AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Super Money: ಯುಪಿಐ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಸೂಪರ್ ಮನಿ ಆ್ಯಪ್: ಫೋನ್ ಪೇ, ಗೂಗಲ್ ಪೇಗೆ ನಡುಕ

Super Money UPI app: ಸೂಪರ್ ಮನಿ ಅಪ್ಲಿಕೇಶನ್ ಫ್ಲಿಪ್‌ಕಾರ್ಟ್ ಗ್ರೂಪ್‌ನ ಪಾವತಿ ಅಪ್ಲಿಕೇಶನ್ ಆಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಇದನ್ನು ಟಾಪ್-5 UPI ಪಾವತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಇಷ್ಟೊಂದು ಮುನ್ನಲೆಗೆ ಬರಲಿ ಕಾತಣ ಸೂಪರ್ ಮನಿ ಅಪ್ಲಿಕೇಶನ್ ಕ್ರೆಡಿಟ್ ಆ್ಯಪ್ ಅನ್ನು ಹಿಂದಿಕ್ಕಿರುವುದು.

Super Money: ಯುಪಿಐ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಸೂಪರ್ ಮನಿ ಆ್ಯಪ್: ಫೋನ್ ಪೇ, ಗೂಗಲ್ ಪೇಗೆ ನಡುಕ
Super Money App
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on: Mar 15, 2025 | 4:13 PM

Share

ಬೆಂಗಳೂರು (ಮಾ. 15): ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ಹೊರತುಪಡಿಸಿ, ದೇಶದಲ್ಲಿ ಹೆಚ್ಚಿನವರಿಗೆ ಸೂಪರ್ ಮನಿ ಆ್ಯಪ್ (Super Money App) ಎಂದರೇನು ಎಂಬುದು ತಿಳಿದಿಲ್ಲ. ಅಲ್ಲದೆ ಟಾಪ್ 5 ಯುಪಿಐ ಅಪ್ಲಿಕೇಶನ್‌ಗಳಲ್ಲಿ ಇದರ ಶ್ರೇಯಾಂಕ ಏನು? ಎಂದು ಯಾರಿಗೂ ತಿಳಿದಿಲ್ಲ. ಅಲ್ಲದೆ, ಕೆಲವರಿಗೆ ಸೂಪರ್ ಮನಿ ಎಂಬ ಅಪ್ಲಿಕೇಶನ್ ಇರುವುದೇ ಗೊತ್ತಿಲ್ಲ. ಇವೆಲ್ಲದರ ಮಧ್ಯೆ, ಸೂಪರ್ ಮನಿ ಅಪ್ಲಿಕೇಶನ್ ಇತ್ತೀಚೆಗೆ ಟಾಪ್ -5 ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಸ್ಥಾನ ಪಡೆದಿದೆ. ಹಾಗಾದರೆ ಯಾವುದು ಈ ಸೂಪರ್ ಮನಿ ಅಪ್ಲಿಕೇಶನ್?. ಈ ಕುರಿತು ಮಾಹಿತಿ ಇಲ್ಲಿದೆ.

ಸೂಪರ್ ಮನಿ ಅಪ್ಲಿಕೇಶನ್ ಫ್ಲಿಪ್‌ಕಾರ್ಟ್ ಗ್ರೂಪ್‌ನ ಪಾವತಿ ಅಪ್ಲಿಕೇಶನ್ ಆಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಇದನ್ನು ಟಾಪ್-5 UPI ಪಾವತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಇಷ್ಟೊಂದು ಮುನ್ನಲೆಗೆ ಬರಲಿ ಕಾತಣ ಸೂಪರ್ ಮನಿ ಅಪ್ಲಿಕೇಶನ್ ಕ್ರೆಡಿಟ್ ಆ್ಯಪ್ ಅನ್ನು ಹಿಂದಿಕ್ಕಿರುವುದು. ವರದಿಗಳನ್ನು ನಂಬುವುದಾದರೆ, ಮಾರ್ಚ್ ತಿಂಗಳು ಯುಪಿಐಗೆ ಉತ್ತಮ ತಿಂಗಳಾಗಿದೆ. ಈಗಾಗಲೇ ಪಾವತಿ ಅಂಕಿ ಅಂಶವು 1 ಲಕ್ಷ ಕೋಟಿ ರೂ. ಗಳನ್ನು ದಾಟಿದ್ದು ಇದೇ ಮೊದಲು. ಮಾರ್ಚ್ 1 ರಂದು UPI ನಲ್ಲಿ 1,01,628 ಕೋಟಿ ರೂ. ಗಳ ವಹಿವಾಟು ದಾಖಲಾಗಿದೆ.

ನವೆಂಬರ್ ಆರಂಭದಲ್ಲಿ, ಸಚಿನ್ ಬನ್ಸಾಲ್ ಅವರ ಫಿನ್‌ಟೆಕ್ ಮತ್ತು ಕ್ರೆಡಿಟ್ ಪ್ಲಾಟ್‌ಫಾರ್ಮ್ ನವಿ, ಕ್ರೆಡಿಟ್ ಅನ್ನು ಹಿಂದಿಕ್ಕಿ ದೇಶದ ಟಾಪ್ 4 ಯುಪಿಐ ಅಪ್ಲಿಕೇಶನ್ ಆಯಿತು. ಫೆಬ್ರವರಿ ವರೆಗೆ, ಪ್ರಮುಖ UPI ಪ್ಲಾಟ್‌ಫಾರ್ಮ್ ಮತ್ತು UPI ಮಾರುಕಟ್ಟೆ ನಾಯಕ ಫೋನ್‌ ಪೇ ತಿಂಗಳಿನಿಂದ ತಿಂಗಳಿಗೆ ಪಾವತಿಗಳಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ. ಆದಾಗ್ಯೂ, ನವಿ ಮತ್ತು ಸೂಪರ್ ಮನಿಯಲ್ಲಿ ಬೆಳವಣಿಗೆ ದಾಖಲಾಗಿದೆ.

ಇದನ್ನೂ ಓದಿ
Image
ನೀವು ಏರ್ ಕೂಲರ್ ಖರೀದಿಸುತ್ತಿದ್ದೀರಾ?: ಈ ವಿಷಯ ತಿಳಿಯದೆ ಖರೀದಿಸಬೇಡಿ
Image
ನೀವು ಫೋನ್ ಪೇ ಡಿಲೀಟ್ ಮಾಡಲು ಹೊರಟಿದ್ದರೆ ಅದಕ್ಕೂ ಮುನ್ನ ಈ ಕೆಲಸ ಮಾಡಿ
Image
ರೈಲಿನಲ್ಲಿ ಹೋಗುವಾಗ ಮೊಬೈಲ್ ಅಥವಾ ಪರ್ಸ್ ಹೊರ ಬಿದ್ದರೆ ಏನು ಮಾಡಬೇಕು?
Image
ಹೋಳಿ ಹಬ್ಬದಂದು ಗಿಫ್ಟ್ ಮಾಡಿ 6000mAh ಬ್ಯಾಟರಿಯ ಶಕ್ತಿಶಾಲಿ ಫೋನ್

Air Cooler: ನೀವು ಏರ್ ಕೂಲರ್ ಖರೀದಿಸುತ್ತಿದ್ದೀರಾ?: ಈ ವಿಷಯ ತಿಳಿಯದೆ ಖರೀದಿಸಬೇಡಿ

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಪ್ಲಿಕೇಶನ್ ಕ್ರೆಡಿಟ್ ಸುಮಾರು ಒಂದು ವರ್ಷದಿಂದ 130 ಮಿಲಿಯನ್ ವಹಿವಾಟುಗಳೊಂದಿಗೆ ಮಾರುಕಟ್ಟೆಯಲ್ಲಿ ಟಾಪ್ -5 ಯುಪಿಐ ಪಾವತಿ ಅಪ್ಲಿಕೇಶನ್ ಆಗಿ ಉಳಿದಿದೆ. ಆದಾಗ್ಯೂ, ನವಿ, ಸೂಪರ್ ಮನಿ ಮತ್ತು ಕ್ರೆಡಿಟ್‌ಗಳ ಮಾರುಕಟ್ಟೆ ಪಾಲು ತುಂಬಾ ಕಡಿಮೆಯಾಗಿದೆ ಎಂಬುದು ನಿಜ. ನಾವು ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಮ್​ ನೊಂದಿಗೆ ಹೋಲಿಸಿದರೆ, ಕ್ರೆಡ್, ಸೂಪರ್ ಮನಿ ಮತ್ತು Navi ಯ ವಹಿವಾಟು ಅಂಕಿಅಂಶಗಳು ತುಂಬಾ ಕಡಿಮೆ. ಜನವರಿಯಲ್ಲಿ ನವಿಯ ಮಾರುಕಟ್ಟೆ ಪಾಲು ಶೇ.1.5 ರಷ್ಟಿತ್ತು. ಸೂಪರ್ ಮನಿ ಮಾರುಕಟ್ಟೆ ಪಾಲು ಶೇಕಡಾ 0.9 ರಷ್ಟಿದ್ದರೆ, ಕ್ರೆಡ್ ಶೇಕಡಾ 0.7 ರೊಂದಿಗೆ ನಂತರದ ಸ್ಥಾನದಲ್ಲಿದೆ.

ಗೂಗಲ್‌ನ ಯುಪಿಐ ಅಪ್ಲಿಕೇಶನ್ ಗೂಗಲ್ ಪೇನ ಮಾರುಕಟ್ಟೆ ಪಾಲು ಸುಮಾರು ಶೇಕಡಾ 36 ರಷ್ಟಿದೆ. ಫೋನ್‌ಪೇ ಕೂಡ ಸುಮಾರು 35 ರಿಂದ 37 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ, ಆದರೆ ಪೇಟಿಎಂನ ಪ್ರಸ್ತುತ ಮಾರುಕಟ್ಟೆ ಪಾಲು ಸುಮಾರು 6.7 ಪ್ರತಿಶತದಷ್ಟಿದೆ. ಯುಪಿಐ ಮಾರುಕಟ್ಟೆಯಲ್ಲಿ ಯಾವುದೇ ಒಂದು ಕಂಪನಿಯ ಅನಿಯಂತ್ರಿತತೆಯನ್ನು ತಡೆಗಟ್ಟಲು 2024 ರ ಅಂತ್ಯದ ವೇಳೆಗೆ ಎನ್‌ಪಿಸಿಐ ಕ್ಯಾಪ್ ನಿಯಮವನ್ನು ಯೋಜಿಸಿತ್ತು, ಆದರೆ ಅದು ಇನ್ನೂ ಜಾರಿಗೆ ಬಂದಿಲ್ಲ. ಈ ಯೋಜನೆಯು ಯಾವುದೇ ಒಂದು ಯುಪಿಐ ಅಪ್ಲಿಕೇಶನ್ ಶೇಕಡಾ 30 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದುವುದನ್ನು ನಿಷೇಧಿಸುತ್ತದೆ. ಫೋನ್‌ಪೇ ಮತ್ತು ಗೂಗಲ್ ಪೇ ಒಟ್ಟಾಗಿ ಶೇ 84 ರಷ್ಟು ಯುಪಿಐ ವಹಿವಾಟುಗಳನ್ನು ನಿರ್ವಹಿಸುತ್ತವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ