ಡ್ರೈವಿಂಗ್ ಲೈಸೆನ್ಸ್ (Driving Licence) ಭಾರತದಲ್ಲಿ ಪ್ರಮುಖ ದಾಖಲೆಯಾಗಿದೆ. ದೇಶದಲ್ಲಿ ವಾಹನವನ್ನು ಚಲಾಯಿಸ ಬೇಕೆಂದರೆ ಕಾನೂನುಬದ್ಧವಾಗಿ ಲೈಸೆನ್ಸ್ ಬೇಕೇಬೇಕು. ಡ್ರೈವಿಂಗ್ ಲೈಸೆನ್ಸ್ ಪಡೆಯಲು, ನೀವು ಸರ್ಕಾರದ (Government) ನಿಯಮದ ಮೂಲಕ ಹೋಗಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿದು ನಂತರ ಪರವಾನಗಿ ಸಿಗುತ್ತದೆ. ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ, ನೀವು ಮೊದಲು ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು. ಇದು ಸರ್ಕಾರದ ವಾಹನ (Vehicle) ಪರವಾನಿಗಿಯ ನಿಯಮ. ಇದಕ್ಕೂ ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ.
ಆದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆನ್‌ಲೈನ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಮನೆಯಿಂದ ಹೊರಹೋಗದೆ ಕೂತಲ್ಲಿಂದಲೇ ಆನ್‌ಲೈನ್‌ನಲ್ಲಿ ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ. ಆದರೆ ನೀವಿಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಆನ್‌ಲೈನ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದರೂ, ನಿಮ್ಮ ಲೈಸೆನ್ಸ್ ಪಡೆಯಲು ನೀವು ಹತ್ತಿರದ ಆರ್ಟಿಒ ಆಫೀಸಿಗೆ ಹೋಗಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೆ, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳಿದಿರಬೇಕು. ನಿಮ್ಮ ವಯಸ್ಸು ಮತ್ತು ಇತರ ಅವಶ್ಯಕತೆಕ ದಾಖಲೆಗಳನ್ನು ಹೊಂದಿರಬೇಕು.
Fire-Boltt Grenade: ಸಖತ್ ಸ್ಟೈಲಿಶ್ ವಿನ್ಯಾಸದಲ್ಲಿ ಫೈರ್ ಬೋಲ್ಟ್ ಸ್ಮಾರ್ಟ್ವಾಚ್
ಯಾರೇ ಆದರು ಡ್ರೈವಿಂಗ್ ಲೈಸೆನ್ಸ್ ಅವಧಿ ಮುಕ್ತಾಯದ ಒಂದು ವರ್ಷದ ಮುಂಚೆ ಅಥವಾ ಅವಧಿ ಮುಗಿದ ಒಂದು ವರ್ಷದ ಅವಧಿಯೊಳಗೆ ಅಪ್ಲೈ ಮಾಡಬೇಕು. ಒಂದು ವೇಳೆ ಲೈಸೆನ್ಸ್ ಅವಧಿ ಮುಗಿದ ಒಂದು ವರ್ಷದ ಮೇಲೆ ರಿನೀವಲ್ ಅರ್ಜಿ ಫೈಲ್ ಮಾಡಿದರೆ ಮತ್ತೊಮ್ಮೆ ಲರ್ನರ್ಸ್ ಡ್ರೈವಿಂಗ್ ಪರೀಕ್ಷೆ ತೆಗೆದುಕೊಳ್ಳಬೇಕು. ಆಗ ಹೊಸ ಅರ್ಜಿದಾರ ಎಂದು ಪರಿಗಣಿಸಲಾಗುತ್ತದೆ. ಅವಧಿ ಮುಗಿದ ಲೈಸೆನ್ಸ್ ಅಥವಾ ಡಿಎಲ್ ಇಲ್ಲದೆ ವಾಹನ ಚಲಾಯಿಸಿದರೆ ರೂ. 5000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ನೀವು ನವೀಕರಣಕ್ಕೆ ಅರ್ಜಿ ಹಾಕಿದ್ದಲ್ಲಿ ಲೈಸೆನ್ಸ್ ಬದಲಿಗೆ ಅರ್ಜಿ ಸಲ್ಲಿಸಿದ ದೃಢೀಕರಣ ಪತ್ರದೊಂದಿಗೆ ವಾಹನ ಚಲಾಯಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ