಳಗಿನ ಟಾಪ್ ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿವೆ. ಇವುಗಳಲ್ಲಿ ಸ್ಯಾಮ್​ಸಂಗ್, ಶವೋಮಿ, ಒನ್​ಪ್ಲಸ್​ನಂತಹ ಟಾಪ್ ಬ್ರಾಂಡ್ ಫೋನ್‌ಗಳೂ ಸೇರಿವೆ.

ಒನ್​ಪ್ಲಸ್ ನಾರ್ಡ್ CE3 ಲೈಟ್ 5G:

ಈ ಫೋನ್ 6.72 ಇಂಚಿನ LCD ಡಿಸ್​ಪ್ಲೇ ಹೊಂದಿದೆ. 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಚಿಪ್ ಸೆಟ್ ನೀಡಲಾಗಿದ್ದು, 8GB RAM ಮತ್ತು 256GB ಆಂತರಿಕ ಮೆಮೊರಿ ಇದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಂ ಆಧಾರಿತ OxygenOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 200% ಅಲ್ಟ್ರಾ-ವಾಲ್ಯೂಮ್ ಮೋಡ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. 108MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಅಮೆಜಾನ್​ನಲ್ಲಿ ಇದರ ಬೆಲೆ ರೂ. 19,999.

ಐಕ್ಯೂ Z7S 5G:

ಈ ಫೋನ್ 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.38-ಇಂಚಿನ ಪೂರ್ಣ HD ಪ್ಲಸ್ ಡಿಸ್​ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಆಧಾರಿತ Funtouch OS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಜೊತೆಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಮುಂಭಾಗದಲ್ಲಿ, 16-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 695 5G SoC ಮತ್ತು Adreno 619L GPU ಅನ್ನು ಹೊಂದಿದೆ. ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್​ನಲ್ಲಿ ಇದರ ಬೆಲೆ ರೂ. 17,999.

ಇದನ್ನೂ ಓದಿ
ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನಿರ್ಧಾರ: ಇನ್ನುಂದೆ ಹಣ ಪಾವತಿಸಬೇಕು
ಸ್ನಾಪ್‌ಡ್ರಾಗನ್ 8 Gen 3, 50MP: ಭಾರತಕ್ಕೆ ಬಂತು ಅತ್ಯಂತ ಬಲಿಷ್ಠ ಸ್ಮಾರ್ಟ
ಟ್ರೆಂಡ್​ ಆಗುತ್ತಿದೆ ಎಲೆಕ್ಟ್ರಿಕ್ ಜಾಕೆಟ್​​ಗಳು​​; ಬೆಲೆ ಎಷ್ಟು ಗೊತ್ತಾ?
ರೆಡ್ಮಿ 13C ಸ್ಮಾರ್ಟ್​ಫೋನ್ ಮಾರಾಟ ಭಾರತದಲ್ಲಿ ಆರಂಭ

ಬಜೆಟ್ ಪ್ರಿಯರ ಬೆಸ್ಟ್​ ಫೋನ್ ರೆಡ್ಮಿ 13C ಸ್ಮಾರ್ಟ್​ಫೋನ್ ಮಾರಾಟ ಭಾರತದಲ್ಲಿ ಆರಂಭ

ರೆಡ್ಮಿ ನೋಟ್ 12 ಪ್ರೊ 5G:

ಈ ಫೋನ್ 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ ಪೂರ್ಣ HD ಪ್ಲಸ್ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಹೊಂದಿದೆ. 50MP ಪ್ರಾಥಮಿಕ ಸಂವೇದಕವಿದೆ. 8MP ಅಲ್ಟ್ರಾವೈಡ್ ಸಂವೇದಕ ಮತ್ತು 2MP ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಇದೆ. ಅಮೆಜಾನ್​ನಲ್ಲಿ ಇದರ ಬೆಲೆ ರೂ. 19,739.

ಸ್ಯಾಮ್​ಸಂಗ್ ಗ್ಯಾಲಕ್ಸಿ M34:

ಈ ಫೋನ್ 6.6 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ದರ, ಪೂರ್ಣ HD ಪ್ಲಸ್ ರೆಸಲ್ಯೂಶನ್​ನಿಂದ ಕೂಡಿದೆ. ಎಕ್ಸಿನೊಸ್ 1280 SoC ನಿಂದ ನಡೆಸಲ್ಪಡುತ್ತಿದೆ. ಇದು 8GB RAM ಅನ್ನು ಹೊಂದಿದೆ. 50MP ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. 120 ಡಿಗ್ರಿ ವೀಕ್ಷಣೆಯ ಕ್ಷೇತ್ರದೊಂದಿಗೆ ಮೂರನೇ ಸಂವೇದಕವಿದೆ. ಇದರ ಬೆಲೆ ಅಮೆಜಾನ್​ನಲ್ಲಿ 19,480 ರೂ.

ಮೋಟೋರೊಲಾ G84:

ಈ ಸ್ಮಾರ್ಟ್‌ಫೋನ್ 2400 x 1080 ಪಿಕ್ಸೆಲ್‌ಗಳ ಪೂರ್ಣ HD ಪ್ಲಸ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ 6.55-ಇಂಚಿನ POLED ಡಿಸ್‌ಪ್ಲೇ ಹೊಂದಿದೆ. 12GB RAM ಮತ್ತು 256GB ಆಂತರಿಕ ಮೆಮೊರಿಯೊಂದಿಗೆ ಬರುತ್ತದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ನಿಂದ ಚಾಲಿತವಾಗಿದೆ. ಆಂಡ್ರಾಯ್ಡ್ 13 ಮೂಲಕ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ, 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಇದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. 5000mAh ಬ್ಯಾಟರಿ ಇರುವ ಈ ಫೋನಿಗೆ ಅಮೆಜಾನ್​ನಲ್ಲಿ ರೂ. 17,999.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ