ಹೆಚ್ಚಿನವರಿಗೆ ಆ್ಯಪಲ್ ಐಫೋನ್ ಖರೀದಿಸಬೇಕು ಎಂಬ ಆಸೆ ಇರುತ್ತದೆ. ಆದರೆ, ದುಬಾರಿ ಬೆಲೆಯ ಐಫೋನ್ ಅನ್ನು ಕೊಂಡುಕೊಳ್ಳುವಷ್ಟೆ ಹಣ ಕೆಲವರಲ್ಲಿ ಇರುವುದಿಲ್ಲ. ಇಂಥವರಿಗೆ ಹೊಸ ಸ್ಮಾರ್ಟ್ಫೋನ್ ಒಂದು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಟೆಕ್ನೋ ಸ್ಪಾರ್ಕ್ 10 ಪ್ರೊ (Tecno Spark 10 Pro) ಎಂಬ ಹೊಸ ಮೊಬೈಲ್ ಅನ್ನು ರಿಲೀಸ್ ಮಾಡಿದೆ. ವಿಶೇಷ ಎಂದರೆ ಈ ಫೋನ್ ನೋಡಲು ಥೇಟ್ ಐಫೋನ್ 14 ಪ್ರೊ ಮಾದರಿಯಲ್ಲೇ ಇದೆ. ಮುಖ್ಯವಾಗಿ ಇದರಲ್ಲಿರುವ ಹಿಂಭಾಗದ ಕ್ಯಾಮೆರಾದ ಡಿಸೈನ್ ಗಮನಿಸಿದರೆ ಐಫೋನ್ ರೀತಿಯಲ್ಲೇ ಇದೆ. ಹಾಗಾದರೆ ಈ ಫೋನಿನ ವಿಶೇಷತೆ, ಬೆಲೆ ಕುರಿತ ಮಾಹಿತಿ ನೋಡೋಣ.
ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಟೆಕ್ನೋ ಸ್ಪಾರ್ಕ್ 10 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ ಆಗಿದೆ. ಈ ಹಿಂದಿನ ಟೆಕ್ನೋ ಫೋನ್ಗಳಂತೆ ಇದು ಕೂಡ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದ್ದು ಕಡಿಮೆ ಬೆಲೆಗೆ ಲಭ್ಯವಿದೆ. ಈ ಫೋನಿನ ನಿಖರ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ 10,000 ರೂ. ಆಸುಪಾಸಿನಲ್ಲಿ ಇರಬಹುದು ಎನ್ನಲಾಗಿದೆ. ಈ ಫೋನಿನ ಹಿಂಭಾಗದ ಪ್ಯಾನೆಲ್ ಗಾಜುಗಳಿಂದ ಆವೃತ್ತವಾಗಿರುವುದು ಮುಖ್ಯ ಹೈಲೇಟ್ ಆಗಿದೆ. ಇದು 6GB RAM ಮತ್ತು 128GB, 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರಬಹುದು.
ಟೆಕ್ನೋ ಸ್ಪಾರ್ಕ್ 10 ಪ್ರೊ ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.8 ಇಂಚಿನ ಹೆಚ್‌ಡಿ + ಡಾಟ್ ಡಿಸ್‌ಪ್ಲೇ ಹೊಂದಿದೆ. 90Hz ರಿಫ್ರೆಶ್ರೇಟ್ನಿಂದ ಕೂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G88 12nmಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 13ನ HiOS 12.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಈ ಫೋನಿನಲ್ಲಿ ಪ್ರಮುಖ ಹೈಲೇಟ್ ಆಗಿರುವುದು ಕ್ಯಾಮೆರಾ. ಹಿಂಭಾಗ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಡ್ಯುಯೆಲ್ ಫ್ಲ್ಯಾಶ್ನಿಂದ ಆವೃತ್ತವಾಗಿರುವುದು ಮತ್ತೊಂದು ವಿಶೇಷತೆ. ಇನ್ನು ದ್ವಿತೀಯ ಕ್ಯಾಮೆರಾ 2 ಮೆಗಾಫಿಕ್ಸೆಲ್ನ ಡೆಪ್ತ್ ಸೆನ್ಸಾರ್ನಿಂದ ಕೂಡಿದೆ. ಮೂರನೇ ಕ್ಯಾಮೆರಾ AI ಬೆಂಬಲಿತದಿಂದ ಕೂಡಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದ್ದು ಇಲ್ಲೂ ಡ್ಯುಯೆಲ್ ಎಲ್ಇಡಿ ಫ್ಲ್ಯಾಶ್ ಇದೆ. ಫೋಟೋ ಎಡಿಟಿಂಗ್ಗೆ ಕೂಡ ಆಯ್ಕೆಗಳು ಇರಲಿವೆ.
ಟೆಕ್ನೋ ಸ್ಪಾರ್ಕ್ 10 ಪ್ರೊ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದಕ್ಕೆ ತಕ್ಕಂತೆ 18 ವೋಲ್ಟ್ ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. 4ಜಿ ಎಲ್ ಟಿಇ, ವೈ-ಫೈ 802.11, ಬ್ಲೂಟೂತ್ 5, ಜಿಪಿಎಸ್, ಯುಎಸ್ಬಿ ಟೈಪ್-ಸಿ, ಎನ್ಎಫ್ಸಿ ಅನ್ನು ಒಳಗೊಂಡಿದೆ. ಇದಲ್ಲದೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿದೆ. ಭಾರತದಲ್ಲಿ ಈ ಫೋನಿನ ಹಾಗೂ ಲಭ್ಯತೆ ಬಗ್ಗೆ ಕಂಪನಿ ಇನ್ನಷ್ಟೆ ಬಹಿರಂಗ ಪಡಿಸಬೇಕಿದೆ. ಈ ತಿಂಗಳ ಅಂತ್ಯದ ಒಳಗೆ ಖರೀದಿಗೆ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Tue, 7 March 23