Tech Tips: ವಾಟ್ಸ್​ಆ್ಯಪ್ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವುದು ಹೇಗೆ ಗೊತ್ತೇ?

|

Updated on: Dec 04, 2023 | 1:46 PM

Gas Cylinder Book via WhatsApp: ನೀವೂ ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯುವ ಯೋಚನೆಯಲ್ಲಿದ್ದರೆ ಈ ಮಾಹಿತಿ ನಿಮಗಾಗಿ. ಈಗ ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಅಥವಾ ಹೊಸ ಸಂಪರ್ಕವನ್ನು ಪಡೆಯಲು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ವಾಟ್ಸ್​ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆಯಬಹುದು. ಇದಕ್ಕಾಗಿ ನೀವು ಈ ಸಣ್ಣ ಪ್ರಕ್ರಿಯೆಯನ್ನು ಅನುಸರಿಸಬೇಕು.

Tech Tips: ವಾಟ್ಸ್​ಆ್ಯಪ್ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವುದು ಹೇಗೆ ಗೊತ್ತೇ?
WhatsApp Gass Cylinder
Follow us on

ನೀವು ಹೊಸ ಗ್ಯಾಸ್ ಸಿಲಿಂಡರ್ (Gas Cylinder) ಸಂಪರ್ಕವನ್ನು ಪಡೆಯಲು ಬಯಸುವಿರಾ?, ನಿಮಗೆ ಗ್ಯಾಸ್ ಏಜೆನ್ಸಿಗೆ ಹೋಗಲು ಸಮಯವಿಲ್ಲವೇ?. ಇದೀಗ ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ಪಡೆಯಬಹುದು. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ನಿಮಗೆ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಮತ್ತು ಹೊಸ ಕನೆಕ್ಷನ್ ಪಡೆಯಲು ಸಹಾಯ ಮಾಡುತ್ತದೆ. ವಾಟ್ಸ್​ಆ್ಯಪ್ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಹೇಗೆ ಪಡೆಯಬಹುದು ಎಂಬುದನ್ನು ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ.

ವಾಟ್ಸ್​ಆ್ಯಪ್​ ಮೂಲಕ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯುವುದು ಹೇಗೆ?

  • ಇದಕ್ಕಾಗಿ ಮೊದಲು ನಿಮ್ಮ ವಾಟ್ಸ್​ಆ್ಯಪ್​ ಆ್ಯಪ್ ಅನ್ನು ತೆರೆಯಿರಿ.
  • ಇಂಡೇನ್ ಗ್ಯಾಸ್‌ನ ವಾಟ್ಸ್​ಆ್ಯಪ್​ ಸಂಖ್ಯೆ 7588888824 ಗೆ ಹೋಗಿ.
  • ನಂತರ “ನ್ಯೂ ಕನೆಕ್ಷನ್” ಎಂದು ಬರೆಯಿರಿ ಮತ್ತು ಅದನ್ನು ಸೆಂಡ್ ಮಾಡಿ.
  • ಈಗ ಇಂಡೇನ್ ಗ್ಯಾಸ್‌ ಕಂಪನಿಯಿಂದ ಉತ್ತರ ಬರಲಿದ್ದು, ಅದರಲ್ಲಿ ನಿಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.
  • ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಪ್ಲೈ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನೀವು ಪರಿಶೀಲನೆ ಕೋಡ್ ಪಡೆಯುತ್ತೀರಿ.

ಭಾರತದಲ್ಲಿ ನಥಿಂಗ್ ಫೋನ್ 2 ದರ ಭರ್ಜರಿ ಇಳಿಕೆ: ಇನ್ಮುಂದೆ ಬೆಲೆ ಹೆಚ್ಚಾಗುವುದಿಲ್ಲ

ಇಲ್ಲಿ ಕೋಡ್ ಅನ್ನು ನಮೂದಿಸಿ ಮತ್ತು ಸಬ್ಮಿಟ್ ಕ್ಲಿಕ್ ಮಾಡಿ, ಇದನ್ನು ಮಾಡಿದ ನಂತರ ಹೊಸ ಸಂಪರ್ಕಕ್ಕಾಗಿ ರಿಕ್ವೆಸ್ಟ್ ಹೋಗುತ್ತದೆ. ಬಳಿಕ ಕಂಪನಿಯಿಂದ ನೀವು ಕರೆಯನ್ನು ಸ್ವೀಕರಿಸುತ್ತೀರಿ. ಕರೆಯಲ್ಲಿ, ಗ್ಯಾಸ್ ಸಂಪರ್ಕಕ್ಕಾಗಿ ಶುಲ್ಕವನ್ನು ಪಾವತಿಸಲು ನಿಮ್ಮನ್ನು ಕೇಳಲಾಗುತ್ತದೆ. ಪಾವತಿಯ ನಂತರ, ಗ್ಯಾಸ್ ಸಿಲಿಂಡರ್ ಮತ್ತು ಇತರ ವಸ್ತುಗಳನ್ನು ನಿಮಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ
ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು ಹೇಗೆ?
ಬೆಲೆ ಘೋಷಿಸದೆ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ಟೆಕ್ನೋ: ಯಾವುದು ನೋಡಿ
ಬೆಸ್ಟ್ ಕ್ಯಾಮೆರಾ ಫೋನ್ ಬೇಕೇ?: ಒಪ್ಪೋ ರೆನೋ 10 ಪ್ರೊ ಫೋನ್ ಬೆಲೆಯಲ್ಲಿ ಇಳಿ
ಪೋಕೋ M6 ಪ್ರೊ 5G ಫೋನಿಗೆ ಭರ್ಜರಿ ಬೇಡಿಕೆ: ಹೊಸ 8GB + 256GB ಬಿಡುಗಡೆ

ಹೊಸ ಸಂಪರ್ಕಕ್ಕಾಗಿ ಈ ದಾಖಲೆಗಳು ಅವಶ್ಯಕ

ವಾಟ್ಸ್​ಆ್ಯಪ್​ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆಯಲು ಕೆಲವು ದಾಖಲೆಗಳು ಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಅಥವಾ ಯಾವುದೇ ಮಾನ್ಯವಾದ ಗುರುತಿನ ಪುರಾವೆ, ನಿಮ್ಮ ಪಡಿತರ ಚೀಟಿ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಹೊಂದಿರಬೇಕು.

ವಾಟ್ಸ್​ಆ್ಯಪ್​ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆಯಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ಸಿಲಿಂಡರ್ ಬುಕ್ ಮಾಡಲು ಈ ಹಂತಗಳು:

Indane ಗ್ರಾಹಕರು ವಾಟ್ಸ್​ಆ್ಯಪ್​ ಮೂಲಕ LPG ಸಿಲಿಂಡರ್ ಅನ್ನು ಬುಕ್ ಮಾಡಲು ಈ ಹಂತಗಳನ್ನು ಅನುಸರಿಸಬೇಕು. ನೀವು ಇಂಡೇನ್ ಗ್ರಾಹಕರಾಗಿದ್ದರೆ LPG ಸಿಲಿಂಡರ್ ಅನ್ನು ಬುಕ್ ಮಾಡಲು ಈ ಹೊಸ ಸಂಖ್ಯೆ 7718955555 ಗೆ ಕರೆ ಮಾಡಬಹುದು. ವಾಟ್ಸ್​ಆ್ಯಪ್​ ಮೂಲಕವೂ ಬುಕ್ ಮಾಡಬಹುದು. ವಾಟ್ಸ್​ಆ್ಯಪ್​ನಲ್ಲಿ REFILL ಎಂದು ಟೈಪ್ ಮಾಡಿ ಮತ್ತು ಈ ಸಂಖ್ಯೆಗೆ ಕಳುಹಿಸಿ 7588888824. ಇಲ್ಲಿಕೂಡ ವಾಟ್ಸ್​ಆ್ಯಪ್​ ಸಂಖ್ಯೆಯನ್ನು ಕಂಪನಿಯೊಂದಿಗೆ ನೋಂದಾಯಿಸಿರಬೇಕು ಎಂಬುದನ್ನು ಗಮನಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ