AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nothing Phone 2: ಜುಲೈ 21 ರಿಂದ ನಥಿಂಗ್ ಫೋನ್ 2 ಮಾರಾಟ ಆರಂಭ: ಖರೀದಿಗೆ ಕ್ಯೂ ಗ್ಯಾರಂಟಿ

ನಥಿಂಗ್ ಫೋನ್ 2 ಒಟ್ಟು ಎರಡು ಸ್ಟೋರೇಜ್ ಆಯ್ಕೆ ಮೂಲಕ ಮಾರಾಟ ಕಾಣಲಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 44,999 ರೂ. ಇದೆ. ಹಾಗೆಯೆ ಇದರ 12GB RAM + 256GB ವೇರಿಯೆಂಟ್​ಗೆ 49,999 ರೂ. ನಿಗದಿ ಮಾಡಲಾಗಿದೆ.

Nothing Phone 2: ಜುಲೈ 21 ರಿಂದ ನಥಿಂಗ್ ಫೋನ್ 2 ಮಾರಾಟ ಆರಂಭ: ಖರೀದಿಗೆ ಕ್ಯೂ ಗ್ಯಾರಂಟಿ
Nothing Phone 2
Vinay Bhat
|

Updated on: Jul 13, 2023 | 10:42 AM

Share

ಬಿಡುಗಡೆಗು ಮುನ್ನ ಸಾಕಷ್ಟು ಸದ್ದು ಮಾಡಿದ್ದ ನಥಿಂಗ್ (Nothing) ಕಂಪನಿ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 2 (Nothing Phone 2) ಕೊನೆಗೂ ಅನಾವರಣಗೊಂಡಿದೆ. ಇದರ ಆರಂಭಿಕ ಬೆಲೆ 44,999 ರೂ. ಆಗಿದೆ. ಆದರೆ, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಮುಂದಿನ ತಲೆಮಾರಿನ ಈ ಫೋನ್ ಜುಲೈ 21 ರಿಂದ ಮಾರಾಟ ಕಾಣಲಿದ್ದು, ಖರೀದಿಗೆ ಮುಗಿ ಬೀಳುವುದು ಖಚಿತ ಎಂಬ ಮಾತು ಟೆಕ್ ಮೂಲಗಳಿಂದ ಬಂದಿದೆ. ಹಾಗಾದರೆ, ನಥಿಂಗ್ ಫೋನ್ 2 ಫೀಚರ್ಸ್ ಏನೇನಿದೆ?, ಇದರ ಬೆಲೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬೆಲೆ ಮತ್ತು ಆಫರ್ ಏನಿದೆ?:

ನಥಿಂಗ್ ಫೋನ್ 2 ಒಟ್ಟು ಎರಡು ಸ್ಟೋರೇಜ್ ಆಯ್ಕೆ ಮೂಲಕ ಮಾರಾಟ ಕಾಣಲಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 44,999 ರೂ. ಇದೆ. ಹಾಗೆಯೆ ಇದರ 12GB RAM + 256GB ವೇರಿಯೆಂಟ್​ಗೆ 49,999 ರೂ. ನಿಗದಿ ಮಾಡಲಾಗಿದೆ. ಆದರೆ, 8GB RAM ಆಯ್ಕೆಯನ್ನು ನೀವು ಆಕ್ಸಿಸ್ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ ಬಳಸಿಕೊಂಡು ಪಾವತಿಗಳನ್ನು ಮಾಡಿದರೆ ಇದು ಫ್ಲಿಪ್‌ಕಾರ್ಟ್ ಮೂಲಕ 41,999 ರೂಗಳಿಗೆ ಲಭ್ಯವಿರುತ್ತದೆ. ಇದರರ್ಥ ಬಳಕೆದಾರರು 3,000 ರೂಪಾಯಿಗಳ ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಅಂತೆಯೆ 12GB RAM 46,999 ರೂ. ಗೆ ಫ್ಲಿಪ್​ಕಾರ್ಟ್​ನಲ್ಲಿ ಇದೇ ಆಫರ್ ಮೂಲಕ ಖರೀದಿಗೆ ಸಿಗಲಿದೆ.

Nothing Phone 1: ನಥಿಂಗ್ 1 ಸ್ಮಾರ್ಟ್​ಫೋನ್ ಖರೀದಿಗೆ ವಿಶೇಷ ಡಿಸ್ಕೌಂಟ್

ಇದನ್ನೂ ಓದಿ
Image
TATA Apple iPhone: ಕರ್ನಾಟಕದಲ್ಲಿ ಆ್ಯಪಲ್ ಐಫೋನ್ ತಯಾರಿಸಲು ಮುಂದಾದ ಟಾಟಾ ಕಂಪನಿ
Image
Oppo Reno 10 5G: ಮಾರುಕಟ್ಟೆಗೆ ಬಂತು ಹೊಸ ಒಪ್ಪೊ ರೆನೋ ಸರಣಿ ಫೋನ್
Image
Apple iPhone 14: ಆ್ಯಪಲ್ ಐಫೋನ್ ಖರೀದಿಗೆ ಅಮೆಜಾನ್ ಪ್ರೈಮ್ ಸೇಲ್ ಭರ್ಜರಿ ಡಿಸ್ಕೌಂಟ್
Image
Samsung Galaxy Z Fold 5: ಲೇಟೆಸ್ಟ್ ಫೋಲ್ಡಿಂಗ್ ಸ್ಮಾರ್ಟ್​ಫೋನ್ ಪರಿಚಯಿಸುತ್ತಿದೆ ಸ್ಯಾಮ್​ಸಂಗ್

ನಥಿಂಗ್ ಫೋನ್ 2 ಪ್ರಮುಖ ಹೈಲೇಟ್:

– ನಥಿಂಗ್ ಫೋನ್ (2) ಬಲಿಷ್ಠವಾದ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಕಳೆದ ವರ್ಷ ಬಿಡುಗಡೆ ಆದ ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವೇಗವಾದ ಮತ್ತು ಅನೇಕ ದುಬಾರಿ ಫೋನ್‌ಗಳಲ್ಲಿ ಬಳಸಲಾಗುವ ಪ್ರೊಸೆಸರ್ ಇದಾಗಿದೆ.

– ಈ 5G ಫೋನ್ ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಪಡೆದುಕೊಂಡಿದೆ. ಮೂರು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಓಎಸ್ ಅಪ್‌ಗ್ರೇಡ್‌ಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡಲಾಗಿದೆ. Android 13 OS ನಲ್ಲಿ ರನ್ ಆಗುತ್ತಿದೆ.

– ಇದು 45W ವೇಗದ ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜ್‌ಗೆ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಬೇಸರದ ಸಂಗತಿ ಎಂದರೆ, ಕಂಪನಿಯು ಬಾಕ್ಸ್‌ನಲ್ಲಿ ಫೋನ್ ಜೊತೆಗೆ ಚಾರ್ಜರ್ ಅನ್ನು ನೀಡುವುದಿಲ್ಲ. ಆದ್ದರಿಂದ, ನಥಿಂಗ್ ಚಾರ್ಜರ್​ಗಾಗಿ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ.

– ನಥಿಂಗ್ ಫೋನ್ (2) 1,080×2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ರಿಫ್ರೆಶ್ ದರವು ಸ್ವಯಂಚಾಲಿತವಾಗಿ 1Hz ಮತ್ತು 120Hz ನಡುವೆ ನೀಡಲಾಗಿದೆ. 240Hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ SGS ಲೋ ಬ್ಲೂ ಲೈಟ್ ಮತ್ತು HDR10+ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

– 1/1.56-ಇಂಚಿನ ಸೋನಿ IMX890 ಸೆನ್ಸಾರ್​ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದು ಮೃದುವಾದ ವಿಡಿಯೋಗಳಿಗಾಗಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಗೆ ಬೆಂಬಲವನ್ನು ಹೊಂದಿದೆ. 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವು 1/2.76-ಇಂಚಿನ ಸ್ಯಾಮ್‌ಸಂಗ್ JN1 ಸೆನ್ಸಾರ್​ನ EIS ಜೊತೆಗೆ ಬರುತ್ತದೆ. ಇದು 4K ಮಾದರಿಯಲ್ಲಿ ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮಾಲೀಕನ ಮೇಲೆ ಹಲ್ಲೆಗೆ ಯತ್ನ
ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮಾಲೀಕನ ಮೇಲೆ ಹಲ್ಲೆಗೆ ಯತ್ನ
ಡಿಪೋ ಮ್ಯಾನೇಜರ್ ಬೇರೆ ಗ್ರಹದವನಿರಬೇಕು ಎನ್ನುತ್ತಿರುವ ಜನ
ಡಿಪೋ ಮ್ಯಾನೇಜರ್ ಬೇರೆ ಗ್ರಹದವನಿರಬೇಕು ಎನ್ನುತ್ತಿರುವ ಜನ
VIDEO: ಭಾರತ vs ಇಂಗ್ಲೆಂಡ್ ಟೆಸ್ಟ್​: ಹೀಗೂ ಔಟಾಗ್ತಾರಾ?
VIDEO: ಭಾರತ vs ಇಂಗ್ಲೆಂಡ್ ಟೆಸ್ಟ್​: ಹೀಗೂ ಔಟಾಗ್ತಾರಾ?
ಬಾಲಿಯಲ್ಲಿ 65 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಸಾವು
ಬಾಲಿಯಲ್ಲಿ 65 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಸಾವು
9 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಡೊನಾವನ್ ಫೆರೈರ
9 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಡೊನಾವನ್ ಫೆರೈರ