ಸ್ಮಾರ್ಟ್‌ಫೋನ್‌ನಲ್ಲಿ (Smartphone) ಕಾಂಟಾಕ್ಟ್ ಎನ್ನುವುದು ಅತ್ಯಂತ ಹೆಚ್ಚು ಪ್ರಮುಖವಾದದ್ದು. ನಮ್ಮ ಕುಟುಂಬದವರು, ಸ್ನೇಹಿತರಿಂದ ಹಿಡಿದು ಅಗತ್ಯ ವ್ಯಕ್ತಿಗಳ ನಂಬರ್ ಸೇವ್ ಮಾಡಿ ಇಟ್ಟಿರುತ್ತವೆ. ಆದರೆ, ಫೋನ್ ಕಳೆದುಹೋದಾಗ, ಹಾನಿಗೊಳಗಾದಾಗ, ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಅಥವಾ ತಪ್ಪಿ ಕಾಂಟೆಕ್ಟ್ ಹೇಗೋ ಡಿಲೀಟ್ ಆದಾಗ ಅದನ್ನು ಪುನಃ ಪಡೆಯುವುದು ದೊಡ್ಡ ಸವಾಲಾಗಿರುತ್ತದೆ. ಯಾಕೆಂದರೆ ಕಾಂಟಾಕ್ಟ್ (Contact) ಲಿಸ್ಟ್ ನಲ್ಲಿರುವ ಅಷ್ಟೂ ನಂಬರ್ಗಳನ್ನು ಮತ್ತೆ ಪಡೆಯುವುದು ಬಹಳ ಕಷ್ಟದ ಕೆಲಸ. ಆದರೆ ಈಗ ಈ ಸಮಸ್ಯೆಗೂ ಪರಿಹಾರ ಇದೆ. ಕೇವಲ ನಿಮ್ಮ ಇ ಮೇಲ್ ಐಡಿ ಹಾಕಿ ಲಾಗಿನ್ ಆದರೆ, ಎಲ್ಲವೂ ಅಲ್ಲಿ ನಿಮಗೆ ಸಿಗುತ್ತದೆ. ಮತ್ತು ಡಿಫಾಲ್ಟ್ ಸ್ಟೋರೇಜ್ ಇ ಮೇಲ್ ಇದ್ದರೆ, ಪ್ರತಿ ಕಾಂಟಾಕ್ಟ್ ಸೇರಿಸುತ್ತಾ ಹೋದಾಗಲೂ, ಅದು ಫೋನ್‌ನಲ್ಲಿ ಇ ಮೇಲ್‌ಗೆ (E- mail) ಸಿಂಕ್ ಆಗಿ ಅಪ್‌ಡೇಟ್ ಆಗುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.
ಗೂಗಲ್ ಅಕೌಂಟ್ ಮೂಲಕ ನಿಮ್ಮ ಬಳಿ ಡಿಲೀಟ್ ಆದ ಕಾಂಟಾಕ್ಟ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಹೊಸ ಫೋನ್ ಖರೀದಿಸಿದರೆ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆದರೆ ಅಲ್ಲೂ ಸಿಗುತ್ತದೆ. ಇದರ ಮೂಲಕ ನಿಮ್ಮ ಕಾಂಟಾಕ್ಟ್ ಅನ್ನು ಇತರರೊಂದುಗೆ ಶೇರ್ ಕೂಡ ಮಾಡಬಹುದು.
ಅಟೊಮೆಟಿಕ್ ಬ್ಯಾಕಪ್ ಮಾಡುವುದು ಹೇಗೆ?:
ಡುಪ್ಲಿಕೇಟ್ ಕಾಂಟಾಕ್ಟ್ ಡಿಲೀಟ್ ಮಾಡುವುದು ಹೇಗೆ?:
ಸ್ಮಾರ್ಟ್ಫೋನ್ ಮೂಲೆಯಲ್ಲಿ ಅಡಗಿರುವ ನಕಲಿ ಕಾಂಟಾಕ್ಟ್ಗಳನ್ನ ನಿಮಿಷಾರ್ಧದಲ್ಲಿ ಡಿಲೀಟ್ ಮಾಡಬಹುದಾಗಿದೆ. ಅದಕ್ಕಾಗಿ ನಾನಾ ಥರ್ಡ್ ಪಾರ್ಟಿ ಆ್ಯಪ್‌ಗಳು ಪ್ಲೇ ಸ್ಟೋರ್ ನಲ್ಲಿವೆ. ಹಾಗಾಗಿ ಅದನ್ನು ಬಳಸಿ ಸರಿಯಾದ ಕಾಂಟಾಕ್ಟ್ ಯಾವುದು? ಡುಪ್ಲಿಕೇಟ್ ಕಾಂಟಾಕ್ಟ್ ಯಾವುದು ಎಂದು ತಿಳಿಯುವ ಮೂಲಕ ಬೇಡವಾದ ನಂಬರ್ ಅನ್ನು ಡಿಲೀಟ್ ಮಾಡಬಹುದು.
ಈ ಸಮಸ್ಯೆಗೆ ಪರಿಹಾರವನ್ನು ನೀಡುವ ಸಲುವಾಗಿ ಡುಪ್ಲೀಕೆಟ್ ಕಾಂಟಾಕ್ಟ್‌ಗಳನ್ನು ಡಿಲೀಟ್ ಮಾಡುವ ಮತ್ತು ಮರ್ಜ್ ಮಾಡಲು ಅನೇಕ ಆ್ಯಪ್‌ಗಳು ಮತ್ತು ಸೇವೆಗಳು ಲಭ್ಯವಿದ್ದು, ಇವುಗಳ ಬಳಕೆಯಿಂದಾಗಿ ಆಂಡ್ರಾಯ್ಡ್ ಫೋನಿನಲ್ಲಿ ಡುಪ್ಲಿಕೇಟ್ ಕಾಂಟಾಕ್ಟ್ ಗಳನ್ನು ಮ್ಯಾನೆಜ್ ಮಾಡುವುದು ಇನ್ನು ಮುಂದೆ ನಿಮಗೆ ಸುಲಭವಾಗಲಿದೆ.
ನಿಮ್ಮ ಕಾಂಟಾಕ್ಟ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಸಲುವಾಗಿ ಸಿಂಪಲ್ ಮರ್ಜ್ ಡುಪ್ಲಿಕೆಟ್ಸ್ (Simpler Merge Duplicates) ಎನ್ನುವ ಆ್ಯಪ್ ಒಂದನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್ ಮಾಡಿದ ನಂತರದಲ್ಲಿ ಈ ಆ್ಯಪ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಾದ ಮೇಲೆ ಆ್ಯಪ್ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಕಾಂಟಾಕ್ಟ್ ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ.