Tech Tips: ನೀರಿಗೆ ಬಿತ್ತೆಂದು ಮೊಬೈಲ್ ಅನ್ನು ಅಕ್ಕಿಯಲ್ಲಿ ಇಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿ
Smartphone water damage: ತಿಳಿದೊ ತಿಳಿಯದೊ ಕೆಲವೊಮ್ಮೆ ನಮ್ಮ ಸ್ಮಾರ್ಟ್‌ಫೋನ್‌ಗಳು ನೀರಿಗೆ ಬೀಳುತ್ತವೆ. ಹೀಗೆ ಬಿದ್ದ ತಕ್ಷಣ ಅದನ್ನು ಬಟ್ಟೆಯಿಂದ ಒರಸುತ್ತೇವೆ ಅಥವಾ ಎಲ್ಲೋ ಓದಿದ ನೆನಪು ಎಂಬಂತೆ ಫೋನನ್ನು ಅಕ್ಕಿಯ ಮಧ್ಯೆ ಇಡುತ್ತೇವೆ. ಆದರೆ, ತಪ್ಪಿಯೂ ಹೀಗೆ ಮಾಡಬಾರದು. ಯಾಕೆ?, ಈ ಸ್ಟೋರಿ ಓದಿ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ (Smartphone) ಬಳಕೆ ವಿಪರೀತವಾಗಿ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಎರಡರಿಂದ ಮೂರು ಸ್ಮಾರ್ಟ್‌ಫೋನ್‌ಗಳು ಇದ್ದೇ ಇರುತ್ತದೆ. ಆದರೆ, ಕೆಲವೊಂದು ಬಾರಿ ಈ ಸ್ಮಾರ್ಟ್‌ಫೋನ್‌ಗಳು ಆಕಸ್ಮಿಕವಾಗಿ ನೀರಿನಲ್ಲಿ ಬೀಳುತ್ತವೆ. ಹೀಗೆ ಆದಾಗ ಅನೇಕ ಜನರು ಗಾಬರಿಗೊಳ್ಳುತ್ತಾರೆ. ಹಲವರು ತಮ್ಮ ಫೋನ್ ನೀರಿನಲ್ಲಿ ಬೀಳಿಸಿದ ತಕ್ಷಣ ಸರಿ ಉಂಟೊ ಇಲ್ಲವೋ ಎಂದು ನೋಡಲು ಆನ್ ಮಾಡುತ್ತಾರೆ. ಅಥವಾ ಕೆಲವು ಫೋನನ್ನು ಆನ್ ಮಾಡದೆ ಅಕ್ಕಿಯಲ್ಲಿಟ್ಟರೆ ಸರಿ ಆಗುತ್ತದೆ ಎಂದು ಹಾಗೆ ಮಾಡುತ್ತಾರೆ. ಅಕ್ಕಿ ಫೋನ್‌ನಲ್ಲಿರುವ ತೇವಾಂಶವನ್ನೆಲ್ಲ ಹೀರಿಕೊಂಡು ಸರಿಯಾಗುತ್ತದೆ ಎಂಬ ವಿಡಿಯೋಗಳು ಯೂಟ್ಯೂಬ್‌ನಲ್ಲಿವೆ. ಆದರೆ, ಹೀಗೆ ಮಾಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿ.
ಆ್ಯಪಲ್ ಕಂಪನಿಯು ಇತ್ತೀಚೆಗೆ ತನ್ನ ಬಳಕೆದಾರರಿಗೆ ಈ ರೀತಿ ಮಾಡುವುದು ತುಂಬಾ ತಪ್ಪು ಎಂದು ಎಚ್ಚರಿಸಿದೆ. ನೀರಿನಲ್ಲಿ ಬಿದ್ದ ನಂತರ ಅಕ್ಕಿಯ ಅಡಿಯಲ್ಲಿ ಫೋನ್ ಅನ್ನು ಇಟ್ಟರೆ ಸಮಸ್ಯೆ ಉಲ್ಬಣಿಸುತ್ತದೆ ಎಂದು ಆ್ಯಪಲ್ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅಕ್ಕಿಯು ಫೋನ್‌ನಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂಬ ಕಾರಣಕ್ಕೆ ಅನೇಕ ಜನರು ಈ ರೀತಿ ಮಾಡುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಅಕ್ಕಿಯಲ್ಲಿರುವ ಧೂಳು ಮತ್ತು ಸಣ್ಣ ಧಾನ್ಯಗಳು ನಿಮ್ಮ ಫೋನ್‌ಗೆ ಹಾನಿ ಮಾಡುತ್ತದೆ.
ಬಜೆಟ್ ಪ್ರಿಯರು ಕಾದು ಕುಳಿತಿದ್ದ ರೆಡ್ಮಿ A3 ಫೋನ್ ಇಂದಿನಿಂದ ಖರೀದಿಗೆ ಲಭ್ಯ
ಹಾಗೆಯೆ ಒದ್ದೆಯಾದ ಫೋನ್ ಅನ್ನು ಸ್ವಚ್ಚಗೊಳಿಸಲು ಹತ್ತಿ ಅಥವಾ ಟಿಶ್ಯೂ ಪೇಪರ್‌ನಿಂದ ಮತ್ತು ಬ್ಲೋ ಡ್ರೈಯರ್‌ನಂತಹುಗಳನ್ನು ನೀವು ಬಳಸಬಾರದು ಎಂದು ಆ್ಯಪಲ್ ಹೇಳಿದೆ. ಮಿಂಚಿನ ಬಿಡಿಭಾಗಗಳ ಸಹಾಯದಿಂದ ನೀವು ನಿಮ್ಮ ಫೋನ್ ಅನ್ನು ಗೋಡೆಯ ಔಟ್ಲೆಟ್ಗೆ ಪ್ಲಗ್ ಮಾಡಿದರೆ, ಲಿಕ್ವಿಡ್ ಡಿಟೆಕ್ಟೆಡ್ ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಆ ಎಚ್ಚರಿಕೆಯು ಕಾಣಿಸಿಕೊಂಡ ತಕ್ಷಣ, ಎರಡೂ ತುದಿಗಳಿಂದ ಕೇಬಲ್ ಅನ್ನು ಅನ್ಪಗ್ ಮಾಡಿ ಎಂದು ಹೇಳಿದ್ದಾರೆ.
ಬೆಲೆ 6,999 ರೂ., 5000mAh ಬ್ಯಾಟರಿ, ಭಾರತದಲ್ಲಿ ಮೋಟೋ G04 ಫೋನ್ ಮಾರಾಟ ಪ್ರಾರಂಭ
ನಿಮ್ಮ ಮೊಬೈಲ್ ಪೋರ್ಟ್ ಅನ್ನು ಕೆಲ ಸಮಯ ನೆಲಕ್ಕೆ ಎದುರಾಗಿ ಕೈಯಲ್ಲಿ ಹಿಡಿದುಕೊಳ್ಳಿ. ನಂತರ ಫೋನ್ ಅನ್ನು ಒಣಗಿದ ಸ್ಥಳದಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಇಡಬೇಕು. ನಂತರ ಅದನ್ನು ಚಾರ್ಜ್ ಮಾಡಲು ಪ್ರಯತ್ನಿಸಬೇಕು. ನಂತರವೂ ಸರಿ ಆಗದಿದ್ದಲ್ಲಿ ನಿಮ್ಮ ಫೋನ್ 24 ಗಂಟೆಗಳ ಕಾಲ ಸಂಪೂರ್ಣವಾಗಿ ಒಣಗಲು ಬಿಡಬೇಕಂತೆ. ನಂತರವೂ ಸರಿಯಾಗದಿದ್ದರೆ ನೀವು ನಿಮ್ಮ ಫೋನ್ ಅನ್ನು ಸರ್ವೀಸ್ ಸೆಂಟರ್ಗೆ ನೀಡುವುದು ಉತ್ತಮ ಎಂದು ಆ್ಯಪಲ್ ಹೇಳಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ