Best 2 TB Hard Disks In India: ಕಡಿಮೆ ಬೆಲೆಗೆ ಸಿಗುತ್ತಿರುವ 2TB ಸ್ಟೋರೇಜ್ ಸಾಮರ್ಥ್ಯದ ಬೆಸ್ಟ್ ಹಾರ್ಡ್ ಡಿಸ್ಕ್ ಇಲ್ಲಿದೆ ನೋಡಿ

|

Updated on: Feb 23, 2023 | 12:47 PM

2 TB Hard Disks in India: ಸದ್ಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ 2TB ಸ್ಟೋರೇಜ್ ಸಾಮರ್ಥ್ಯವಿರುವ ಅತ್ಯುತ್ತಮ ಎಕ್ಸ್​​ಟರ್ನಲ್ ಹಾರ್ಡ್ ಡಿಸ್ಕ್‌ ಯಾವುದು ಎಂಬುದನ್ನು ನೋಡೋಣ.

Best 2 TB Hard Disks In India: ಕಡಿಮೆ ಬೆಲೆಗೆ ಸಿಗುತ್ತಿರುವ 2TB ಸ್ಟೋರೇಜ್ ಸಾಮರ್ಥ್ಯದ ಬೆಸ್ಟ್ ಹಾರ್ಡ್ ಡಿಸ್ಕ್ ಇಲ್ಲಿದೆ ನೋಡಿ
Hard Disk
Follow us on

ನೀವು ಪರ್ಸನಲ್ ಕಂಪ್ಯೂಟರ್ (Personal Computer) ಅನ್ನು ಬಳಸುತ್ತಿದ್ದರೆ, ಅದು ಕೆಲವೇ ಸಮಯದಲ್ಲಿ ಸ್ಟೋರೇಜ್ ಫುಲ್ ಆಗಿ ಬಿಡುತ್ತದೆ. ಬಳಿಕ ನಿಮ್ಮ ಕಂಪ್ಯೂಟರ್ ಸ್ಲೋ ಆಗುವುದು, ವೇಗವಾದ CPU ಕಾರ್ಯನಿರ್ವಹಿಸದೆ ಇರುವುದು ಈರೀತಿಯ ತೊಂದರೆ ಉಂಟಾಗುತ್ತದೆ. ಹೀಗಾದಾಗ ಕಂಪ್ಯೂಟರ್​ನಲ್ಲಿ ಕೆಲಸ ಮಾಡಲೂ ಸಾದ್ಯವಾಗುವುದಿಲ್ಲ. ಆದರೆ ನೀವು ಎಕ್ಸ್​​ಟರ್ನಲ್ ಹಾರ್ಡ್ ಡಿಸ್ಕ್‌ಗಳನ್ನು (Hard Disk) ಬಳಸಿದಾದ ಈ ಎಲ್ಲ ತೊಂದರೆ ನಿವಾರಣೆ ಆಗಲಿದೆ. ಮಾರುಕಟ್ಟೆಯಲ್ಲೀಗ ಕಡಿಮೆ ಬೆಲೆಗೆ ಎಕ್ಸ್​​ಟರ್ನಲ್ ಹಾರ್ಡ್ ಡಿಸ್ಕ್‌ಗಳು ಲಭ್ಯವಿದೆ. USB ಪೋರ್ಟ್​ಗೆ ಕನೆಕ್ಟ್ ಮಾಡುವ ಮೂಲಕ ಇದನ್ನು ಉಪಯೋಗಿಸಬಹುದು. ಹಾಗಾದರೆ, ಸದ್ಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ 2TB ಸ್ಟೋರೇಜ್ ಸಾಮರ್ಥ್ಯವಿರುವ ಅತ್ಯುತ್ತಮ ಎಕ್ಸ್​​ಟರ್ನಲ್ ಹಾರ್ಡ್ ಡಿಸ್ಕ್‌ ಯಾವುದು ಎಂಬುದನ್ನು ನೋಡೋಣ.

Western Digital Passport External Hard Drive: ವೆಸ್ಟರ್ನ್ ಡಿಜಿಟಲ್ ಪಾಸ್‌ಪೋರ್ಟ್ ಹಾರ್ಡ್ ಡ್ರೈವ್ ಭಾರತೀಯ ಮಾರುಕಟ್ಟೆಯಲ್ಲಿನ ಅತ್ಯುತ್ತಮ 2TB ಹಾರ್ಡ್ ಡಿಸ್ಕ್‌ಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ಸೆಕ್ಯುರಿಟಿ ಅನ್ನು ಹೊಂದಿದ್ದು ವೈಶಿಷ್ಟ್ಯಗಳು ಕೂಡ ಅದ್ಭುತವಾಗಿದೆ. ಇದರ ಬೆಲೆ 9,599 ರೂ.

Seagate Backup Plus Slim 2 TB External HDD: ಡಾಟಾ ಎಂಬುದು ಅತ್ಯಮೂಲ್ಯ ಆಸ್ತಿ. ಅದನ್ನು ಕಳೆದುಕೊಂಡರೆ ಪುನಃ ಸಿಗುವುದು ಸುಲಭವಲ್ಲ. ಹೀಗಾಗಿ ನಿಮ್ಮ ಅಮೂಲ್ಯ ಡಾಟಾವನ್ನು ಸ್ಟೋರ್ ಮಾಡಿಡಲು ಸೀಗೇಟ್ ಬ್ಯಾಕಪ್ ಪ್ಲಸ್ ಸ್ಲಿಮ್ ಎಂಬ 2 TBಯ ಹಾರ್ಡ್ ಡಿಸ್ಕ್ ಇದೆ. ಇದರ ಬೆಲೆ ಕೇವಲ 5,256 ರೂ. ಆಗಿದೆ.

ಇದನ್ನೂ ಓದಿ
IPL 2023: 4K ರೆಸಲ್ಯೂಶನ್​ನಲ್ಲಿ ಐಪಿಎಲ್ 2023 ವೀಕ್ಷಿಸಿ: ಜಿಯೋ ಬಳಕೆದಾರರಿಗೆ ಬಂಪರ್ ಸುದ್ದಿ
Noisefit Crew: ₹1,499ಕ್ಕೆ ದೊರೆಯುತ್ತಿದೆ ಆಕರ್ಷಕ ವಿನ್ಯಾಸದ ನಾಯ್ಸ್​ಫಿಟ್ ಕ್ರೂ ಸ್ಮಾರ್ಟ್​ವಾಚ್
Best AC in India: ಶುರುವಾಗುತ್ತಿದೆ ಬೇಸಿಗೆ ಕಾಲ: ಇಲ್ಲಿದೆ ನೋಡಿ ಕಡಿಮೆ ಬೆಲೆಯ ಅತ್ಯುತ್ತಮ ಎಸಿ
TRAI: ಟ್ರಾಯ್​ನಿಂದ ಶಾಕಿಂಗ್ ನಿರ್ಧಾರ: ಬ್ಯಾನ್​ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್​

Adata HD710 Pro: 2ಟಿಬಿ ಸಾಮರ್ಥ್ಯವಿರುವ ಈ ಹಾರ್ಡ್ ಡಿಸ್ಕ್ MIL-STD-810G 516.6 ಡ್ರಾಪ್ ಟೆಸ್ಟ್ ಪಾಸ್ ಆಗಿ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಇದರ ಬೆಲೆ 7,243 ರೂ.

Google Contacts: ಕಾಂಟಾಕ್ಟ್​ ಸೇವ್ ಮಾಡುವುದು ಮತ್ತಷ್ಟು ಸುಲಭ: ಗೂಗಲ್ ಕಾಂಟಾಕ್ಟ್​ನಿಂದ ಹೊಸ ಫೀಚರ್ ಬಿಡುಗಡೆ

Toshiba HDTB420XK3AA Canvio External Hard Disk: ಇದರ ಬೆಲೆ 4,449 ರೂ.. ತೋಷಿಬಾ ಕ್ಯಾನ್ವಿಯೋ ಎಕ್ಸ್‌ಟರ್ನಲ್ ಹಾರ್ಡ್ ಡಿಸ್ಕ್ ಯುಎಸ್‌ಬಿ 3.0 ಮತ್ತು ಯುಎಸ್‌ಬಿ 2.0 ಎರಡಕ್ಕೂ ಸಪೋರ್ಟ್ ಆಗುವ ಕಾರಣ ಕ್ಷಿಪ್ರ ವೇಗದಲ್ಲಿ ಯಾವುದೇ ತೊಂದರೆಯಿಲ್ಲದೆ ಫೈಲ್ ಟ್ರಾನ್ಸಫರ್ ಆಗುತ್ತದೆ. ಇದರಲ್ಲಿ ಚಿಕ್ಕದಾದ ಎಲ್​ಇಡಿ ಕೂಡ ನೀಡಲಾಗಿದ್ದು ಫೈಲ್ ಮೂವ್ ಆಗುವುದನ್ನು ಸೂಚಿಸುತ್ತದೆ.

Transcend StoreJet: ಭಾರತದಲ್ಲಿ ನೀವು 2TB ಯ ಅತ್ಯುತ್ತಮ ಎಕ್ಸ್​​ಟರ್ನಲ್ ಹಾರ್ಡ್ ಡಿಸ್ಕ್‌ ಹುಡುಕುತ್ತಿದ್ದರೆ ಟ್ರಾನ್ಸೆಂಡ್ ಸ್ಟೋರ್ಜೆಟ್ ಉತ್ತಮ ಆಯ್ಕೆ ಎನ್ನಬಹುದು. ಇದರ ಬೆಲೆ 6,999 ರೂ. ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Thu, 23 February 23