ನಿಮ್ಮ ಹಳೆಯ ಫೋನ್‌ನಿಂದ ಬೇಸತ್ತಿದ್ದೀರಾ?: ಈ ವಾರ ಭಾರತದಲ್ಲಿ ಬಿಡುಗಡೆಯಾಗಲಿರುವ 3 ಹೊಸ ಮೊಬೈಲ್
ನಥಿಂಗ್ ಬ್ರಾಂಡ್‌ನ ಈ ಫೋನ್ ನಾಳೆ ಅಂದರೆ ಮಾರ್ಚ್ 4 ರಂದು ಮಧ್ಯಾಹ್ನ 3:30 ಕ್ಕೆ ಬಿಡುಗಡೆಯಾಗಲಿದೆ. ಈ ಮುಂಬರುವ ಮೊಬೈಲ್‌ಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕ ಪುಟವನ್ನು ಸಹ ರಚಿಸಲಾಗಿದ್ದು, ಈ ಸಾಧನವು ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಹೊಂದಿರುತ್ತದೆ ಎಂದು ತೋರಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಈ ಫೋನ್‌ನ ಬೆಲೆ 23 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಇರಬಹುದು.

ಬೆಂಗಳೂರು (ಮಾ. 03): ತಂತ್ರಜ್ಞಾನವು ತುಂಬಾ ಇಂದು ವೇಗವಾಗಿ ಬದಲಾಗುತ್ತಿದೆ, ಗ್ರಾಹಕರ ಬೇಡಿಕೆಯನ್ನು ಅರ್ಥಮಾಡಿಕೊಂಡು ಹ್ಯಾಂಡ್‌ಸೆಟ್ ಕಂಪನಿಗಳು ಹೊಸ ವೈಶಿಷ್ಟ್ಯಗಳನ್ನು ತರುತ್ತಿವೆ. ಇದೇ ಕಾರಣಕ್ಕೆ ಜನರು ತಮ್ಮಲ್ಲಿರುವ ಫೋನ್‌ಗಳಿಂದ ಬೇಗನೆ ಬೇಸರಗೊಂಡು ಸ್ಮಾರ್ಟ್ಫೋನ್ಗಳನ್ನು (Smartphones) ಅಪ್‌ಗ್ರೇಡ್ ಮಾಡಲು ಮುಂದಾಗುತ್ತಿದ್ದಾರೆ. ನೀವು ಕೂಡ ಹಳೆಯ ಫೋನ್‌ನಿಂದ ಬೇಸತ್ತಿದ್ದರೆ, ಈ ವಾರ ಪೊಕೊ, ವಿವೊ ಮತ್ತು ನಥಿಂಗ್ ಬ್ರಾಂಡ್‌ಗಳ ಹೊಸ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಇಂದು ನಾವು ನಿಮಗೆ ಈ ವಾರ ದೇಶದಲ್ಲಿ ಅನಾವರಣಗೊಳ್ಳಲಿರುವ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು ಮತ್ತು ಸಂಭವನೀಯ ಬೆಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.
ಪೋಕೋ M7 5G ಭಾರತದಲ್ಲಿ ಇಂದು ಬಿಡುಗಡೆ:
ಇಂದು ನಿಮಗಾಗಿ ಪೊಕೊ ಕಂಪನಿಯ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಈ ಫೋನ್ ಮಧ್ಯಾಹ್ನ 12 ಗಂಟೆಗೆ ರಿಲೀಸ್ ಆಗಲಿದೆ. ಆದರೆ ಬಿಡುಗಡೆಗೂ ಮೊದಲು, ಈ ಸಾಧನದಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು ಸೋರಿಕೆಯಾಗಿದೆ. ಈ ಫೋನ್‌ಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕ ಮೈಕ್ರೋಸೈಟ್ ರಚಿಸಲಾಗಿದ್ದು, ಈ ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 4 ನೇ ಜನರೇಷನ್ 2 ಪ್ರೊಸೆಸರ್, 6 ಜಿಬಿ ವರ್ಚುವಲ್ RAM, 6.88-ಇಂಚಿನ ಡಿಸ್ಪ್ಲೇ, 120Hz ರಿಫ್ರೆಶ್ ದರ, 600 ನಿಟ್ಸ್ ಪೀಕ್ ಬ್ರೈಟ್‌ನೆಸ್, 240Hz ಟಚ್ ಸ್ಯಾಂಪ್ಲಿಂಗ್ ದರ, 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಈ ಫೋನ್‌ಗೆ ಶಕ್ತಿ ತುಂಬಲು, ಬಲಿಷ್ಠವಾದ 5160 mAh ಬ್ಯಾಟರಿಯನ್ನು ಒದಗಿಸಲಾಗಿದೆ ಮತ್ತು 33-ವ್ಯಾಟ್ ಚಾರ್ಜರ್ ಸಹ ಲಭ್ಯವಿರುತ್ತದೆ. ಬೆಲೆಯ ಬಗ್ಗೆ ಹೇಳುವುದಾದರೆ, ಫ್ಲಿಪ್‌ಕಾರ್ಟ್‌ನಲ್ಲಿ ಮಾಡಿದ ಮೈಕ್ರೋಸೈಟ್ ಪ್ರಕಾರ, ಈ ಫೋನ್‌ನ ಆರಂಭಿಕ ಬೆಲೆ 10 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಬಹುದು.
Instagram Reels App: ಇನ್ಸ್ಟಾಗ್ರಾಮ್ನಿಂದ ಬಹುದೊಡ್ಡ ನಿರ್ಧಾರ: ರೀಲ್ಸ್ಗಾಗಿ ಪ್ರತ್ಯೇಕ ಆ್ಯಪ್ ಬಿಡುಗಡೆ
ನಥಿಂಗ್ ಫೋನ್ 3a:
ನಥಿಂಗ್ ಬ್ರಾಂಡ್‌ನ ಈ ಫೋನ್ ನಾಳೆ ಅಂದರೆ ಮಾರ್ಚ್ 4 ರಂದು ಮಧ್ಯಾಹ್ನ 3:30 ಕ್ಕೆ ಬಿಡುಗಡೆಯಾಗಲಿದೆ. ಈ ಮುಂಬರುವ ಮೊಬೈಲ್‌ಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕ ಪುಟವನ್ನು ಸಹ ರಚಿಸಲಾಗಿದ್ದು, ಈ ಸಾಧನವು ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಹೊಂದಿರುತ್ತದೆ ಎಂದು ತೋರಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಈ ಫೋನ್‌ನ ಬೆಲೆ 23 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಇರಬಹುದು. ಇದರ ಜೊತೆಗೆ ನಥಿಂಗ್ ಫೋನ್ 3a ಪ್ರೊ ಕೂಡ ರಿಲೀಸ್ ಆಗಲಿದೆ ಎಂಬ ಮಾತಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತವೆ. ಸಾಮಾನ್ಯ ವೈಶಿಷ್ಟ್ಯಗಳಲ್ಲಿ 50MP ಕ್ಯಾಮೆರಾ ಮತ್ತು ಬಾಳಿಕೆ ಬರುವ 5000mAh ಬ್ಯಾಟರಿ ಸೇರಿವೆ.
ವಿವೋ T4x 5G:
ಈ ಫೋನ್ ಅನ್ನು ಮಾರ್ಚ್ 5 ರಂದು ಮಧ್ಯಾಹ್ನ 12 ಗಂಟೆಗೆ ರಿಲೀಸ್ ಆಗಲಿದೆ. ಬಿಡುಗಡೆಗೂ ಮೊದಲು ಈ ಫೋನ್‌ನಲ್ಲಿ ಲಭ್ಯವಿರುವ ವಿಶೇಷ ವೈಶಿಷ್ಟ್ಯಗಳನ್ನು ದೃಢಪಡಿಸಲಾಗಿದೆ. ಈ ವಿವೋ ಫೋನ್ ಶಕ್ತಿಶಾಲಿ 6500 mAh ಬ್ಯಾಟರಿ, 44 W ಫಾಸ್ಟ್ ಚಾರ್ಜಿಂಗ್ ಬೆಂಬಲ, 5 ವರ್ಷಗಳ ಬ್ಯಾಟರಿ ಬಾಳಿಕೆ, ಸೂಪರ್ ಬ್ಯಾಟರಿ ಸೇವರ್ ಮೋಡ್ ಮತ್ತು 40 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಹೊಂದಿರುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಈ ಫೋನ್‌ನ 6 GB / 128 GB ರೂಪಾಂತರದ ಬೆಲೆ 13 ಸಾವಿರ ರೂ. ಗಳಿಗಿಂತ ಕಡಿಮೆ ಇರಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ