ಇಂದು ಸ್ಮಾರ್ಟ್ಫೋನ್ಗಳು (Smartphones) ಕೈಗೆಟಕುವ ಬೆಲೆಗೆ ಲಭ್ಯ ಇರುವುದರಿಂದ ಜನಸಾಮಾನ್ಯರು ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ತುಂಬಾ ಜೋಪಾನವಾಗಿ ಮೊಬೈಲ್ ಅನ್ನು ಇಟ್ಟುಕೊಳ್ಳುವವರು ಕೆಲವೇ ಮಂದಿ. ಹೀಗಾಗಿ ಮೊಬೈಲ್ಗಳು ಆಗಾಗ ಕೈಯಿಂದ ಬಿದ್ದು ಒಡೆಯುತ್ತಲೇ ಇರುತ್ತದೆ. ಹೀಗಾದಾಗ ಸ್ಕ್ರೀನ್ ಬಿರುಕು ಬಿಟ್ಟು, ಮೊಬೈಲ್ ಕೂಡ ಹಾಳಾಗುತ್ತದೆ. ಇದು ಆಗತಾನೆ ಖರೀದಿಸಿದ ಸ್ಮಾರ್ಟ್ಫೋನ್ಗಳಲ್ಲೂ ಸಂಭವಿಸುತ್ತದೆ. ಈ ಸಮಸ್ಯೆ ಬಗೆಹರಿಸಲು ಮಾರುಕಟ್ಟೆಗೆ ಬಂದಿದ್ದು ಗೊರಿಲ್ಲಾ ಗ್ಲಾಸ್.
ಗೊರಿಲ್ಲಾ ಗ್ಲಾಸ್ ಅನ್ನು ಅಲ್ಕಾಲಿ-ಅಲ್ಯೂಮಿನಾ ಸಿಲಿಕೇಟ್ ಸ್ಫಟಿಕಗಳಿಂದ ತಯಾರಿಸಲಾಗುತ್ತದೆ. ಇದನ್ನು ಎಲೆಕ್ಟ್ರಿಕಲ್ ಡಿವೈಸ್ನಲ್ಲೂ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿರುವ ಯಾವುದೇ ಸ್ಮಾರ್ಟ್‌ಫೋನ್ ಅಂಗಡಿಯಿಂದ ನೀವು ಈ ಗ್ಲಾಸ್ ಅನ್ನು ಪಡೆಯಬಹುದು. ಇದನ್ನು ಅಳವಡಿಸಿದರೆ ಟಚ್ ಸ್ಕ್ರೀನ್ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ.
ಆ್ಯಪಲ್ ದೀಪಾವಳಿ ಸೇಲ್ 2023: ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್, ಆಫರ್ ಮಿಸ್ ಮಾಡ್ಬೇಡಿ
ಗೊರಿಲ್ಲಾ ಗ್ಲಾಸ್ ಕೇವಲ ನಿಮ್ಮ ಸ್ಮಾರ್ಟ್ಫೋನ್ನ ಡಿಸ್ ಪ್ಲೇಯನ್ನು ರಕ್ಷಣೆ ಮಾಡುವುದು ಮಾತ್ರವಲ್ಲ, ಇದು ಮೊಬೈಲ್ ಬಳಸುವಾಗ ಬಿಸಿಯಾಗುವುದನ್ನು ಕೂಡ ತಪ್ಪಿಸುತ್ತದೆ. ಗೊರಿಲ್ಲಾ ಗ್ಲಾಸ್ ಹೆಚ್ಚಿನ ಶಾಖದ ಪ್ರತಿರೋಧವನ್ನು ಹೊಂದಿದೆ, ಆದ್ದರಿಂದ ನೀವು ಫೋನ್‌ನಲ್ಲಿ ಮಾತನಾಡಬಹುದು ಅಥವಾ ನೀವು ದೀರ್ಘ ಸಮಯ ಮೊಬೈಲ್ ಅನ್ನು ಬಳಸುತ್ತಿದ್ದರೆ ಇದು ಬಿಸಿ ಆಗುವುದರಿಂದ ತಪ್ಪಿಸುತ್ತದೆ.
ಮಾರುಕಟ್ಟೆಯಲ್ಲಿ ಗೊರಿಲ್ಲಾ ಗ್ಲಾಸ್ಗೆ ದುಬಾರಿ ಬೆಲೆಯೇನಿಲ್ಲ. ಇದು 100 ರಿಂದ 200 ರೂ. ಒಳಗೆ ಸಿಗುತ್ತದೆ. ಇದನ್ನು ಹಾಕುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರುತ್ತದೆ.
ಸ್ಮಾರ್ಟ್‌ಫೋನ್ ಡಿಸ್ ಪ್ಲೇಗೆ ಸ್ಕ್ರೀನ್ ಕವರ್ ಹಾಕಿದ್ದರೂ ಅದು ಕೆಲವೊಂದು ಬಾರಿ ಸ್ಕ್ರಾಚ್ ಆಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಕ್ರಾಚ್ ನಿವಾರಣೆಗಾಗಿ ಬೇಕಿಂಗ್ ಸೋಡಾ ಉತ್ತಮ ವಿಧಾನ. ಒಂದು ಪಾತ್ರೆಗೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ. ಅಥವಾ ಮಾರುಕಟ್ಟೆಯಲ್ಲಿ ಹಲವಾರು ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಫೋನ್ ಡಿಸ್‌ಪ್ಲೇ ಸ್ಕ್ರಾಚ್ ಹೋಗಲಾಡಿಸಬಹುದು. ಅಂತೆಯೆ ಮೊಟ್ಟೆಯ ಬಿಳಿಭಾಗ ಮತ್ತು ಪೊಟ್ಯಾಶಿಯಮ್ ಸಲ್ಫೇಟ್ ಬಳಸಿ ಫೋನ್ ಸ್ಕ್ರಾಚ್ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವೆರಡನ್ನು ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಿಂದ ಸ್ಮಾರ್ಟ್‌ಫೋನ್ ಪರದೆಯನ್ನು ಒರೆಸಿದರೆ ಸ್ಕ್ರಾಚ್ ಮಾಯವಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Thu, 9 November 23