Tech Tips: ಕ್ರಿಕೆಟ್ ನೋಡೋವಾಗ ಮೊಬೈಲ್ ಡೇಟಾ ಉಳಿಸಲು ಬಯಸುವಿರಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Mobile data Saver Tips: ನೀವು ದಿನಕ್ಕೆ 1.5 GB ಪ್ಲಾನ್ ತೆಗೆದುಕೊಂಡರೂ ಅಥವಾ 2-2.5 GB ಪ್ಲಾನ್ ತೆಗೆದುಕೊಂಡರೂ, ಸಂಜೆಯ ಹೊತ್ತಿಗೆ ಹೆಚ್ಚಿನ ಡೇಟಾ ಖಾಲಿಯಾಗಲು ಪ್ರಾರಂಭವಾಗುತ್ತದೆ. ಅಲ್ಲದೆ ಇದು ಕ್ರಿಕೆಟ್ ಸೀಸನ್ ಆಗಿರುವುದರಿಂದ ಡೇಟಾ ನೀರಿನಂತೆ ಹರಿದುಹೋಗುತ್ತದೆ. ಆದರೆ, ನಿಮ್ಮ ಮೊಬೈಲ್ ಡೇಟಾ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಒಂದು ಮಾರ್ಗವಿದೆ.

ಬೆಂಗಳೂರು (ಮಾರ್ಚ್: 03): ಸದ್ಯ ಕ್ರಿಕೆಟ್ ಲೋಕದಲ್ಲಿ ಚಾಂಪಿಯನ್ ಟ್ರೋಫಿ (Champion Trophy) ಪಂದ್ಯಗಳು ನಡೆಯುತ್ತಿದೆ. ಭಾರತ ಕ್ರಿಕೆಟ್ ತಂಡ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಸೆಮೀಸ್ನಲ್ಲಿ ಮಂಗಳವಾರ ಮುಖಾಮುಖಿ ಆಗಲಿದೆ. ನೀವು ಮೊಬೈಲ್ನಲ್ಲಿ ಕ್ರಿಕೆಟ್ ನೋಡುವಾಗ ಆಗಿರಬಹುದು ಅಥವಾ ವಾಟ್ಸ್ಆ್ಯಪ್ ಸ್ಟೇಟಸ್, ಫೇಸ್‌ಬುಕ್-ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ನೋಡುವಾಗ ಹೀಗೆ ಇಂಟರ್ನೆಟ್‌ಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಕೆಲಸಕ್ಕೂ ಡೇಟಾ ಅಗತ್ಯವಿದೆ. ಬ್ರಾಡ್‌ಬ್ಯಾಂಡ್ ಹೊಂದಿರುವವರು ಅನಿಯಮಿತ ಡೇಟಾವನ್ನು ಪಡೆಯುವುದರಿಂದ ಚಿಂತೆಯಿಲ್ಲದೆ ಇರುತ್ತಾರೆ. ಆದರೆ, ಮೊಬೈಲ್ ಇಂಟರ್ನೆಟ್ ಬಳಸುವವರ ಸ್ಥಿತಿ ಶೋಚನೀಯವಾಗಿದೆ.
ನೀವು ದಿನಕ್ಕೆ 1.5 GB ಪ್ಲಾನ್ ತೆಗೆದುಕೊಂಡರೂ ಅಥವಾ 2-2.5 GB ಪ್ಲಾನ್ ತೆಗೆದುಕೊಂಡರೂ, ಸಂಜೆಯ ಹೊತ್ತಿಗೆ ಹೆಚ್ಚಿನ ಡೇಟಾ ಖಾಲಿಯಾಗಲು ಪ್ರಾರಂಭವಾಗುತ್ತದೆ. ಅಲ್ಲದೆ ಇದು ಕ್ರಿಕೆಟ್ ಸೀಸನ್ ಆಗಿರುವುದರಿಂದ ಡೇಟಾ ನೀರಿನಂತೆ ಹರಿದುಹೋಗುತ್ತದೆ. ಆದರೆ, ನಿಮ್ಮ ಮೊಬೈಲ್ ಡೇಟಾ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಒಂದು ಮಾರ್ಗವಿದೆ. ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ, ಮೊಬೈಲ್ ಡೇಟಾ ಬೇಗನೆ ಖಾಲಿಯಾಗುವುದನ್ನು ತಡೆಯಬಹುದು. ಇದಕ್ಕಾಗಿ ನೀವು ಕೆಲವು ಸುಲಭ ಸಲಹೆಗಳನ್ನು ಅನುಸರಿಸಬೇಕು.
ಮೊಬೈಲ್ ಇಂಟರ್ನೆಟ್ ಡೇಟಾವನ್ನು ಹೇಗೆ ಉಳಿಸುವುದು?:
- ಮೊದಲು ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್ ಆಯ್ಕೆಗೆ ಹೋಗಿ.
- ಇದಾದ ನಂತರ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
- ಬಳಿಕ ಇಂಟರ್ನೆಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
- ನಿಮ್ಮ ಇಂಟರ್ನೆಟ್ ವಾಹಕದ ಐಕಾನ್ ಪಕ್ಕದಲ್ಲಿ, ಅಂದರೆ ನೀವು ಬಳಸುತ್ತಿರುವ ಕಂಪನಿಯ ಸಿಮ್ ಪಕ್ಕದಲ್ಲಿ ಸೆಟ್ಟಿಂಗ್ ಆಯ್ಕೆಯನ್ನು ನೀವು ನೋಡುತ್ತೀರಿ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕು.
- ಇದರ ನಂತರ ನೀವು ಡೇಟಾ ಅಲರ್ಟ್ ಮತ್ತು ಮಿತಿ ಆಯ್ಕೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ.
- ಇಲ್ಲಿ ‘ಡೇಟಾ ಮಿತಿಯನ್ನು ಹೊಂದಿಸಿ’ ಆನ್ ಮಾಡಬೇಕು. ಅಲ್ಲದೆ ಡೇಟಾ ಮಿತಿಯನ್ನು ಹೊಂದಿಸಬೇಕಾಗುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಅದನ್ನು 2 ರಿಂದ 5 GB ವರೆಗೆ ಹೊಂದಿಸಬಹುದು.
ನಿಮ್ಮ ಹಳೆಯ ಫೋನ್ನಿಂದ ಬೇಸತ್ತಿದ್ದೀರಾ?: ಈ ವಾರ ಭಾರತದಲ್ಲಿ ಬಿಡುಗಡೆಯಾಗಲಿರುವ 3 ಹೊಸ ಮೊಬೈಲ್
ಡೇಟಾ ಸೇವರ್ ಮೋಡ್ ಆನ್ ಮಾಡಿ:
ಬಹುತೇಕ ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಸೇವರ್ ಅಥವಾ ಲೋ ಡೇಟಾ ಮೋಡ್ ಆಯ್ಕೆ ಇರುತ್ತದೆ. ಇದನ್ನು ಆನ್ ಮಾಡುವುದರಿಂದ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳಿಂದ ಡೇಟಾ ಬಳಕೆ ಕಡಿಮೆಯಾಗುತ್ತದೆ. ಈ ಆಯ್ಕೆಯು ಫೋನ್ ಸೆಟ್ಟಿಂಗ್‌ಗಳಲ್ಲಿನ ‘ಮೊಬೈಲ್ ಡೇಟಾ’ ಅಥವಾ ‘ನೆಟ್‌ವರ್ಕ್’ ವಿಭಾಗದಲ್ಲಿ ಲಭ್ಯವಿದೆ, ಅದನ್ನು ನೀವು ಆನ್ ಮಾಡಬೇಕು.
ಗೂಗಲ್ ಫೋಟೋ ಅಪ್ಲಿಕೇಶನ್ ಬಳಕೆದಾರರೇ ಗಮನಿಸಿ:
- ನಿಮ್ಮ ಫೋನ್‌ನಲ್ಲಿ ಗೂಗಲ್ ಫೋಟೋ ಅಪ್ಲಿಕೇಶನ್ ತೆರೆಯಿರಿ.
- ಅದರ ನಂತರ ಪ್ರೊಫೈಲ್ ಫೋಟೋ ಐಕಾನ್ ಮೇಲೆ ಟ್ಯಾಪ್ ಮಾಡಿ.
- ನಂತರ ಗೂಗಲ್ ಫೋಟೋ Settings ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಬಳಿಕ ಬ್ಯಾಕಪ್ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆಫ್ ಮಾಡಿ.
ಹೀಗೆ ಮಾಡುವುದರಿಂದ, ನಿಮ್ಮ ಗೂಗಲ್ ಕ್ಲೌಡ್‌ನಲ್ಲಿ ಯಾವುದೇ ಹೊಸ ಫೋಟೋಗಳನ್ನು ಸ್ಟೋರೇಜ್ ಮಾಡಲಾಗುವುದಿಲ್ಲ ಮತ್ತು ಇದು ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡುತ್ತದೆ.
ಹಾಗೆಯೆ ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅಪ್ಲಿಕೇಶನ್ ವಿಭಾಗಕ್ಕೆ ಹೋಗಿ. ಹಿನ್ನೆಲೆ ಡೇಟಾವನ್ನು ಬಳಸಲು ಅನುಮತಿ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ. ಇತರ ಅಪ್ಲಿಕೇಶನ್‌ಗಳಿಗೆ ಹಿನ್ನೆಲೆ ಡೇಟಾವನ್ನು ಆಫ್ ಮಾಡಿ.
ಆಟೋ-ಪ್ಲೇ ವಿಡಿಯೋಗಳನ್ನು ಆಫ್ ಮಾಡಿ:
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ನಂತಹ ಅನೇಕ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ವಿಡಿಯೋಗಳನ್ನು ಸ್ವಯಂಚಾಲಿತವಾಗಿ ಪ್ಲೇ ಮಾಡುವ ಆಯ್ಕೆಯನ್ನು ಹೊಂದಿವೆ. ಇದು ಸಂಭವಿಸಿದಾಗ, ಅಪ್ಲಿಕೇಶನ್‌ನಲ್ಲಿ ವಿಡಿಯೋಗಳು ಅಟೊಮೆಟಿಕ್ ಆಗಿ ಪ್ಲೇ ಆಗಲು ಪ್ರಾರಂಭಿಸುತ್ತವೆ ಮತ್ತು ಬಹಳಷ್ಟು ಡೇಟಾ ಖರ್ಚಾಗುತ್ತದೆ. ಈ ಅಪ್ಲಿಕೇಶನ್‌ಗಳ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಆಟೋ-ಪ್ಲೇ ವಿಡಿಯೋಗಳನ್ನು ಆಫ್ ಮಾಡಿ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ