TRAI: ಟ್ರಾಯ್​ನಿಂದ ಶಾಕಿಂಗ್ ನಿರ್ಧಾರ: ಬ್ಯಾನ್​ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್​

ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೇಜ್‌ಗಳ ಬಗ್ಗೆ ಟ್ರಾಯ್‌ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಟ್ರಾಯ್‌ ಹೊರಡಿಸಿರುವ ಆದೇಶದ ಪ್ರಕಾರ, ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ.

TRAI: ಟ್ರಾಯ್​ನಿಂದ ಶಾಕಿಂಗ್ ನಿರ್ಧಾರ: ಬ್ಯಾನ್​ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್​
TRAI
Follow us
Vinay Bhat
|

Updated on:Feb 21, 2023 | 3:16 PM

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಟೆಲಿಕಾಂ ಬಳಕೆದಾರರ ಅನುಕೂಲಕ್ಕೆ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಸ್ಪ್ಯಾಮ್ ಕರೆಗಳು ಅಂದರೆ ಜಾಹೀರಾತು ಕುರಿತಾಗಿ ಬರುವ ಫೋನ್ ಕಾಲ್​ಗಳು ಮತ್ತು ಮೆಸೇಜ್​ಗಳಿಗೆ (Message) ಇದುವರೆಗೆ ಕಡಿವಾಣ ಹಾಕಿರಲಿಲ್ಲ. ಆದರೀಗ ಟ್ರಾಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ (Telemarketing Companies) ಶಾಕ್‌ ನೀಡಿದೆ. ಇವುಗಳು ಟ್ರಾಯ್‌ ಹೊರಡಿಸಿರುವ ಹೊಸ ನಿಯಮವನ್ನು ಮೀರಿದರೆ, 10 ಅಂಕಿಗಳ ಆಯ್ದ ಮೊಬೈಲ್ ಸಂಖ್ಯೆಯನ್ನು ಸ್ಥಗಿತಗೊಳಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಟೆಲಿ ಮಾರ್ಕೆಟಿಂಗ್​ ಕಂಪನಿಗಳು ಬಳಕೆದಾರರಿಗೆ ಹಗಲು ರಾತ್ರಿಯೆನ್ನದೆ ಕರೆ ಮಾಡುತ್ತಿದೆ, ಮೆಸೇಜ್​ಗಳನ್ನು ಕಳುಹಿಸುತ್ತಿದೆ. ಇದು ಬಳಕೆದಾರರಿಗೆ ಸಾಕಷಷ್ಟು ತೊಂದರೆ ಉಂಟು ಮಾಡುತ್ತಿದೆ ಎಂಬುದನ್ನು ಗಮನಿಸಿ ಜಾಹೀರಾತಿಗಾಗಿ ಕರೆ, ಮೆಸೇಜ್​ ಮಾಡುವಂತಹ ವಿಶೇಷ ಸಂಖ್ಯೆಗಳನ್ನು ನಿರ್ಬಂಧಿಸಲು ಟ್ರಾಯ್​​ ಸಂಸ್ಥೆ ಮುಂದಾಗಿದೆ. ಈ ಮೂಲಕ ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೇಜ್‌ಗಳ ಬಗ್ಗೆ ಟ್ರಾಯ್‌ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಟ್ರಾಯ್‌ ಹೊರಡಿಸಿರುವ ಆದೇಶದ ಪ್ರಕಾರ, ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಟೆಲಿಕಾಂ ರೆಗ್ಯುಲೇಟರಿ ಸಂಸ್ಥೆಯು 30 ದಿನಗಳ ಕಾಲಾವಕಾಶ ನೀಡಿದೆ.

ಟೆಲಿಕಾಂ ಸಂಸ್ಥೆಗಳು ಈ ನಿಯಮವನ್ನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದಂತೆ. ಯಾವುದೇ ಸಂಸ್ಥೆಯು 30 ದಿನಗಳ ಸಮಯದ ಮಿತಿಯ ನಂತರವೂ ಪ್ರಚಾರಕ್ಕಾಗಿ 10 ಸಂಖ್ಯೆಗಳ ಸಾಮಾನ್ಯ ಮೊಬೈಲ್ ಸಂಖ್ಯೆಯನ್ನು ಬಳಸಿದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಟ್ರಾಯ್​ ತಿಳಿಸಿದೆ. ಈ ಮೂಲಕ ಬಳಕೆದಾರರು ಮುಂದಿನ ದಿನಗಳಲ್ಲಿ ಯಾವುದೇ ಟೆಲಿಕಾಂ ಕಂಪನಿಗಳಿಂದ ಬರುವಂತಹ ಜಾಹೀರಾತಿನ ಕರೆ ಮತ್ತು ಮೆಸೇಜ್​ಗಳನ್ನು ಬೇಗನೆ ತಿಳಿಯಬಹುದು ಮತ್ತು ಜಾಹೀರಾತಿನ ಕಿರಿಕಿರಿಯೂ ಇಲ್ಲದಂತಾಗುತ್ತದೆ.

ಇದನ್ನೂ ಓದಿ
Image
POCO C55: ಕೇವಲ 9,499 ರೂ. ಗೆ ಹೊಸ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಪೋಕೋ: ಖರೀದಿಗೆ ಕ್ಯೂ ಗ್ಯಾರಂಟಿ
Image
Google Contacts: ಕಾಂಟಾಕ್ಟ್​ ಸೇವ್ ಮಾಡುವುದು ಮತ್ತಷ್ಟು ಸುಲಭ: ಗೂಗಲ್ ಕಾಂಟಾಕ್ಟ್​ನಿಂದ ಹೊಸ ಫೀಚರ್ ಬಿಡುಗಡೆ
Image
Tech Tips: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆ​ಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Image
Tech Tips: ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುವಂತೆ ಮಾಡಬೇಕಾ?: ಇಲ್ಲಿದೆ ಟ್ರಿಕ್

WhatsApp Picture-in-Picture: ವಾಟ್ಸ್​ಆ್ಯಪ್ ವಿಡಿಯೋ ಕರೆಯಲ್ಲಿ ಬಂತು ಹೊಸ ಆಯ್ಕೆ: ಬಳಕೆದಾರರಿಂದ ಭಾರೀ ಮೆಚ್ಚುಗೆ

ಕೇಬಲ್ ಟಿವಿಗಳಲ್ಲಿ ಪ್ರಸಾರ ನಿಲ್ಲಿಸಿವೆ ಝೀ, ಸ್ಟಾರ್, ಸೋನಿ ವಾಹಿನಿಗಳು:

ಹೊಸ ದರ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ಕೇಬಲ್ ಟಿವಿಗಳಲ್ಲಿ ಝೀ ಎಂಟರ್​ಟೈನ್ಮೆಂಟ್, ಸ್ಟಾರ್ ಮತ್ತು ಸೋನಿ ಪಿಕ್ಚರ್ಸ್ ಮೊದಲಾದ ವಾಹಿನಿಗಳ ಪ್ರಸಾರ ನಿಲ್ಲಿಸಲಾಗಿದೆ. ಒಂದು ಅಂದಾಜು ಪ್ರಕಾರ 4.5 ಕೋಟಿಗೂ ಹೆಚ್ಚು ಕೇಬಲ್ ಟಿವಿ ಗ್ರಾಹಕರಿಗೆ ಈ ಹಲವು ವಾಹಿನಿಗಳು ಲಭ್ಯ ಇರುವುದಿಲ್ಲ. ಇದು ಟಿವಿ ಬ್ರಾಡ್​ಕ್ಯಾಸ್ಟರ್ ಮತ್ತು ಕೇಬಲ್ ಆಪರೇಟರುಗಳ ನಡುವಿನ ಭಿನ್ನಾಭಿಪ್ರಾಯದ ಫಲಶ್ರುತಿ. ಫೆಬ್ರುವರಿ 1ರಂದು ಜಾರಿಗೆ ಬಂದಿರುವ ಹೊಸ ಬೆಲೆ ನೀತಿಗೆ ಬದ್ಧರಾಗದ ಕೇಬಲ್ ಆಪರೇಟರುಗಳಿಗೆ ಈ ಕೆಲ ವಾಹಿನಿಗಳು ಪ್ರಸಾರಕ್ಕೆಲಭ್ಯ ಇರುವುದಿಲ್ಲ.

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕಳೆದ ನವೆಂಬರ್​ನಲ್ಲಿ ಟಿವಿ ವಾಹಿನಿಯ ಎಂಆರ್​ಪಿ ದರವನ್ನು ಮರಳಿ ಹೆಚ್ಚಿಸಿತ್ತು. ಇದರಿಂದ ಟಿವಿ ಚಾನಲ್ ಸಬ್​ಸ್ಕ್ರಿಪ್ಶನ್ ದರ ಶೇ. 10-15ರಷ್ಟು ಹೆಚ್ಚಳ ಕಂಡಿವೆ. ಬೊಕೆ ಗ್ರೂಪ್​ನಲ್ಲಿ ಇಲ್ಲದ ಕೆಲ ವೈಯಕ್ತಿಕ ಚಾನಲ್​ಗಳ ದರ ಇನ್ನೂ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕೇಬಲ ಟಿವಿ ಗ್ರಾಹಕರು ಬೆಲೆ ಏರಿಕೆಯ ಹೊರೆ ಹೊರುವಂತಾಗಿದ್ದು, ಪರಿಣಾಮವಾಗಿ ಗ್ರಾಹಕರು ತಮಗೆ ಕೈತಪ್ಪಿ ಹೋಗುತ್ತಿದ್ದಾರೆ ಎಂಬುದು ಕೇಬಲ್ ಟಿವಿ ಉದ್ಯಮಿಗಳ ಅಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Tue, 21 February 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್