Tech Tips: ನಂಬರ್ ಸೇವ್ ಮಾಡದೆ ವಾಟ್ಸ್ಆ್ಯಪ್ನಲ್ಲಿ ಕಾಲ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
WhatsApp Tips: ಮೊಬೈಲ್ ಫೋನ್‌ನಲ್ಲಿ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಕರೆ ಮಾಡುವಂತೆಯೇ, ಈಗ ನೀವು ನಂಬರ್ ಅನ್ನು ಸೇವ್ ಮಾಡದೆ ನೇರವಾಗಿ ವಾಟ್ಸ್ಆ್ಯಪ್ ನಿಂದ ಕರೆ ಮಾಡಬಹುದು. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ನಂಬರ್ ಸೇವ್ ಮಾಡದೆ ಕಾಲ್ಗಳನ್ನು ಮಾಡುವಲ್ಲಿ ತೊಂದರೆಗಳಿದ್ದವು. ಈಗ ವಾಟ್ಸ್ಆ್ಯಪ್ ಈ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ.

(ಬೆಂಗಳೂರು ಮಾ, 11): ವಿಶ್ವದಾದ್ಯಂತ ಇಂದು ವಾಟ್ಸ್ಆ್ಯಪ್ (WhatsApp) ಬಳಸುವವರ ಸಂಖ್ಯೆ ಕೋಟಿಯಲ್ಲಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಆಕರ್ಷಕ ಫೀಚರ್ಗಳನ್ನು ತರುವ ಕಾರಣ ಈ ಆ್ಯಪ್ ಜನಸ್ನೇಹಿ ಆಗಿಬಿಟ್ಟಿದೆ. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ನಂಬರ್ ಸೇವ್ ಮಾಡದೆ ಕಾಲ್ಗಳನ್ನು ಮಾಡುವಲ್ಲಿ ತೊಂದರೆಗಳಿದ್ದವು. ಇದಕ್ಕಾಗಿ, ನೀವು ಮೊದಲು ನಿಮ್ಮ ಫೋನ್‌ನಲ್ಲಿ ಸಂಖ್ಯೆಯನ್ನು ಸೇವ್ ಮಾಡಬೇಕಾಗಿತ್ತು, ನಂತರವೇ ನೀವು ವಾಟ್ಸ್ಆ್ಯಪ್ ಕರೆಗಳು ಅಥವಾ ಸಂದೇಶಗಳನ್ನು ಕಳುಹಿಸಬೇಕಾಗುತ್ತದೆ. ಆದರೆ ಈಗ ವಾಟ್ಸ್ಆ್ಯಪ್ ಈ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಮೊಬೈಲ್ ಫೋನ್‌ನಲ್ಲಿ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಕರೆ ಮಾಡುವಂತೆಯೇ, ಈಗ ನೀವು ನಂಬರ್ ಅನ್ನು ಸೇವ್ ಮಾಡದೆ ನೇರವಾಗಿ ವಾಟ್ಸ್ಆ್ಯಪ್ ನಿಂದ ಕರೆ ಮಾಡಬಹುದು.
- ಇದಕ್ಕಾಗಿ, ಮೊದಲು ವಾಟ್ಸ್ಆ್ಯಪ್ ತೆರೆಯಿರಿ. ಈಗ ಕರೆ ವಿಭಾಗಕ್ಕೆ ಹೋಗಿ. ಇದಾದ ನಂತರ, ಮೇಲಿನ ‘+’ ಐಕಾನ್ ಮೇಲೆ ಟ್ಯಾಪ್ ಮಾಡಿ. ಈಗ ‘ಕಾಲ್ ಎ ನಂಬರ್’ ಆಯ್ಕೆಯನ್ನು ಆರಿಸಿ. ಈಗ ಡಿಸ್ ಪ್ಲೇ ಮೇಲೆ ಡಯಲಿಂಗ್ ಪ್ಯಾಡ್ ತೆರೆಯುತ್ತದೆ.
- ಸಂಖ್ಯೆಯನ್ನು ನಮೂದಿಸಿದ ನಂತರ, ಅದು ವಾಟ್ಸ್ಆ್ಯಪ್ ನಲ್ಲಿ ಲಭ್ಯವಿದೆಯೇ ಎಂದು ನೀವು ಪರಿಶೀಲಿಸಬಹುದು. ಇದರ ನಂತರ ನೀವು ನೇರವಾಗಿ ಕರೆ ಮಾಡಬಹುದು.
- ಇದರ ಹೊರತಾಗಿ, ನೀವು ಇನ್ನೊಂದು ವಿಧಾನವನ್ನು ಸಹ ಬಳಸಬಹುದು. ನೀವು ಒಂದು ಸಂಖ್ಯೆಯನ್ನು ಹೊಂದಿದ್ದರೆ ಮತ್ತು ಅದನ್ನು ಸೇವ್ ಮಾಡದೆ ಕರೆ ಮಾಡಲು ಬಯಸಿದರೆ, ಇದು ಬ್ರೌಸರ್ ಮೂಲಕವೂ ಸಾಧ್ಯ.
- ಮೊದಲಿಗೆ, ನಿಮ್ಮ ಫೋನ್‌ನ ಬ್ರೌಸರ್ ಅನ್ನು ತೆರೆಯಿರಿ, ಉದಾಹರಣೆಗೆ ಕ್ರೋಮ್ ಬೌಸರ್. ಇದಾದ ನಂತರ, ಅಡ್ರಸ್ ಲಿಸ್ಟ್ನಲ್ಲಿ https://wa.me/91XXXXXXXXXX ಎಂದು ಟೈಪ್ ಮಾಡಿ. ಈಗ ಗೋ ಒತ್ತಿ ವಾಟ್ಸ್ಆ್ಯಪ್ ತೆರೆಯಿರಿ. ಈಗ ನೀವು ಕರೆ ಮಾಡಬಹುದು ಅಥವಾ ಸಂದೇಶ ಕಳುಹಿಸಬಹುದು.
- ವಾಟ್ಸ್ಆ್ಯಪ್ನ ಈ ಹೊಸ ವೈಶಿಷ್ಟ್ಯವು ಹೊಸ ನಂಬರ್ ಗಳಿಗೆ ಆಗಾಗ್ಗೆ ಚಾಟ್ ಮಾಡಲು ಅಥವಾ ಕರೆ ಮಾಡಲು ಬಯಸುವವರಿಗೆ ಉಪಯುಕ್ತವಾಗಿದೆ.
- ಈ ವೈಶಿಷ್ಟ್ಯವು ಸೇಲ್ಸ್ ಏಜೆಂಟ್‌ಗಳು, ಹೋಟೆಲ್‌ಗಳು, ಗ್ರಾಹಕ ಬೆಂಬಲ ಅಥವಾ ಇತರ ತಾತ್ಕಾಲಿಕ ಸಂಖ್ಯೆಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. ವಾಟ್ಸ್ಆ್ಯಪ್ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ಅನುಭವವನ್ನು ನಿರಂತರವಾಗಿ ಸುಧಾರಿಸುತ್ತಿದೆ.
iPhone: ಟ್ರಂಪ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಟೆಕ್ ಜಗತ್ತು: ಭಾರತದಲ್ಲಿ ಐಫೋನ್‌ಗಳ ಬೆಲೆ ದುಬಾರಿ?
AI ಸಹಾಯದಿಂದ ಗ್ರೂಪ್ ಐಕಾನ್
ಗ್ರೂಪ್ ಚಾಟ್‌ಗಳಿಗಾಗಿ ವಾಟ್ಸ್ಆ್ಯಪ್ ಹೊಸ AI-ಆಧಾರಿತ ಪ್ರೊಫೈಲ್ ಪಿಕ್ಚರ್ ಜನರೇಟರ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಬಹು ವರದಿಗಳು ಬಹಿರಂಗಪಡಿಸಿದೆ. ಈ ವೈಶಿಷ್ಟ್ಯವನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ ಮತ್ತು ಸೀಮಿತ ಬೀಟಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಮೆಟಾ AI ಬಳಸಿ ವೈಯಕ್ತಿಕಗೊಳಿಸಿದ, ವಿಶಿಷ್ಟ ಗ್ರೂಪ್ ಐಕಾನ್‌ಗಳನ್ನು ರಚಿಸಬಹುದು. ಈ ನವೀಕರಣವು ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಯಾವಾಗ ಲಭ್ಯವಿರುತ್ತದೆ? ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಇದು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ