Tech Tips: ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಉಪಯೋಗಿಸುತ್ತೀರಾ?

|

Updated on: Nov 16, 2023 | 3:17 PM

Dark Mode in Smartphone: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್​ಗಳನ್ನು ಮಕ್ಕಳು ಅಥವಾ ವೃದ್ಧರು ಎಂದು ಎಲ್ಲಾ ವಯಸ್ಸಿನ ಜನರು ಬಳಸುತ್ತಾರೆ. ಹೀಗೆ ಬಳಸುವಾಗ ಡಾರ್ಕ್ ಮೋಡ್​ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Tech Tips: ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಉಪಯೋಗಿಸುತ್ತೀರಾ?
Smartphone
Follow us on

ಸ್ಮಾರ್ಟ್‌ಫೋನ್ (Smartphone) ಕಂಪನಿಗಳು ತಮ್ಮ ಬಳಕೆದಾರರ ಅನುಕೂಲಕ್ಕಾಗಿ ಪ್ರತಿಯೊಂದು ಫೋನ್‌ನಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನು ಒದಗಿಸುತ್ತವೆ. ಆದರೆ, ಅನೇಕ ಜನರು ಈ ವೈಶಿಷ್ಟ್ಯವನ್ನು ಬಳಸುವುದಿಲ್ಲ ಅಥವಾ ಅವರಿಗೆ ಈ ವೈಶಿಷ್ಟ್ಯದ ಬಗ್ಗೆ ತಿಳಿದಿರುವುದಿಲ್ಲ. ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಉಪಯೋಗಿಸುತ್ತಿದ್ದರೆ ಇದು ಒಳ್ಳೆಯ ವಿಚಾರ. ನಿಮ್ಮ ಕಣ್ಣುಗಳ ಸುರಕ್ಷತೆಗಾಗಿ ಈ ವೈಶಿಷ್ಟ್ಯವನ್ನು ಸ್ಮಾರ್ಟ್‌ಫೋನ್‌ನಲ್ಲಿ ಒದಗಿಸಲಾಗಿದೆ. ಇದನ್ನು ಪ್ರತಿಯೊಬ್ಬ ಬಳಕೆದಾರರು ಬಳಸಬೇಕು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್​ಗಳನ್ನು ಮಕ್ಕಳು ಅಥವಾ ವೃದ್ಧರು ಎಂದು ಎಲ್ಲಾ ವಯಸ್ಸಿನ ಜನರು ಬಳಸುತ್ತಾರೆ. ಹೀಗೆ ಬಳಸುವಾಗ ಡಾರ್ಕ್ ಮೋಡ್​ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಂದಾಗಿ ಮಕ್ಕಳು ಕನ್ನಡಕವನ್ನು ಧರಿಸುವ ಪ್ರಸಂಹ ಬರುವುದಿಲ್ಲ.

ವಾಟ್ಸ್​ಆ್ಯಪ್​​ನಲ್ಲಿ ಬರಲಿದೆ ಹೊಸ ವಾಯ್ಸ್​ ಚಾಟ್ ಫೀಚರ್; ಇಲ್ಲಿದೆ ವಿವರ

ಇದನ್ನೂ ಓದಿ
ಬ್ಲಾಕ್ ಫ್ರೈಡೇ ಅಮೆಜಾನ್ ಪ್ರೈಮ್ ಹಗರಣ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದಿರಿ
ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಪ್ರಾರಂಭಿಸಿದ ಚೀನಾ
ಒಪ್ಪೋ ರೆನೋ 11 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಬಾರಿ ಏನೆಲ್ಲ ಫೀಚರ್ಸ್
ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಮತ್ತೊಂದು ಉಪಯುಕ್ತ ಫೀಚರ್

ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬೀರುವುದಿಲ್ಲ

ಸ್ಮಾರ್ಟ್‌ಫೋನ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದ ನಂತರ, ಡಿಸ್ ಪ್ಲೇ ಮೇಲೆ ಗೋಚರಿಸುವ ಎಲ್ಲ ವಿಷಯಗಳು ಕಪ್ಪು ಬಣ್ಣದಲ್ಲಿ ಇರುತ್ತದೆ. ಇದು ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುವುದಿಲ್ಲ. ಇದರ ಹೊರತಾಗಿ ಡಾರ್ಕ್ ಮೋಡ್ ಆನ್ ಮಾಡಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಡಾರ್ಕ್ ಮೋಡ್‌ನಲ್ಲಿ ಕಡಿಮೆ ಬ್ಯಾಟರಿ ಬಳಕೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮೊಬೈಲ್ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ದಿನವಿಡೀ ಮೊಬೈಲ್ ಬಳಸುತ್ತಾರೆ. ಹೀಗಾಗಿ ಇದು ಬ್ಯಾಟರಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಆದರೆ, ನಿಮ್ಮ ಫೋನ್‌ನಲ್ಲಿ ನೀವು ಡಾರ್ಕ್ ಮೋಡ್ ಅನ್ನು ಆನ್ ಮಾಡಿದರೆ, ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗನೆ ಖಾಲಿ ಆಗುವುದಿಲ್ಲ.

ಸ್ಪಷ್ಟ ಮಾಹಿತಿ

ಡಾರ್ಕ್ ಮೋಡ್ ಅನ್ನು ಆನ್ ಮಾಡಿದ ನಂತರ, ಸ್ಮಾರ್ಟ್​ಫೋನ್​ನಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ನೀವು ಯಾವುದೇ ವಿಷಯವನ್ನು ಸುಲಭವಾಗಿ ಓದಬಹುದು.

ನಿದ್ದೆ ಸಮಸ್ಯೆ

ಡಾರ್ಕ್ ಮೋಡ್ ಅನ್ನು ಆನ್ ಮಾಡಿದ ನಂತರ, ಇದು ಡಿಸ್ ಪ್ಲೇಯಿಂದ ಹೊರಸೂಸುವ ನೀಲಿ ಬೆಳಕನ್ನು ಕಡಿಮೆ ಮಾಡುತ್ತದೆ. ನೀವು ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿ ಬಳಸದಿದ್ದರೆ, ನೀವು ನಿದ್ದೆಯ ಸಮಸ್ಯೆಯನ್ನು ಕೂಡ ಎದುರಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Thu, 16 November 23