AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Utility: ನೀಲಿ, ಕಪ್ಪು ಮತ್ತು ಕೆಂಪು ಪೋರ್ಟ್‌ ಹೊಂದಿರುವ ಪೆನ್‌ಡ್ರೈವ್‌ಗಳ ನಡುವಿನ ವ್ಯತ್ಯಾಸವೇನು?, ಈ ರಹಸ್ಯ ತಿಳಿಯಿರಿ

USB port color meanings: ಪೆನ್‌ಡ್ರೈವ್, ಲ್ಯಾಪ್‌ಟಾಪ್ ಅಥವಾ ಪಿಸಿ ಖರೀದಿಸುವಾಗ, ನೀವು ಅವುಗಳ ಯುಎಸ್​ಬಿ ಪೋರ್ಟ್‌ಗಳ ಬಣ್ಣವನ್ನು ಗಮನಿಸಿರಬಹುದು. ಇವು ಹೆಚ್ಚಾಗಿ ನೀಲಿ, ಕಪ್ಪು ಮತ್ತು ಕೆಂಪು ಬಣ್ಣದ್ದಾಗಿರುತ್ತವೆ. ಈ ಬಣ್ಣದ ಅರ್ಥ ಏನು ಎಂಬುದು ನಿಮಗೆ ತಿಳಿದಿದೆಯೇ?, ಈ ಬಣ್ಣವು ಏನನ್ನು ಸೂಚಿಸುತ್ತದೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Tech Utility: ನೀಲಿ, ಕಪ್ಪು ಮತ್ತು ಕೆಂಪು ಪೋರ್ಟ್‌ ಹೊಂದಿರುವ ಪೆನ್‌ಡ್ರೈವ್‌ಗಳ ನಡುವಿನ ವ್ಯತ್ಯಾಸವೇನು?, ಈ ರಹಸ್ಯ ತಿಳಿಯಿರಿ
Usb Port Color Meanings
ಪ್ರೀತಿ ಭಟ್​, ಗುಣವಂತೆ
| Edited By: |

Updated on: Nov 15, 2025 | 9:23 AM

Share

ಬೆಂಗಳೂರು (ನ. 15): ಪೆನ್ ಡ್ರೈವ್‌ನ (Pendrive) ಪೋರ್ಟ್‌ನ ಬಣ್ಣವನ್ನು ನೀವು ಎಂದಾದರೂ ಗಮನಿಸಿದ್ದೀರಾ? ಇಲ್ಲದಿದ್ದರೆ, ನೀವು ಖಂಡಿತವಾಗಿಯೂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ಪೋರ್ಟ್‌ನ ಬಣ್ಣವು ಪೆನ್ ಡ್ರೈವ್‌ನ ಬಗ್ಗೆ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸುತ್ತದೆ. ಪೆನ್ ಡ್ರೈವ್‌ನ ಯುಎಸ್​ಬಿ ಪೋರ್ಟ್‌ನ ಬಣ್ಣವು ಅದರ ಡೇಟಾ ವರ್ಗಾವಣೆ ವೇಗ ಮತ್ತು ಅದರ ವಿದ್ಯುತ್ ಬಳಕೆಯನ್ನು ಸೂಚಿಸುತ್ತದೆ. ಪೆನ್ ಡ್ರೈವ್‌ನ ಯುಎಸ್​ಬಿ ಪೋರ್ಟ್‌ನ ಪ್ರತಿಯೊಂದು ಬಣ್ಣವು ಏನನ್ನು ಸೂಚಿಸುತ್ತದೆ?, ಅದರ ವೇಗ ಎಷ್ಟು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಯುಎಸ್​ಬಿ ಪೋರ್ಟ್‌ಗಳ ವಿವಿಧ ಬಣ್ಣಗಳು ಏನನ್ನು ಸೂಚಿಸುತ್ತವೆ?

ನಿಮ್ಮ ಪೆನ್ ಡ್ರೈವ್ ಅಥವಾ ಲ್ಯಾಪ್‌ಟಾಪ್‌ನ ಯುಎಸ್​ಬಿ ಪೋರ್ಟ್‌ನಲ್ಲಿ ಏಳು ಪ್ರಮುಖ ಬಣ್ಣಗಳಿವೆ. ಈ ಬಣ್ಣಗಳು ನೀವು ಸ್ವೀಕರಿಸುತ್ತಿರುವ ವೇಗವನ್ನು ನಿರ್ಧರಿಸಲು ಸಹಾಯ ಮಾಡಬಹುದು.

ಬಿಳಿ ಯುಎಸ್​ಬಿ ಪೋರ್ಟ್: ನಿಮ್ಮ ಪೆನ್ ಡ್ರೈವ್ ಅಥವಾ ಲ್ಯಾಪ್‌ಟಾಪ್/ಪಿಸಿಯ ಯುಎಸ್​ಬಿ ಪೋರ್ಟ್ ಬಿಳಿ ಬಣ್ಣದಲ್ಲಿದ್ದರೆ, ಅದು ಅತ್ಯಂತ ಹಳೆಯ USB 1.x ಪೋರ್ಟ್ ಆಗಿರುತ್ತದೆ. ನೀವು 12 Mbps ವರೆಗಿನ ವೇಗವನ್ನು ಪಡೆಯಬಹುದು.

ಇದನ್ನೂ ಓದಿ
Image
ಕೇವಲ 7,299 ರೂ. ಗೆ ಭಾರತದಲ್ಲಿ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್​ಫೋನ್
Image
ಫಾಸ್ಟ್ ಚಾರ್ಜರ್ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತೇ?
Image
7300mAh ಬ್ಯಾಟರಿ, ಮೂರು 50MP ಕ್ಯಾಮೆರಾ: ಹೊಸ ಒನ್​ಪ್ಲಸ್​ ಫೋನ್ ಬಿಡುಗಡೆ
Image
ವಿದೇಶಿ ಮಾರುಕಟ್ಟೆಯಲ್ಲಿ ಸೇಲ್ ಆಗಲಿದೆ ನಮ್ಮ ಭಾರತದ ಸ್ಮಾರ್ಟ್​ಫೋನ್

ಕಪ್ಪು ಯುಎಸ್​ಬಿ ಪೋರ್ಟ್: ಈ ಬಣ್ಣದ ಡ್ರೈವ್‌ಗಳು ಯುಎಸ್​ಬಿ 2.0 ಪೋರ್ಟ್‌ಗಳನ್ನು ಹೊಂದಿವೆ. ಅವು 480mbps ವರೆಗೆ ವೇಗವನ್ನು ನೀಡುತ್ತವೆ. ಈ ರೀತಿಯ ಡ್ರೈವ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿದೆ.

ಹಳದಿ ಯುಎಸ್​ಬಿ ಪೋರ್ಟ್: ಲ್ಯಾಪ್‌ಟಾಪ್‌ಗಳು ಮತ್ತು PC ಗಳಲ್ಲಿ ಈ ಬಣ್ಣದ ಯುಎಸ್​ಬಿ ಪೋರ್ಟ್‌ಗಳನ್ನು ನೀವು ಕಾಣಬಹುದು. ಈ ಪೋರ್ಟ್‌ಗಳು ಯಾವಾಗಲೂ ಆನ್ ಆಗಿರುತ್ತವೆ. ಇದರರ್ಥ ನಿಮ್ಮ ಕಂಪ್ಯೂಟರ್ ಆಫ್ ಆಗಿದ್ದರೂ ಸಹ, ಈ ಪೋರ್ಟ್‌ಗೆ ಸಾಧನವನ್ನು ಸಂಪರ್ಕಿಸಿದರೆ, ಅದು ಚಾರ್ಜ್ ಆಗಲು ಪ್ರಾರಂಭಿಸುತ್ತದೆ.

Itel A90: ಕೇವಲ 7,299 ರೂ. ಗೆ ಭಾರತದಲ್ಲಿ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ

ಕಿತ್ತಳೆ ಬಣ್ಣದ ಪೋರ್ಟ್‌ಗಳು: ಈ ಪೋರ್ಟ್‌ಗಳು ಯಾವಾಗಲೂ ಆನ್ ಆಗಿರುತ್ತವೆ ಮತ್ತು ಯುಎಸ್​ಬಿ 3.0 ಅನ್ನು ಬೆಂಬಲಿಸುತ್ತವೆ.

ನೀಲಿ ಯುಎಸ್​ಬಿ ಪೋರ್ಟ್‌ಗಳು: ನಿಮ್ಮ ಬಳಿ ನೀಲಿ ಯುಎಸ್​ಬಿ ಪೋರ್ಟ್ ಹೊಂದಿರುವ ಪೆನ್ ಡ್ರೈವ್ ಇದ್ದರೆ, ಅಥವಾ ನಿಮ್ಮ PC ಅಥವಾ ಲ್ಯಾಪ್‌ಟಾಪ್‌ನಲ್ಲಿ ಈ ಬಣ್ಣದ ಯುಎಸ್​ಬಿ ಪೋರ್ಟ್ ಇದ್ದರೆ, ಅದು ಸೂಪರ್-ಸ್ಪೀಡ್ ಪೋರ್ಟ್‌ನ ಸಂಕೇತವಾಗಿದೆ. ಈ ಪೋರ್ಟ್‌ಗಳು USB 3.0 ಅನ್ನು ಬೆಂಬಲಿಸುತ್ತವೆ ಮತ್ತು 5Gbps ವರೆಗಿನ ವೇಗವನ್ನು ನೀಡಬಲ್ಲವು.

ಟೀಲ್ ಪೋರ್ಟ್‌ಗಳು: ಈ ಬಣ್ಣದ ಪೋರ್ಟ್‌ಗಳು ಯುಎಸ್​ಬಿ 3.1 ಅನ್ನು ಬೆಂಬಲಿಸುತ್ತವೆ ಮತ್ತು 10Gbps ವರೆಗೆ ಡೇಟಾವನ್ನು ವರ್ಗಾಯಿಸಬಹುದು.

ಕೆಂಪು ಪೋರ್ಟ್‌ಗಳು: ಈ ಬಣ್ಣದ ಯುಎಸ್​ಬಿ ಪೋರ್ಟ್‌ಗಳು ಅತ್ಯಂತ ಮುಂದುವರಿದ ಮತ್ತು ವೇಗವಾದವು. ಅವು ಯುಎಸ್​ಬಿ 3.2 ಅಥವಾ 3.1 Gen 2 ಮಾನದಂಡವನ್ನು ಬೆಂಬಲಿಸುತ್ತವೆ. ಈ ಪೋರ್ಟ್‌ಗಳು 20Gbps ವರೆಗೆ ವೇಗವನ್ನು ನೀಡಬಲ್ಲವು. ಅವುಗಳು ಆಲ್​ವೆಸ್ ಆನ್ ವೈಶಿಷ್ಟ್ಯದೊಂದಿಗೆ ಬರುತ್ತವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ