Mosquito Killer Apps: ಮಳೆಗಾಲದಲ್ಲಿ ಸೊಳ್ಳೆಗಳಿಂದ ತೊಂದರೆಯಾಗುತ್ತಿದೆಯೇ?: ಹಾಗಿದ್ರೆ ಈ ಆ್ಯಪ್ ಇನ್​ಸ್ಟಾಲ್ ಮಾಡಿ

|

Updated on: Jul 13, 2023 | 12:12 PM

ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿಯಾಗಿದೆ. ಈಗ ನಾವು ಕಾಯಿಲ್ ಇಲ್ಲದೇ ಸೊಳ್ಳೆಗಳನ್ನು ಓಡಿಸಬಹುದಾದ ಅನೇಕ ಗ್ಯಾಜೆಟ್‌ಗಳನ್ನು ಹೊಂದಿದ್ದೇವೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ತಂತ್ರಜ್ಞರು ನಾವು ನಿತ್ಯ ಬಳಸುವ ಸ್ಮಾರ್ಟ್​ಫೋನ್ ಅನ್ನು ತಮ್ಮ ಪ್ರಯೋಗಕ್ಕೆ ವೇದಿಕೆಯಾಗಿ ಮಾಡಿಕೊಂಡಿದ್ದಾರೆ.

Mosquito Killer Apps: ಮಳೆಗಾಲದಲ್ಲಿ ಸೊಳ್ಳೆಗಳಿಂದ ತೊಂದರೆಯಾಗುತ್ತಿದೆಯೇ?: ಹಾಗಿದ್ರೆ ಈ ಆ್ಯಪ್ ಇನ್​ಸ್ಟಾಲ್ ಮಾಡಿ
Mosquito Killer Apps
Follow us on

ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ (Rainy Season) ಸೊಳ್ಳೆ ಮತ್ತು ನೊಣಗಳ ಸಮಸ್ಯೆ ತುಂಬಾ ಹೆಚ್ಚಾಗಿರುತ್ತದೆ. ಮಳೆಯಿಂದಾಗಿ ನಿಮ್ಮ ಮನೆಯಲ್ಲಿ ನೊಣಗಳು ಸದಾ ಹಾರಾಡುತ್ತಿರುತ್ತದೆ. ಇವು ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದರಲ್ಲೂ ರಾತ್ರಿಯಲ್ಲಿ ನೊಣಗಳೊಂದಿಗೆ ಸೊಳ್ಳೆಗಳು (Mosquito) ಮಾಡುವ ಶಬ್ದ ಅಷ್ಟಿಷ್ಟಲ್ಲ. ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಬರುವ ಅಪಾಯವಿದೆ. ಇವುಗಳನ್ನು ಓಡಿಸಲು ಇಂದಕೂಡ ಅನೇಕ ಮನೆಗಳಲ್ಲಿ ಸೊಳ್ಳೆ ಬತ್ತಿ ಹಚ್ಚುತ್ತಾರೆ. ಆದರೆ, ಈಗ ತಂತ್ರಜ್ಞಾನ (Technology) ಬದಲಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿಯಾಗಿದೆ. ಈಗ ನಾವು ಕಾಯಿಲ್ ಇಲ್ಲದೇ ಸೊಳ್ಳೆಗಳನ್ನು ಓಡಿಸಬಹುದಾದ ಅನೇಕ ಗ್ಯಾಜೆಟ್‌ಗಳನ್ನು ಹೊಂದಿದ್ದೇವೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ತಂತ್ರಜ್ಞರು ನಾವು ನಿತ್ಯ ಬಳಸುವ ಸ್ಮಾರ್ಟ್​ಫೋನ್ ಅನ್ನು ತಮ್ಮ ಪ್ರಯೋಗಕ್ಕೆ ವೇದಿಕೆಯಾಗಿ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಸೊಳ್ಳೆ, ನೊಣಗಳಿಂದ ಆಗುವ ತೊಂದರೆ ನಿವಾರಣೆಗೆ ಹೊಸ ಆವಿಷ್ಕಾರ ಮಾಡಲಾಗಿದೆ. ಅಂತಹ ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿಯೂ ತರಲಾಗಿದೆ. ಈ ಆ್ಯಪ್ ಮೂಲಕ ಸೊಳ್ಳೆಗಳು ಮತ್ತು ನೊಣಗಳನ್ನು ಸುಲಭವಾಗಿ ಓಡಿಸಬಹುದಾಗಿದೆ.

Samsung Galaxy Z Fold 5: ಲೇಟೆಸ್ಟ್ ಫೋಲ್ಡಿಂಗ್ ಸ್ಮಾರ್ಟ್​ಫೋನ್ ಪರಿಚಯಿಸುತ್ತಿದೆ ಸ್ಯಾಮ್​ಸಂಗ್

ಇದನ್ನೂ ಓದಿ
Nothing Phone 2: ಜುಲೈ 21 ರಿಂದ ನಥಿಂಗ್ ಫೋನ್ 2 ಮಾರಾಟ ಆರಂಭ: ಖರೀದಿಗೆ ಕ್ಯೂ ಗ್ಯಾರಂಟಿ
TATA Apple iPhone: ಕರ್ನಾಟಕದಲ್ಲಿ ಆ್ಯಪಲ್ ಐಫೋನ್ ತಯಾರಿಸಲು ಮುಂದಾದ ಟಾಟಾ ಕಂಪನಿ
Oppo Reno 10 5G: ಮಾರುಕಟ್ಟೆಗೆ ಬಂತು ಹೊಸ ಒಪ್ಪೊ ರೆನೋ ಸರಣಿ ಫೋನ್
Apple iPhone 14: ಆ್ಯಪಲ್ ಐಫೋನ್ ಖರೀದಿಗೆ ಅಮೆಜಾನ್ ಪ್ರೈಮ್ ಸೇಲ್ ಭರ್ಜರಿ ಡಿಸ್ಕೌಂಟ್

ಸೊಳ್ಳೆಗಳನ್ನು ಓಡಿಸುವ ಆ್ಯಪ್ ಯಾವುದು?:

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದಕ್ಕಾಗಿ ವಿವಿಧ ಆ್ಯಪ್‌ಗಳು ಲಭ್ಯವಿವೆ. ಇವು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತವೆ. Mosquito Killer, Mosquito Sound, Frequency Generatorಮುಂತಾದ ಹಲವು ಆ್ಯಪ್‌ಗಳಿವೆ. ಈ ಅಪ್ಲಿಕೇಶನ್‌ಗಳು ವಿಭಿನ್ನವಾದ ಧ್ವನಿಯನ್ನು ಹೊರಡಿಸುತ್ತದೆ. ಇದು ತನ್ನ ಶಬ್ದದಿಂದ ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಈ ಆ್ಯಪ್​ನಿಂದ ಬರುವ ಸೌಂಡ್ ಮನುಷ್ಯರಿಗೆ ದೊಡ್ಡದಾಗಿ ಕೇಳುವುದಿಲ್ಲ. ಆದರೆ, ಈ ಸೌಂಡ್ ಸೊಳ್ಳೆಗಳಿಗೆ ಕೇಳುತ್ತದೆ ಎಂದು ಡೆವಲಪರ್​ಗಳು ಹೇಳಿದ್ದಾರೆ. ಈ ಅಪ್ಲಿಕೇಶನ್​ಗಳು ಅತಿ ಹೆಚ್ಚು ಡೌನ್​ಲೋಡ್ ಆಗಿದ್ದು, ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ.

ಈ ಅಪ್ಲಿಕೇಶನ್‌ಗಳು ಎಷ್ಟು ಪರಿಣಾಮಕಾರಿ?:

ಈ ಅಪ್ಲಿಕೇಶನ್‌ಗಳನ್ನು ಬಳಸಿರುವ ಬಳಕೆದಾರರ ರೇಟಿಂಗ್‌ಗಳು ಹೇಳಿಕೊಳ್ಳುವಷ್ಟೆ ಉತ್ತಮವಾಗಿಲ್ಲ. ಕೆಲವು ಬಳಕೆದಾರರು ಈ ಅಪ್ಲಿಕೇಶನ್‌ಗಳಿಗೆ ಕೇವಲ 2 ಅಥವಾ 3 ರೇಟಿಂಗ್‌ಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಈ ಅಪ್ಲಿಕೇಶನ್‌ಗಳು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ ಮತ್ತು ಸೊಳ್ಳೆಗಳನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಆದಾಗ್ಯೂ, ನೀವು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಪ್ರಯತ್ನಿಸಬಹುದು ಎಂದಿದ್ದಾರೆ. ಇನ್ನೂ ಕೆಲ ಬಳಕೆದಾರರು, ಇದು ತುಂಬಾ ಉಪಯುಕ್ತವಾದ ಆ್ಯಪ್ ಎಂದಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Thu, 13 July 23