Tech Tips: ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ ಇದ್ದರೂ ಆಫ್ಲೈನ್ ತೋರಿಸುವಂತೆ ಮಾಡಬೇಕಾ?: ಇಲ್ಲಿದೆ ಟ್ರಿಕ್
WhatsApp Tricks: ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ನಲ್ಲಿ ಇದ್ದರೂ ಆಫ್ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಟ್ರಿಕ್ಗಳಿವೆ. ಹಾಗಂತೆ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆ ಹೋಗಬೇಕು ಎಂದಿಲ್ಲ. ಬದಲಾಗಿ ವಾಟ್ಸ್ಆ್ಯಪ್ನಲ್ಲೇ ಕೆಲ ಸೆಟ್ಟಿಂಗ್ಗಳನ್ನು ಬದಲಾಯಿಸಿ ಈರೀತಿ ಮಾಡಬಹುದು.
ಮೆಟಾ (Meta) ಒಡೆತನದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ವಿಶ್ವದಲ್ಲಿ 2.24 ಬಿಲಿಯನ್ ತಿಂಗಳು ಬಳಕೆದಾರರನ್ನು ಹೊಂದಿದೆ. ವಾರಕ್ಕೆ ಒಂದರಂತೆ ಹೊಸ ಫೀಚರ್ಗಳನ್ನು ಪರಿಚತಿಸುವ ವಾಟ್ಸ್ಆ್ಯಪ್ನಲ್ಲಿ (WhatsApp) ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್ಗಳು ಅಡಕವಾಗಿದೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಅಂತೆಯೆ ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ನಲ್ಲಿ (Online) ಇದ್ದರೂ ಆಫ್ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಟ್ರಿಕ್ಗಳಿವೆ. ಹಾಗಂತೆ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆ ಹೋಗಬೇಕು ಎಂದಿಲ್ಲ. ಬದಲಾಗಿ ವಾಟ್ಸ್ಆ್ಯಪ್ನಲ್ಲೇ ಕೆಲ ಸೆಟ್ಟಿಂಗ್ಗಳನ್ನು ಬದಲಾಯಿಸಿ ಈರೀತಿ ಮಾಡಬಹುದು.
ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ನಲ್ಲಿ ಇದ್ದರೂ ಆಫ್ಲೈನ್ ಇರುವಂತೆ ಕಾಣಲಿ ಈ ಕೆಳಗಿನ ಸೂತ್ರ ಅನುಸರಿಸಿ.
- ಮೊದಲಿಗೆ ನಿಮ್ಮ ವಾಟ್ಸ್ಆ್ಯಪ್ ಅನ್ನು ಹೊಸ ವರ್ಷನ್ಗೆ ಅಪ್ಡೇಟ್ ಮಾಡಿಕೊಳ್ಳಿ.
- ಆ ಬಳಿಕ, ವಾಟ್ಸ್ಆ್ಯಪ್ ತೆರೆಯಿರಿ ಮತ್ತು ಸೆಟ್ಟಿಂಗ್ ಟ್ಯಾಬ್‌ಗೆ ಹೋಗಿ
- ನಂತರ ಅಲ್ಲಿ ಕಾಣಿಸುವ ಪ್ರೈವಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಈಗ ಮೊದಲಿಗೆ ಕಾಣಿಸುವ ಲಾಸ್ಟ್ ಸೀನ್ ಮತ್ತು ಆನ್ಲೈನ್ ಎಂಬ ಆಯ್ಕೆ ಸೆಲೆಕ್ಟ್ ಮಾಡಿರಿ
- ಇಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತದೆ. ನನ್ನ ಲಾಸ್ಟ್ ಸೀನ್ ಯಾರು ನೋಡಬೇಕು ಮತ್ತು ನಾನು ಆನ್ಲೈನ್ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು?
- ಆನ್ಲೈನ್ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು ಎಂಬಲ್ಲಿ Everyone ಹಾಗೂ Same as Last Seen ಎರಡು ಆಯ್ಕೆ ಇದೆ
- ಇಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಸೆಲೆಕ್ಟ್ ಮಾಡಿದರೆ ಆಯಿತು
Tech Tips: ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
ಒಂದೇ ಬಾರಿಗೆ 100 ಫೋಟೋ-ವಿಡಿಯೋ ಕಳುಹಿಸುವುದು ಹೇಗೆ?:
ಮೊನ್ನೆಯಷ್ಟೆ ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ವಿಶೇಷ ಫೀಚರ್ವೊಂದನ್ನು ಬಿಡುಗಡೆ ಮಾಡಿತ್ತು. ಅದುವೇ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವ ಆಯ್ಕೆ. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗುತ್ತು, ಆದರೆ ಈ ಹೊಸ ಫೀಚರ್ನ ಪ್ರಕಾರ ಇದರ ಮಿತಿಯನ್ನು ಹೆಚ್ಚಿಸಲಾಗಿದ್ದು 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಹಾಗಾದರೆ ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ.
- ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ
- ಈಗ ನೀವು ಯಾರಿಗೆ ಫೋಟೋ ಅಥವಾ ವಿಡಿಯೋಗಳನ್ನು ಸೆಂಡ್ ಮಾಡಲು ಬಯಸುತ್ತೀರೊ ಅವರ ಚಾಟ್ ಓಪನ್ ಮಾಡಿ
- ಸ್ಕ್ರೀನ್ ಕೇಳಭಾಗದಲ್ಲಿ ಕಾಣುವ ಲಗತ್ತು ಐಕಾನ್ (ಪೇಪರ್ ಕ್ಲಿಪ್) ಮೇಲೆ ಟ್ಯಾಪ್ ಮಾಡಿ
- ನಂತರ ಫೋಟೋ ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಲು ಪಟ್ಟಿಯಿಂದ “ಗ್ಯಾಲರಿ” ಸೆಲೆಕ್ಟ್ ಮಾಡಿ
- ಇದೀಗ ನೀವು ನಿಮ್ಮ ಫೋಟೋ ಅಥವಾ ವಿಡಿಯೋಗಳನ್ನು ಸ್ಟೋರೇಜ್ ಮಾಡಿರುವ ಫೋಲ್ಡರ್ ತೆರೆಯಿರಿ
- ನಂತರ ನೀವು ಶೇರ್ ಮಾಡಲು ಬಯಸುವ ವಿಡಿಯೋ, ಫೋಟೋವನ್ನು ಟ್ಯಾಪ್ ಮಾಡುವ ಮೂಲಕ ಆಯ್ಕೆ ಮಾಡಿ
- ಮೊದಲ ಫೋಟೋ ಅಥವಾ ವಿಡಿಯೋ ಹೈಲೈಟ್ ಆಗುವವರೆಗೆ ಅದನ್ನು ಪ್ರೆಸ್ ಮಾಡಿ ಹಿಡಿದುಕೊಳ್ಳಬೇಕು
- ನಂತರ ನೀವು ಶೇರ್ ಮಾಡಲು ಬಯಸುವ ಇತರ ಫೋಟೋ-ವಿಡಿಯೋಗಳ ಮೇಲೆ ಟ್ಯಾಪ್ ಮಾಡಬೇಕು
- ಹೀಗೆ ನೀವು ಒಂದು ಭಾರಿಗೆ 100 ಫೋಟೋಗಳು ಅಥವಾ ವಿಡಿಯೋಗಳನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ