Tech Tips: ನೀವು ಕಾಲ್-ಮೆಸೇಜ್ ಮಾಡಿದಾಗ ನಂಬರ್ ಕಾಣದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಸೀಕ್ರೆಟ್ ಮೆಸೇಜ್ ಕಳುಹಿಸಲು ಮತ್ತು ಓದಲು ಈ ವೆಬ್‌ಸೈಟ್ ಒಂದು ವೇದಿಕೆಯಾಗಿದ್ದು, ನಿಮ್ಮ ಮನದಾಳದ ಮಾತುಗಳನ್ನು ನಿಮ್ಮ ಸ್ನೇಹಿತರಿಗೆ ತಿಳಿಸಲು ಉಪಯೋಗಿಸಬಹುದು. ಇದರಿಂದ ಮೆಸೇಜ್ ಕಳುಹಿಸಿದರೆ ನಿಮ್ಮ ಹೆಸರು, ಫೋನ್ ನಂಬರ್ ಯಾವುದೂ ಅವರಿಗೆ ಸಿಗುವುದಿಲ್ಲ.

Tech Tips: ನೀವು ಕಾಲ್-ಮೆಸೇಜ್ ಮಾಡಿದಾಗ ನಂಬರ್ ಕಾಣದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 04, 2024 | 2:01 PM

ನೀವು ಯಾರಿಗಾದರು ಸೀಕ್ರೆಟ್ ಆಗಿ ಮೆಸೇಜ್ ಕಳುಹಿಸಬೇಕಾ? ಅಥವಾ ನಿಮ್ಮ ಗುರುತು ಅವರಿಗೆ ಸಿಗದಂತೆ ಕಾಲ್ ಮಾಡಬೇಕು ಅಂದುಕೊಂಡಿದ್ದೀರಾ?. ಹೀಗೆಲ್ಲ ಮಾಡಲು ಒಂದು ಟ್ರಿಕ್ ಇದೆ. ನಿಮ್ಮ ಭಾವನೆಗಳನ್ನು ಅವರಿಗೆ ಹೇಳಬೇಕು. ಆದರೆ, ಅವರಿಗೆ ನೀವು ಯಾರೆಂದು ಗುರುತು ಸಿಗಬಾರದು. ಅಂತವರಿಗೆ ಅನಾಮಧೇಯ ಸಂದೇಶ ಅಥವಾ ರಹಸ್ಯ ಮೆಸೇಜ್, ಕಾಲ್ ಸಹಾಯ ಮಾಡುತ್ತದೆ. ಇದು ನಮ್ಮಲ್ಲಿರುವ ಸ್ಮಾರ್ಟ್​ಫೋನಿಂದಲೇ ಸಾಧ್ಯ ಇದೆ. ಇದಕ್ಕಾಗಿ ನೀವು ಒಂದು ವೆಬ್​ಸೈಟ್​ಗೆ ಭೇಟಿ ನೀಡಬೇಕು. ಅದುವೇ secret.viralsachxd.com. ಸೀಕ್ರೆಟ್ ಮೆಸೇಜ್ ಕಳುಹಿಸಲು ಮತ್ತು ಓದಲು ಈ ವೆಬ್‌ಸೈಟ್ ಒಂದು ವೇದಿಕೆಯಾಗಿದ್ದು, ನಿಮ್ಮ ಮನದಾಳದ ಮಾತುಗಳನ್ನು ನಿಮ್ಮ ಸ್ನೇಹಿತರಿಗೆ ತಿಳಿಸಲು ಉಪಯೋಗಿಸಬಹುದು. ಇದರಿಂದ ಮೆಸೇಜ್ ಕಳುಹಿಸಿದರೆ ನಿಮ್ಮ ಹೆಸರು, ಫೋನ್ ನಂಬರ್ ಯಾವುದೂ ಅವರಿಗೆ ಸಿಗುವುದಿಲ್ಲ. ಅಂತೆಯೆ ನೀವು ಕೂಡ ಇದರಿಂದ ಅನಾಮಿಕರಿಂದ ಮೆಸೇಜ್ ರಿಸೀವ್ ಮಾಡಬಹುದು. ಆದರೆ, ಇಲ್ಲೊಂದು ಟ್ರಿಕ್ ಇದೆ. ಅದೇನೆಂದರೆ ಇಲ್ಲಿ ಖಾತೆ ತೆರೆದವರಿಗೆ ಮಾತ್ರ ಮೆಸೇಜ್ ಕಳುಹಿಸಲು, ರಿಸೀವ್ ಮಾಡಲು ಸಾಧ್ಯವಾಗುತ್ತದೆ.

ಸೀಕ್ರೆಟ್ ಮೆಸೇಜ್ ಹೇಗೆ ಕಳುಹಿಸುವುದು?

  • ನೀವು ಮೊದಲು secret.viralsachxd.com ವೆಬ್‌ಸೈಟ್ ತೆರೆಯಿರಿ.
  • ಇನ್‌ಪುಟ್ ಎಂಬ ಜಾಗದಲ್ಲಿ ನಿಮ್ಮ ಹೆಸರನ್ನು ನಮೂದಿಸಿ ಮತ್ತು ಸೈನ್ ಅಪ್ ಬಟನ್ ಕ್ಲಿಕ್ ಮಾಡಿ.
  • ಈಗ ಒಂದು ಲಿಂಕ್ ತಯಾರಾಗುತ್ತದೆ. ನೀವು ಅದನ್ನು ಕಾಪಿ ಮಾಡಬಹುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ನೀವು ಈ ಲಿಂಕ್ ಅನ್ನು ನಿಮ್ಮ ಇನ್​ಸ್ಟಾಗ್ರಾಮ್ ಬಯೋ ಅಥವಾ ಎಕ್ಸ್ (ಟ್ವಿಟ್ಟರ್) ಬಯೋದಲ್ಲೂ ಹಾಕಬಹುದು.
  • ಹೀಗೆ ಮಾಡಿದಾಗ ನಿಮ್ಮ ಸ್ನೇಹಿತರು ಈ ರಹಸ್ಯ ಸಂದೇಶದ ಲಿಂಕ್ ಅನ್ನು ಸುಲಭವಾಗಿ ಪಡೆಯುತ್ತಾರೆ. ಅಥವಾ ಅವರ ಲಿಂಕ್ ನಿಮಗೆ ಸಿಗಬಹುದು.
  • ಈ ಲಿಂಕ್ ಅನ್ನು ತೆರೆದು ಇನ್​ಪುಟ್ ಜಾಗದಲ್ಲಿ ಅವರು ನಿಮಗೆ ರಹಸ್ಯ ಸಂದೇಶವನ್ನು ಕಳುಹಿಸಬಹುದು.
  • ಟೈಮ್‌ಲೈನ್ ವಿಭಾಗದಲ್ಲಿ ನಿಮಗೆ ಬಂದ ಸಂದೇಶವನ್ನು ಕೂಡ ನೀವು ಸುಲಭವಾಗಿ ನೋಡಬಹುದು.

ಅಂತೆಯೆ ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (VoIP) ಮೂಲಕ ಕೂಡ ಫೋನ್ ಕರೆ ಅಥವಾ ಮೆಸೇಜ್ ಅನ್ನು ಕಳುಹಿಸಬಹುದು. ಇದರಲ್ಲಿ ನೀವು ಕರೆ ಮಾಡಿದಾಗ, ನಿಮ್ಮ ಧ್ವನಿಯನ್ನು ಡಿಜಿಟಲ್ ಸಿಗ್ನಲ್ ಆಗಿ ಪರಿವರ್ತಿಸಲಾಗುತ್ತದೆ. ಇಲ್ಲಿ ನಿಮ್ಮ ಬೊಬೈಲ್ ನಂಬರ್ ಕೂಡ ಕಾಣುವುದಿಲ್ಲ, ಬದಲಾಗಿ ಇಂಟರ್ನೆಟ್ ನಂಬರ್ ಇರುತ್ತದೆ. ಅಂತೆಯೇ, ನಿಮ್ಮ ಡೆಸ್ಕ್‌ಟಾಪ್ ಕಂಪ್ಯೂಟರ್, ಫೋನ್ ಅಥವಾ ಹೆಚ್ಚಿನ ವೇಗದ ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಯಾವುದರಲ್ಲೂ VoIP ಅನ್ನು ಬಳಸಿ ರಹಸ್ಯ ಮೆಸೇಜ್ ಕಳುಹಿಸಬಹುದು.

VoIP ಅನ್ನು ಬಳಸಲು, ಸೈನ್ ಅಪ್ ಮಾಡಬೇಕಾಗುತ್ತದೆ ಅಥವಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಸೈನ್ ಅಪ್ ಮಾಡಿದರೆ ಅದು ನಿಮಗೆ ಡುಪ್ಲಿಕೇಟ್ ಫೋನ್ ಸಂಖ್ಯೆಯನ್ನು ಕೊಡುತ್ತದೆ. ಆಗ ನೀವು ಫೋನ್ ಮಾಡುವವರಿಗೆ ನಿಮ್ಮ ವರ್ಚುವಲ್ ಸಂಖ್ಯೆ ಮಾತ್ರ ತೋರಿಸುತ್ತದೆ ಮತ್ತು ಸೀಕ್ರೆಟ್ ಮೆಸೇಜ್​ನಲ್ಲು ನಿಮ್ಮ ವರಿಜಿನಲ್ ನಂಬರ್ ಕಾಣುವುದಿಲ್ಲ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ