ಫೇಸ್​ಬುಕ್, ಇನ್​ಸ್ಟಾಗ್ರಾಮ್, ಯೂಟ್ಯೂಬ್ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ: ಹೇಗೆ?

How to earn money from Online: ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಯಾರೂ ರಾತ್ರೋರಾತ್ರಿ ಯಶಸ್ಸನ್ನು ಪಡೆಯುವುದಿಲ್ಲ. ಹಣ ಸಂಪಾದಿಸಲು ಸಮಯ ಮತ್ತು ಶ್ರಮ ಎರಡೂ ತೆಗೆದುಕೊಳ್ಳುತ್ತದೆ.

ಫೇಸ್​ಬುಕ್, ಇನ್​ಸ್ಟಾಗ್ರಾಮ್, ಯೂಟ್ಯೂಬ್ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ: ಹೇಗೆ?
Online money
Follow us
Vinay Bhat
|

Updated on: Mar 15, 2024 | 12:55 PM

ನೀವು ಮನೆಯಲ್ಲಿ ಕುಳಿತು ಹಣ ಗಳಿಸುವ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದೀರಾ?. ಹಾಗಿದ್ದರೆ ಚಿಂತಿಸಬೇಕಾಗಿಲ್ಲ, ನೀವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣವನ್ನು ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋಗಳು ಮತ್ತು ರೀಲ್‌ಗಳನ್ನು ಮಾಡುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೀವು ವಿಡಿಯೋ ಅಥವಾ ರೀಲ್ ಅನ್ನು ಹಂಚಿಕೊಂಡರಷ್ಟೆ ಸಾಲದು. ಹಣ ಸಂಪಾದಿಸಲು ಸಮಯ ಮತ್ತು ಶ್ರಮ ಎರಡೂ ತೆಗೆದುಕೊಳ್ಳುತ್ತದೆ.

ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಯಾರೂ ರಾತ್ರೋರಾತ್ರಿ ಯಶಸ್ಸನ್ನು ಪಡೆಯುವುದಿಲ್ಲ. ಯಶಸ್ಸನ್ನು ಗಳಿಸಲು ನೀವು ನಿಮ್ಮ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು.

ಭಾರತದಲ್ಲಿ Zeiss ಕ್ಯಾಮೆರಾ ಇರುವ ವಿವೋ V30 ಸರಣಿ ಫೋನಿನ ಮಾರಾಟ ಆರಂಭ: ಬೆಲೆ ಎಷ್ಟು?

ಫಾಲೋವರ್ಸ್ ಹೆಚ್ಚಾಗಲು ಏನು ಮಾಡಬೇಕು?

ನಿಮ್ಮ ಖಾತೆಯಲ್ಲಿ ಫಾಲೋವರ್ಸ್ ಹೆಚ್ಚಿಸಲು ಮತ್ತು ವಿಡಿಯೋ-ರೀಲ್‌ಗಳಲ್ಲಿನ ವೀಕ್ಷಣೆಗಳನ್ನು ಹೆಚ್ಚಿಸಲು, ನೀವು ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ, ಜನರಿಗೆ ಉಪಯುಕ್ತವಾದ ವಿಡಿಯೋ ರಚಿಸಿ, ಅಂದರೆ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ವಿಷಯವನ್ನು ರಚಿಸುವುದು.

ಎರಡನೆಯದಾಗಿ, ಇಂದು ನೀವು ವಿಡಿಯೋ ಅಥವಾ ರೀಲ್‌ಗಳನ್ನು ಪೋಸ್ಟ್ ಮಾಡಿದರೆ ನಂತರ 15-20 ದಿನಗಳವರೆಗೆ ಏನನ್ನೂ ಪೋಸ್ಟ್ ಮಾಡದೆ ಇರುವುದಲ್ಲ. ನಿಮಗೆ ಫಾಲೋವರ್ಸ್ ಹೆಚ್ಚಾಗಬೇಕು ಎಂದಾದರೆ, ನಿಯಮಿತವಾಗಿ ವಿಡಿಯೋಗಳನ್ನು ಮಾಡಿ ಮತ್ತು ಪೋಸ್ಟ್ ಮಾಡುತ್ತಿರಬೇಕು. ನಿಮ್ಮ ವಿಡಿಯೋ ವೈರಲ್ ಆಗಬೇಕೆಂದು ನೀವು ಬಯಸಿದರೆ, ಟ್ರೆಂಡಿಂಗ್ ಹಾಡುಗಳಿಂದ ಹಿಡಿದು ಫಿಲ್ಟರ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ. ವೈಯಕ್ತಿಕ ಖಾತೆಯಿಂದ ಬ್ಯೂಸಿನೆಸ್ ಅಥವಾ ಕಂಟೆಟ್ ಕ್ರಿಯೇಟರ್ ಖಾತೆಗೆ ಬದಲಿಸಿ.

ಒಂದೇ ದಿನ ಎರಡು ಆಕರ್ಷಕ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ಮೋಟೋರೊಲ: ಯಾವುದು?

ಹಣ ಗಳಿಸುವುದು ಹೇಗೆ?

ನೀವು ಶೇರ್ ಮಾಡಿದ ವಿಡಿಯೋ ಉತ್ತಮ ವೀವ್ಸ್ ಪಡೆಯಲು ಪ್ರಾರಂಭಿಸಿದಾಗ ಮತ್ತು ಖಾತೆಯಲ್ಲಿ ಉತ್ತಮ ಫಾಲೋವರ್ಸ್ ಇದ್ದಾಗ, ಜಾಹೀರಾತುಗಳ ಮೂಲಕ ಹಣ ಗಳಿಸಲು ಅರ್ಜಿ ಸಲ್ಲಿಸಬಹುದು. ಅದು ಯೂಟ್ಯೂಬ್ ಅಥವಾ ಫೇಸ್​ಬುಕ್ ಆಗಿರಲಿ, ಯಾವುದೇ ಪ್ಲಾಟ್‌ಫಾರ್ಮ್ ನಿಮ್ಮ ವಿಡಿಯೋದಲ್ಲಿ ಜಾಹೀರಾತುಗಳನ್ನು ಹಾಕುತ್ತದೆ. ನಂತರ ನೀವು ಈ ಜಾಹೀರಾತುಗಳ ಮೂಲಕ ಹಣ ಗಳಿಸಲು ಪ್ರಾರಂಭಿಸುತ್ತೀರಿ.

ಜಾಹೀರಾತು ಗಳಿಕೆಯ ಮೂಲವಾಗಿದೆ. ಆದರೆ ಜನರು ಹಣ ಗಳಿಸಲು ಬ್ರ್ಯಾಂಡ್ ಮೊರೆ ಕೂಡ ಹೋಗಬಹುದು. ಆದರೆ ಈ ಬ್ರ್ಯಾಂಡ್ ಮೂಲಕ ಹಣ ಸಂಪಾದಿಸಲು ನಿಮ್ಮ ಖಾತೆಯಲ್ಲಿ ಚಂದಾದಾರರ ಸಂಖ್ಯೆ ಹೆಚ್ಚಿರಬೇಕು. ಏಕೆಂದರೆ ಬ್ರ್ಯಾಂಡ್‌ಗಳು ಕಡಿಮೆ ಚಂದಾದಾರರನ್ನು ಹೊಂದಿರುವವರೊಂದಿಗೆ ಪಾಲುದಾರಿಕೆ ಮಾಡುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್