Mosquito Coil: ಸೊಳ್ಳೆ ಬತ್ತಿಯ ಹೊಗೆ ಸಿಗರೇಟ್​ಗಿಂತಲೂ ಅಪಾಯಕಾರಿ ಗೊತ್ತೇ?

ಬೇಸಿಗೆ ಬಂತೆಂದರೆ ಸೊಳ್ಳೆಕಾಟ ಹೆಚ್ಚು, ಸಂಜೆ 5 ರಿಂದ 7 ಗಂಟೆಯ ಅವಧಿಯಲ್ಲಿ ಮನೆಯ ಬಾಗಿಲುಗಳು ಸ್ವಲ್ಪ ತೆರೆದಿದ್ದರೂ ನೂರಾರು ಸೊಳ್ಳೆಗಳು ಮನೆಹೊಕ್ಕುತ್ತವೆ.

Mosquito Coil: ಸೊಳ್ಳೆ ಬತ್ತಿಯ ಹೊಗೆ ಸಿಗರೇಟ್​ಗಿಂತಲೂ ಅಪಾಯಕಾರಿ ಗೊತ್ತೇ?
ಸೊಳ್ಳೆ ಬತ್ತಿ
Follow us
|

Updated on: May 19, 2023 | 9:00 AM

ಬೇಸಿಗೆ(Summer) ಬಂತೆಂದರೆ ಸೊಳ್ಳೆಕಾಟ ಹೆಚ್ಚು, ಸಂಜೆ 5 ರಿಂದ 7 ಗಂಟೆಯ ಅವಧಿಯಲ್ಲಿ ಮನೆಯ ಬಾಗಿಲುಗಳು ಸ್ವಲ್ಪ ತೆರೆದಿದ್ದರೂ ನೂರಾರು ಸೊಳ್ಳೆಗಳು ಮನೆಹೊಕ್ಕುತ್ತವೆ. ಅದಕ್ಕಾಗಿ ಸೊಳ್ಳೆಯ ಬತ್ತಿಗಳನ್ನು ಹಚ್ಚುತ್ತೀರಿ, ಆದರೆ ಸೊಳ್ಳೆಯ ಬತ್ತಿ ಸೂಸುವ ಹೊಗೆಯು ಸಿಗರೇಟ್​ ಸೇದುವುದಕ್ಕಿಂತ ಹೆಚ್ಚು ಅಪಾಯಕಾರಿ ಎಂಬುದು ತಿಳಿದಿರಲಿ. ಸೊಳ್ಳೆ ಬತ್ತಿಯ ಹೊಗೆಯು ಶ್ವಾಸಕೋಶದ ಕಾಯಿಲೆ ಅಥವಾ COPD ಗೆ ಕಾರಣವಾಗಬಹುದು ಎಂದು ಅಧ್ಯಯನ ಹೇಳಿದೆ.

ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಯು ಸೊಳ್ಳೆ ಬತ್ತಿಯ ಹೊಗೆಯನ್ನು ಉಸಿರಾಡಿದರೆ, ಅದು 100 ಸಿಗರೇಟ್ ಸೇದುವುದಕ್ಕೆ ಸಮಾನವಾಗಿರುತ್ತದೆ. ಇಷ್ಟೇ ಅಲ್ಲ, ಪೂಜೆಯಲ್ಲಿ ಬಳಸುವ ಅಗರಬತ್ತಿಯ ಹೊಗೆ 50 ಸಿಗರೇಟ್ ಸೇದುವುದಕ್ಕೆ ಸಮ ಎಂದು ಹೇಳಲಾಗಿದೆ. ಶ್ವಾಸಕೋಶದ ಕಾಯಿಲೆ ಅಥವಾ COPD ಯಿಂದ ಮುಂಬೈನಲ್ಲಿ ಪ್ರತಿದಿನ ಕನಿಷ್ಠ 6 ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ಈ ಸ್ಥಿತಿಯು ಮುಂಬೈ ಮಾತ್ರವಲ್ಲ, ಭಾರತದ ಅನೇಕ ಭಾಗಗಳಲ್ಲಿ ಅನೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು 2019 ರಲ್ಲಿ 1,00,000 ಜನಸಂಖ್ಯೆಗೆ ಭಾರತದಲ್ಲಿ COPD ಯಿಂದ 98 ಪ್ರತಿಶತದಷ್ಟು ಜನರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಸೊಳ್ಳೆಯ ಬತ್ತಿಗಳು ಹೇಗೆ ಕೆಲಸ ಮಾಡುತ್ತವೆ ಸುರುಳಿಯಂತಿರುವ ಬತ್ತಿಗಳು ಹಾಗೂ ಕಡ್ಡಿಗಳನ್ನು ಮೊದಲು ಪೈರೆಥ್ರಮ್ ಪೇಸ್ಟ್‌ನಿಂದ ತಯಾರಿಸಲಾಗುತ್ತಿತ್ತು. ಪೈರೆಥ್ರಾಯ್ಡ್ ಕೀಟನಾಶಕಗಳನ್ನು ಇಂದಿನ ಸೊಳ್ಳೆ ಬತ್ತಿಗಳಲ್ಲಿ ಹಾಕಲಾಗುತ್ತದೆ ಅಥವಾ ಸಿಟ್ರೊನೆಲ್ಲಾದಂತಹ ಸಸ್ಯಗಳಿಂದ ತಯಾರಿಸಲಾಗುತ್ತದೆ. ಸಿಡ್ನಿ ವಿಶ್ವವಿದ್ಯಾನಿಲಯದ ಪ್ರಕಾರ, ಕೀಟನಾಶಕವನ್ನು ಹೊಂದಿರುವ ಸೊಳ್ಳೆ ಸುರುಳಿಗಳನ್ನು ಸುಡುವುದರಿಂದ ಮಲೇರಿಯಾದಂತಹ ರೋಗಗಳನ್ನು ತಡೆಯಬಹುದು ಅಥವಾ ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೊಳ್ಳೆಗಳು ಕಚ್ಚುವುದನ್ನು ತಡೆಯುವುದು ಹೇಗೆ

1. ಫುಲ್ ಸ್ಲೀವ್ ಶರ್ಟ್ ಮತ್ತು ಲಾಂಗ್ ಪ್ಯಾಂಟ್ ಧರಿಸಿ. 2. ಸೊಳ್ಳೆ ಪರದೆಯೊಂದಿಗೆ ಮಲಗಿ. 3. ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ನಿಂತ ನೀರನ್ನು ತಕ್ಷಣವೇ ತೆಗೆಯಿರಿ. 4. ನಿಮ್ಮ ಮನೆಯ ಸುತ್ತ ಸ್ವಚ್ಛತೆ ಕಾಪಾಡಿ. 5. ಸಂಜೆ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ