ಇಂದು ಬಹುತೇಕ ಎಲ್ಲರೂ ಸ್ಮಾರ್ಟ್ಫೋನ್ಗಳನ್ನು (Smartphones) ಬಳಸುತ್ತಿದ್ದಾರೆ. ಆನ್‌ಲೈನ್ ವಹಿವಾಟಿನಿಂದ ಹಿಡಿದು ಶಾಪಿಂಗ್‌ವರೆಗೆ ಮತ್ತು ಕಚೇರಿ ಕೆಲಸಗಳನ್ನು ಸಹ ಮೊಬೈಲ್ ಫೋನ್‌ಗಳ ಮೂಲಕವೇ ಮಾಡಲಾಗುತ್ತದೆ. ಬಿಡುವಿನ ಸಮಯದಲ್ಲಿ ಮೊಬೈಲ್ನಲ್ಲಿ ಅನೇಕರು ಹಲವು ಗೇಮ್ಗಳನ್ನು ಕೂಡ ಆಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಗೇಮ್ಸ್ (Games) ಆಡುವಾಗ ಅಥವಾ ಯಾವುದೇ ಕೆಲಸ ಮಾಡುವಾಗ ಬೇರೆ ಯಾವುದಾದರೂ ಆ್ಯಪ್ ಡೌನ್‌ಲೋಡ್ (Download) ಮಾಡುವ ಜಾಹೀರಾತುಗಳು ಬರುತ್ತಲೇ ಇರುತ್ತವೆ. ನೀವು ಅದನ್ನು ಒಂದೇ ಕ್ಲಿಕ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಆದರೆ ಇದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಯೋಚಿಸಿದ್ದೀರಾ?.
ಈ ರೀತಿಯ ಹೆಚ್ಚಿನ ಆ್ಯಪ್ಗಳು ನಕಲಿ ಅಪ್ಲಿಕೇಶನ್ ಆಗಿರುತ್ತದೆ. ನೀವು ಅದನ್ನು ಸರಿಯಾಗಿ ಪರಿಶೀಲಿಸದಿದ್ದರೆ ತೊಂದರೆಗೆ ಒಳಗಾಗುವುದು ಖಚಿತ. ಇದರಿಂದ ನಿಮ್ಮ ಫೋನ್‌ನ ವೈಯಕ್ತಿಕ ಡೇಟಾವನ್ನು ಕದಿಯಬಹುದು. ನೀವು ಜಾಹೀರಾತು ಅಥವಾ ಫಾರ್ವರ್ಡ್ ಮಾಡಿದ ಲಿಂಕ್, ಇಲ್ಲವೆ ಆ್ಯಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದರೆ ಏನೇನು ಪರಿಶೀಲಿಸಬೇಕೆಂದು ತಿಳಿಸಿಕೊಡುತ್ತೇವೆ.
ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ನ ಆ್ಯಪ್ ಸ್ಟೋರ್ ಅಥವಾ ಯಾವುದೇ ಜಾಹೀರಾತು ಲಿಂಕ್‌ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಇದನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅನೇಕ ಬಾರಿ ಅಸಲಿ ಮತ್ತು ನಕಲಿ ಅಪ್ಲಿಕೇಶನ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಜನರು ನಕಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಬಿಡುತ್ತಾರೆ. ಆದ್ದರಿಂದ ಅಪ್ಲಿಕೇಶನ್ ಹೆಸರು ಕಾಗುಣಿತ ಮತ್ತು ಐಕಾನ್ ಅನ್ನು ಸರಿಯಾಗಿ ಪರಿಶೀಲಿಸಿ.
ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅಪ್ಲಿಕೇಶನ್ ಡೆವಲಪರ್ ಯಾರೆಂದು ಪರಿಶೀಲಿಸಿ. ಅದನ್ನು ಗುರುತಿಸಲು ಸುಲಭವಾದ ಮಾರ್ಗವೆಂದರೆ ನಿಜವಾದ ಅಪ್ಲಿಕೇಶನ್ನಲ್ಲಿ ಡೆವಲಪರ್ ವಿವರಗಳು ಎಲ್ಲಿಯಾದರೂ ಸುಲಭವಾಗಿ ಲಭ್ಯವಿರುತ್ತವೆ. ಆದರೆ ನಕಲಿ ಡೆವಲಪರ್ ವಿವರಗಳು ಲಭ್ಯವಿಲ್ಲ. ಅಪೂರ್ಣ ಮಾಹಿತಿಯನ್ನು ಹೊಂದಿರುವ ಡೆವಲಪರ್‌ಗಳು ನಕಲಿಯಾಗಿರಬಹುದು.
ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅದರ ಡೌನ್‌ಲೋಡ್‌ಗಳನ್ನು ಪರಿಶೀಲಿಸಿ. ಏಕೆಂದರೆ ಒರಿಜಿನಲ್ ಆ್ಯಪ್‌ಗಳ ಡೌನ್‌ಲೋಡ್‌ಗಳು ಲಕ್ಷ ಮತ್ತು ಕೋಟಿಗಳಲ್ಲಿವೆ ಮತ್ತು ನಕಲಿ ಅಪ್ಲಿಕೇಶನ್‌ಗಳು ಹೆಚ್ಚಿನ ಡೌನ್‌ಲೋಡ್‌ಗಳನ್ನು ಹೊಂದಿರುವುದಿಲ್ಲ.
ಕೆಲವೊಮ್ಮೆ ನಕಲಿ ಅಪ್ಲಿಕೇಶನ್‌ಗಳು ಕೂಡ ಹೆಚ್ಚಿನ ಸಂಖ್ಯೆಯ ಡೌನ್‌ಲೋಡ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸಲು ಅಪ್ಲಿಕೇಶನ್‌ನ ಕೆಳಗೆ ಬರೆದಿರುವ ವಿಮರ್ಶೆಗಳನ್ನು ಓದಲು ಮರೆಯದಿರಿ. ಅದರ ಮೂಲಕ ನಿಮಗೆ ಸತ್ಯ ತಿಳಿಯುತ್ತದೆ.
ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಾಗ, ಅದು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಪ್ರವೇಶಿಸುತ್ತದೆ. ಇವೆರಡೂ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತವೆ. ಹೀಗಾದಾಗ ನಕಲಿ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಪ್ರವೇಶವನ್ನು ಪಡೆಯಬಹುದು ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ