ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈ ವರ್ಷ ಅತಿ ಹೆಚ್ಚು ಫೀಚರ್ಗಳನ್ನು ಪರಿಚಯಿಸಿದೆ. ಇನ್ನೂ ಕೂಡ ಅನೇಕ ಫೀಚರ್ಗಳು ಬರಲು ಸಾಲು ನಿಂತಿದ್ದು ಪರೀಕ್ಷಾ ಹಂತದಲ್ಲಿದೆ. ವಾಟ್ಸ್ಆ್ಯಪ್ ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್ ಮತ್ತು ಐಫೋನ್ ಎರಡಕ್ಕೂ ಸಪೋರ್ಟ್ ಮಾಡುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಐಫೋನ್ ಎಂದರೆ ದುಬಾರಿ ಎನ್ನುತ್ತಿದ್ದ ಜನರು ಈಗ ಇದನ್ನೇ ಖರೀದಿ ಮಾಡುತ್ತಿದ್ದಾರೆ. ಯಾಕೆಂದರೆ ಮೊದಲು ಐಫೋನ್ ಖರೀದಿಸುವಷ್ಟು ಮೊತ್ತ ಅಥವಾ ಈಗಿರುವ ಹಾಗೆ ಆಫರ್ಗಳು, ಡಿಸ್ಕೌಂಟ್ ಆಯ್ಕೆ ಇರಲಿಲ್ಲ. ಜೊತೆಗೆ ಆಂಡ್ರಾಯ್ಡ್ ಬಳಕೆ ಮಾಡುತ್ತಿದ್ದವರಿಗೆ ಐಫೋನ್ ಉಪಯೋಗುಸುವುದು ಕಷ್ಟವಾಗುತ್ತಿತ್ತು. ಆದರೀಗ ಐಫೋನ್ (iPhone) ಹಿಂದಿನ ರೀತಿ ಇಲ್ಲ. ಅನೇಕ ವಿಚಾರಗಳಲ್ಲಿ ಗ್ರಾಹಕರ ಫ್ರೆಂಡ್ಲಿ ಫೋನಾಗಿ ಬಿಟ್ಟಿದೆ.
ಮುಖ್ಯವಾಗಿ ಈ ಹಿಂದೆ ಆಂಡ್ರಾಯ್ಡ್ ಮೊಬೈಲ್ನಲ್ಲಿದ್ದ ಫೋಟೋ, ವಿಡಿಯೋ, ಕಾಂಟೆಕ್ಟ್, ವಾಟ್ಸ್ಆ್ಯಪ್ ಚಾಟ್ ಅನ್ನು ಐಫೋನ್ಗೆ ಕಳುಹಿಸುವುದು ಅಸಾಧ್ಯವಾಗಿತ್ತು. ಬಳಿಕ ಒಂದು ಆಯ್ಕೆ ನೀಡಿದರೂ ಅದುಕೂಡ ಸುಲಭದ್ದಾಗಿರಲಿಲ್ಲ. ಆದರೀಗ ಇವೆಲ್ಲವೂ ಅತ್ಯಂತ ಸುಲಭ. ಆ್ಯಪಲ್ ಬಳಕೆದಾರರು ಆಂಡ್ರಾಯ್ಡ್ ಫೋನ್ನಿಂದ ತಮ್ಮ ಐಫೋನ್ಗೆ ಯಾವುದೇ ಫೈಲ್ ಅನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.
ಈ ಬಗ್ಗೆ ವಾಟ್ಸ್ಆ್ಯಪ್ ಇತ್ತೀಚೆಗಷ್ಟೆ ಮಾಹಿತಿ ನೀಡಿದ್ದು, ಐಫೋನ್ ಬಳಕೆದಾರರು ಆಂಡ್ರಾಯ್ಡ್ ಫೋನ್ನಲ್ಲಿದ್ದ ತಮ್ಮ ಡೇಟಾವನ್ನು ಟ್ರಾನ್ಫರ್ ಮಾಡಬಹುದು. ಹಾಗೆಯೆ ಐಫೋನ್ನಲ್ಲಿದ್ದ ವಾಟ್ಸ್ಆ್ಯಪ್ ಡಾಟಾವನ್ನು ಐಫೋನ್ಗೂ ವರ್ಗಾವಣೆ ಮಾಡಬಹುದು ಎಂದು ಹೇಳಿತ್ತು. ನಿಮ್ಮ ಪ್ರೊಫೈಲ್ ಪೋಟೋ, ವೈಯಕ್ತಿಕ ಚಾಟ್, ಗ್ರೂಪ್ ಚಾಟ್, ಚಾಟ್ ಹಿಸ್ಟರಿ, ಮಿಡಿಯಾ ಫೈಲ್ ಮಾತ್ರವಲ್ಲದೆ ಸೆಟ್ಟಿಂಗ್ಸ್ ಕೂಡ ವರ್ಗಾವಣೆ ಆಗುತ್ತಿದೆ.
ಆಂಡ್ರಾಯ್ಡ್ನಿಂದ ಐಫೋನ್ಗೆ ಡೇಟಾ ವರ್ಗಾವಣೆ ಹೇಗೆ?:
Published On - 12:26 pm, Sun, 23 October 22