Tablet: ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ ಈ ಕಂಪನಿ: ಆಪಲ್ ಹಿಂದಕ್ಕೆ

Number One Tablet India: 2025 ರ ಮೊದಲಾರ್ಧದಲ್ಲಿ ಭಾರತೀಯ ಟ್ಯಾಬ್ಲೆಟ್ ಮಾರುಕಟ್ಟೆ ಸಾಗಣೆಯು ಶೇಕಡಾ 32.2 ರಷ್ಟು ಭಾರಿ ಕುಸಿತ ಕಂಡಿದೆ. ಐಡಿಸಿ ದತ್ತಾಂಶದ ಪ್ರಕಾರ, ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ, ಆದರೆ ಲೆನೊವೊ ಮತ್ತು ಆಪಲ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

Tablet: ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ ಈ ಕಂಪನಿ: ಆಪಲ್ ಹಿಂದಕ್ಕೆ
Samsung Tablet
Edited By:

Updated on: Aug 30, 2025 | 7:01 PM

ಬೆಂಗಳೂರು (ಆ. 30): 2025 ರ ಮೊದಲಾರ್ಧದಲ್ಲಿ ಭಾರತೀಯ ಟ್ಯಾಬ್ಲೆಟ್ ಮಾರುಕಟ್ಟೆ ಕುಸಿತ ಕಂಡಿದೆ. ಐಡಿಸಿ (ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್) ದತ್ತಾಂಶವು ಟ್ಯಾಬ್ಲೆಟ್ ಸಾಗಣೆಗಳು ವರ್ಷದಿಂದ ವರ್ಷಕ್ಕೆ ಶೇ. 32.2 ರಷ್ಟು ಕುಸಿದಿದೆ ಎಂದು ತೋರಿಸಿದೆ. ಕುಸಿತದ ಹೊರತಾಗಿಯೂ, ಮೊದಲಾರ್ಧದಲ್ಲಿ 2.15 ಮಿಲಿಯನ್ ಯುನಿಟ್‌ಗಳು ರವಾನೆಯಾಗಿವೆ. ಸ್ಯಾಮ್‌ಸಂಗ್ ಟ್ಯಾಬ್ಲೆಟ್ (Samsung Tablet) ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಕಾಯ್ದುಕೊಂಡಿದೆ ಟ್ಯಾಬ್ಲೆಟ್ ವಿಭಾಗದಲ್ಲಿ ಯಾವ ಕಂಪನಿಗಳು ಟಾಪ್ 5 ರಲ್ಲಿ ಪ್ರಾಬಲ್ಯ ಹೊಂದಿವೆ ಎಂದು ತಿಳಿಯೋಣ.

ಟ್ಯಾಬ್ಲೆಟ್ ವಿಭಾಗದಲ್ಲಿ ಇವು ಟಾಪ್ 5 ಕಂಪನಿಗಳು

ಅಗ್ರೆಸಿವ್ ಆನ್‌ಲೈನ್‌ ಪ್ರಚಾರದ ಮೂಲಕ, ಮಾರುಕಟ್ಟೆ ಕುಸಿತದ ನಡುವೆಯೂ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಕಾಯ್ದುಕೊಂಡಿದೆ, ಕಂಪನಿಯು ಒಟ್ಟು ಮಾರುಕಟ್ಟೆಯಲ್ಲಿ ಸುಮಾರು ಶೇಕಡಾ 41.3 ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‌ಸಂಗ್ ತನ್ನ ಎದುರಾಳಿ ಲೆನೊವೊ ಮತ್ತು ಆಪಲ್‌ನಂತಹ ದೊಡ್ಡ ಕಂಪನಿಗಳನ್ನು ಹಿಂದಿಕ್ಕಿದೆ. ಲೆನೊವೊ 12.3 ಪ್ರತಿಶತ ಪಾಲನ್ನು ಹೊಂದಿರುವ ಎರಡನೇ ಸ್ಥಾನದಲ್ಲಿದ್ದರೆ, ಆಪಲ್ 11.8 ಪ್ರತಿಶತ ಪಾಲನ್ನು ಹೊಂದಿರುವ ಮೂರನೇ ಸ್ಥಾನದಲ್ಲಿದೆ. ಶಿಯೋಮಿ 11.4 ಪ್ರತಿಶತದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ, ಏಸರ್ 9.1 ಪ್ರತಿಶತದೊಂದಿಗೆ ಐದನೇ ಸ್ಥಾನದಲ್ಲಿದೆ.

ಇದನ್ನೂ ಓದಿ
ಪ್‌ಕಾರ್ಟ್‌ನಲ್ಲಿ ವರ್ಷದ ಅತಿದೊಡ್ಡ ಮಾರಾಟ ಶೀಘ್ರದಲ್ಲೇ ಪ್ರಾರಂಭ
ಮಲಗುವ ಮುನ್ನ ಮೊಬೈಲ್ ಡೇಟಾ ಏಕೆ ಆಫ್ ಮಾಡಬೇಕು?: ಶೇ. 99 ಜನರಿಗೆ ಗೊತ್ತಿಲ್ಲ
ಹೆಚ್ಚು ಆಂಟೆನಾ ಹೊಂದಿರುವ ರೂಟರ್ ವೇಗದ ಇಂಟರ್ನೆಟ್ ನೀಡುತ್ತ?
ಜಿಯೋದಿಂದ ದೊಡ್ಡ ರಿಲೀಫ್: ರೀಚಾರ್ಜ್ ವ್ಯಾಲಿಡಿಟಿ ಹೆಚ್ಚಳ

ಸಾಗಣೆಗಳು ಏಕೆ ಕಡಿಮೆಯಾದವು?

ಭಾರತೀಯ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ವಾಣಿಜ್ಯ ಬೇಡಿಕೆಯಲ್ಲಿನ ಇಳಿಕೆಯಿಂದಾಗಿ, ವಿಶೇಷವಾಗಿ ಸರ್ಕಾರಿ ಅನುದಾನಿತ ಶಿಕ್ಷಣ ಕಾರ್ಯಕ್ರಮಗಳಲ್ಲಿನ ಕಡಿತವು ಟ್ಯಾಬ್ಲೆಟ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಐಡಿಸಿ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ (2Q25) ಸಾಗಣೆಗಳು ವರ್ಷದಿಂದ ವರ್ಷಕ್ಕೆ ಶೇ. 42.1 ರಷ್ಟು ಕಡಿಮೆಯಾದರೆ, 2025 ರ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 18.4 ರಷ್ಟು ಕುಸಿತ ಕಂಡುಬಂದಿದೆ. ಮತ್ತೊಂದೆಡೆ, ವಾಣಿಜ್ಯ ಸಾಗಣೆಗಳು ವರ್ಷದಿಂದ ವರ್ಷಕ್ಕೆ ಶೇ. 61.7 ರಷ್ಟು ಕುಸಿದಿವೆ, ಮುಖ್ಯವಾಗಿ ಶಿಕ್ಷಣ ಟೆಂಡರ್‌ನಲ್ಲಿ ಶೇ. 66.7 ರಷ್ಟು ಕುಸಿತ ಮತ್ತು ಉದ್ಯಮ ಬೇಡಿಕೆಯಲ್ಲಿ ಶೇ. 26.2 ರಷ್ಟು ಕುಸಿತ ಆಗಿದೆ.

Flipkart Big Billion Days 2025: ಫ್ಲಿಪ್‌ಕಾರ್ಟ್‌ನಲ್ಲಿ ವರ್ಷದ ಅತಿದೊಡ್ಡ ಮಾರಾಟ ಶೀಘ್ರದಲ್ಲೇ ಪ್ರಾರಂಭ: ಸ್ಮಾರ್ಟ್​ಫೋನ್ಸ್ ಮೇಲೆ ಬಿಗ್ ಡಿಸ್ಕೌಂಟ್

ಈ ವಸ್ತುಗಳು ಬೇಡಿಕೆಯನ್ನು ಹೆಚ್ಚಿಸಿದವು

ಸಾಗಣೆಗಳು ಕುಸಿದಿವೆ ಆದರೆ ಗ್ರಾಹಕ ಟ್ಯಾಬ್ಲೆಟ್ ಮಾರುಕಟ್ಟೆ ಮೊದಲಾರ್ಧದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 20.5 ರಷ್ಟು ಬೆಳೆದಿದೆ. ಬಲವಾದ ಮಾರಾಟ ತಂತ್ರ, ಅಮೆಜಾನ್ ಪ್ರೈಮ್ ಡೇ ಸೇಲ್, ಫ್ಲಿಪ್​ಕಾರ್ಟ್ ಸೇಲ್ ನಂತಹ ಮಾರಾಟ ಅಭಿಯಾನಗಳು ಮತ್ತು ಸತತ ಶಾಲಾ ಪ್ರಚಾರಗಳು ಇ-ಕಾಮರ್ಸ್ ಮತ್ತು ಚಿಲ್ಲರೆ ಅಂಗಡಿಗಳಿಂದ ಮಾರಾಟವನ್ನು ಹೆಚ್ಚಿಸಿವೆ. ದೊಡ್ಡ ಡಿಸ್​ಪ್ಲೇಗಳು, ಸ್ಟೈಲಸ್ ಸಾಧನಗಳು ಮತ್ತು ಕಡಿಮೆ-ವೆಚ್ಚದ ಪ್ರವೇಶ ಮಟ್ಟದ ಮಾದರಿಗಳಲ್ಲಿನ ಅಧಿಕ ಆಸಕ್ತಿಯು ಬೇಡಿಕೆಯನ್ನು ಹೆಚ್ಚಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S11 ಸರಣಿ

ದಕ್ಷಿಣ ಕೊರಿಯಾದ ಟೆಕ್ ದೈತ್ಯ ತನ್ನ ಮುಂದಿನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ತನ್ನ ಹೊಸ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಬಹುದು, ಇದು ಸೆಪ್ಟೆಂಬರ್ ಆರಂಭದಲ್ಲಿ ನಡೆಯಲಿದೆ ಎಂದು ದೃಢಪಡಿಸಲಾಗಿದೆ. ಈ ಸರಣಿಯು ಸ್ಟ್ಯಾಂಡರ್ಡ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S11 ಮತ್ತು ಗ್ಯಾಲಕ್ಸಿ ಟ್ಯಾಬ್ S11 ಅಲ್ಟ್ರಾವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Sat, 30 August 25