WhatsApp Ban: ನಿಮ್ಮ ವಾಟ್ಸ್​ಆ್ಯಪ್ ಖಾತೆ ಬ್ಲಾಕ್ ಆಗಿದೆಯೇ?, ಇದಕ್ಕೆ ಕಾರಣವೇನು, ಸರಿಪಡಿಸುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 28, 2024 | 2:49 PM

ನೀವು ಇಬ್ಬೊಬ್ಬರ ಅನುಮತಿಯಿಲ್ಲದೆ ವಾಟ್ಸ್​ಆ್ಯಪ್ ನಲ್ಲಿ ಬಳಕೆದಾರರನ್ನು ಸೇರಿಸಿದರೆ, ವಾಟ್ಸ್​ಆ್ಯಪ್ ನಲ್ಲಿ ಅಪರಿಚಿತರಿಗೆ ಸಂದೇಶ ಕಳುಹಿಸಿ, ಜನರಿಗೆ ಪ್ರಚಾರದ ಮೆಸೇಜ್ ಫಾರ್ವರ್ಡ್ ಮಾಡಿದರೆ ಅಥವಾ ಹಂಚಿಕೊಂಡರೆ ಮತ್ತು ನಿಮ್ಮ ಬಗ್ಗೆ ಇತರೆ ಬಳಕೆದಾರರು ದೂರು ನೀಡಿದರೆ ನಿಮ್ಮ ಖಾತೆ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ.

WhatsApp Ban: ನಿಮ್ಮ ವಾಟ್ಸ್​ಆ್ಯಪ್ ಖಾತೆ ಬ್ಲಾಕ್ ಆಗಿದೆಯೇ?, ಇದಕ್ಕೆ ಕಾರಣವೇನು, ಸರಿಪಡಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ವಾಟ್ಸ್​ಆ್ಯಪ್ ಬಳಸುವಾಗ ನೀವು ಮಾಡುವ ಒಂದು ಸಣ್ಣ ತಪ್ಪು ಕೂಡ ನಿಮ್ಮ ಖಾತೆಯನ್ನು ಬ್ಯಾನ್ ಅಥವಾ ಬ್ಲಾಕ್ ಮಾಡಬಹುದು. ಮೆಟಾ ಒಡೆತನದ ನಂಬರ್ ಒನ್ ಅಪ್ಲಿಕೇಷನ್​ನಲ್ಲಿ ಬಳಕೆದಾರರನ್ನು ಸುರಕ್ಷಿತವಾಗಿಡಲು ಕಂಪನಿಯು ಪ್ರತಿ ತಿಂಗಳು ಲಕ್ಷಗಟ್ಟಲೆ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಮತ್ತು ಅವುಗಳನ್ನು ನಿಷೇಧಿಸುತ್ತದೆ. ವಾಟ್ಸ್​ಆ್ಯಪ್ ಖಾತೆಗಳನ್ನು ಸುಮ್ನನೆ ನಿಷೇಧಿಸಲಾಗಿಲ್ಲ, ಬಳಕೆದಾರರು ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಕಂಪನಿಯು ಈ ಕಠಿಣ ಕ್ರಮಗಳನ್ನು ತೆಗೆದುಕೊಳುತ್ತದೆ. ವಾಟ್ಸ್​ಆ್ಯಪ್ ತನ್ನ ಅಧಿಕೃತ ಸೈಟ್‌ನ FAQ ವಿಭಾಗದಲ್ಲಿ ಬಳಕೆದಾರರ ಖಾತೆಗಳನ್ನು ಏಕೆ ಲಾಕ್ ಮಾಡುತ್ತದೆ ಎಂದು ಸ್ಪಷ್ಟಪಡಿಸಿದೆ.

ವಾಟ್ಸ್​ಆ್ಯಪ್​ನಲ್ಲಿ ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ:

ನೀವು ಇಬ್ಬೊಬ್ಬರ ಅನುಮತಿಯಿಲ್ಲದೆ ವಾಟ್ಸ್​ಆ್ಯಪ್ ನಲ್ಲಿ ಬಳಕೆದಾರರನ್ನು ಸೇರಿಸಿದರೆ, ವಾಟ್ಸ್​ಆ್ಯಪ್ ನಲ್ಲಿ ಅಪರಿಚಿತರಿಗೆ ಸಂದೇಶ ಕಳುಹಿಸಿ, ಜನರಿಗೆ ಪ್ರಚಾರದ ಮೆಸೇಜ್ ಫಾರ್ವರ್ಡ್ ಮಾಡಿದರೆ ಅಥವಾ ಹಂಚಿಕೊಂಡರೆ ಮತ್ತು ನಿಮ್ಮ ಬಗ್ಗೆ ಇತರೆ ಬಳಕೆದಾರರು ದೂರು ನೀಡಿದರೆ ನಿಮ್ಮ ಖಾತೆ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ಕಂಪನಿ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದರೆ, ನಿಷೇಧಕ್ಕೂ ಒಳಗಾಗಬಹುದು. ವಾಟ್ಸ್​ಆ್ಯಪ್ ಮೂಲಕ ಅಶ್ಲೀಲ ವಿಷಯವನ್ನು ಹಂಚಿಕೊಂಡರೆ ಕೂಡ ಅವನ ಖಾತೆ ನಿಷೇಧಿಸಬಹುದು.

ವಾಟ್ಸ್​ಆ್ಯಪ್ ಖಾತೆ ಬ್ಲಾಕ್ ಆದರೆ ಮರುಪಡೆಯುವುದು ಹೇಗೆ?:

ವಾಟ್ಸ್​ಆ್ಯಪ್ ತಮ್ಮ ಖಾತೆಯನ್ನು ತಪ್ಪಾಗಿ ನಿಷೇಧಿಸಿದೆ ಎಂದು ಅನೇಕ ಬಾರಿ ಜನರು ಭಾವಿಸುತ್ತಾರೆ. ಅದರಂತೆ ತಪ್ಪಾಗಿ ನಿಮ್ಮ ಖಾತೆಯನ್ನು ಸಹ ನಿಷೇಧಿಸಿದರೆ, ನೀವು ಹೀಗೆ ಮಾಡಿ. https://www.whatsapp.com/contact/?subject=messenger ಗೆ ಹೋಗಿ ಮತ್ತು ನಿಮ್ಮ ದೂರನ್ನು ಸಂದೇಶದಲ್ಲಿ ಬರೆಯಿರಿ ಮತ್ತು ಕಂಪನಿಗೆ ವಿನಂತಿಯನ್ನು ಕಳುಹಿಸಿ.

ವಿನಂತಿಯನ್ನು ಸಲ್ಲಿಸುವ ಮೊದಲು, ನೀವು ಇಮೇಲ್, ಮೊಬೈಲ್ ಸಂಖ್ಯೆ, ವಾಟ್ಸ್​ಆ್ಯಪ್ (ಐಫೋನ್, ವೆಬ್, ಆಂಡ್ರಾಯ್ಡ್ ಅಥವಾ ಡೆಸ್ಕ್‌ಟಾಪ್) ಬಳಸುವ ವಿಧಾನವನ್ನು ಒದಗಿಸಬೇಕು. ಕಂಪನಿಯು ವಿನಂತಿಯನ್ನು ಸ್ವೀಕರಿಸಿದ ನಂತರ, ನಿಮ್ಮ ದೂರನ್ನು ಕಂಪನಿಯು ತಪ್ಪಾಗಿ ನಿಷೇಧಿಸಲಾಗಿದೆ ಎಂದು ಭಾವಿಸಿದರೆ, ನಂತರ ನಿಮ್ಮ ಖಾತೆಯನ್ನು ಅನ್ಲಾಕ್ ಮಾಡಲಾಗುತ್ತದೆ.

ಇದನ್ನೂ ಓದಿ: ಫ್ರಿಜ್ ಅನ್ನು ಎಷ್ಟು ದಿನಕ್ಕೊಮ್ಮೆ ಕ್ಲೀನ್ ಮಾಡಬೇಕು?: ಕೆಲವೇ ನಿಮಿಷಗಳಲ್ಲಿ ಸ್ವಚ್ಚಗೊಳಿಸುವುದು ಹೇಗೆ?

30 ದಿನಗಳ ಅವಧಿ:

ವಾಟ್ಸ್​ಆ್ಯಪ್​ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಬಹುದು. ಕೆಲವು ಸಂದರ್ಭಗಳಲ್ಲಿ ಈ ನಿಷೇಧವು 24 ಗಂಟೆಗಳಿಂದ 30 ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಯಾವುದೇ ವಾಟ್ಸ್​ಆ್ಯಪ್​ ಮೋಡ್ ಅನ್ನು (GBWhatsApp, WhatsApp Plus ನಂತಹ) ಬಳಸಬೇಡಿ ಏಕೆಂದರೆ ಇದು ಶಾಶ್ವತ ನಿಷೇಧಕ್ಕೆ ಕಾರಣವಾಗಬಹುದು, ಏಕೆಂದರೆ ಇವೆಲ್ಲವೂ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಾಗಿವೆ. ಅವರಿಗೂ ವಾಟ್ಸ್​ಆ್ಯಪ್​ಗೂ ಯಾವುದೇ ಸಂಬಂಧವಿಲ್ಲ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ