Nothing Phone 2: ಧೂಳೆಬ್ಬಿಸಲು ಬರುತ್ತಿದೆ ನಥಿಂಗ್ ಫೋನ್ 2: ಲೀಕ್ ಆದ ಫೀಚರ್ ಕಂಡು ದಂಗಾದ ಟೆಕ್ ಪ್ರಿಯರು
ನೂತನವಾಗಿ ಬಿಡುಗಡೆ ಆಗಲಿರುವ ನಥಿಂಗ್ ಫೋನ್ 2 ನಲ್ಲಿ ಸ್ನಾಪ್ಡ್ರಾಗನ್ 8 ಸರಣಿಯ ಪ್ರೊಸೆಸರ್ ಇರಲಿದೆಯಂತೆ. ಇದು ಸ್ನಾಪ್ಡ್ರಾಗನ್ 8+ Gen 1 ಚಿಪ್ಸೆಟ್ ಆಗಿರಲಿದೆ ಎಂಬ ಮಾಹಿತಿ ಲೀಕ್ ಆಗಿದೆ.
ಕಳೆದ ವರ್ಷ ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಮೊಬೈಲ್ ಎಂದರೆ ಅದು ನಥಿಂಗ್ ಫೋನ್ 1. ಒನ್ ಪ್ಲಸ್ (OnePlus) ಕಂಪನಿಯ ಸಹಸ್ಥಾಪಕ ಕಾರ್ಲ್ ಪೇ ಒಡೆತನದ ನಥಿಂಗ್ ಕಂಪನಿ ತನ್ನ ಮೊಟ್ಟ ಮೊದಲ ಮೊಬೈಲ್ ಅನ್ನು ಪರಿಚಯಿಸಿ ಮೋಡಿ ಮಾಡಿತ್ತು. ತನ್ನ ಡಿಸೈನ್ ಮೂಲಕವೇ ರೋಚಕತೆ ಸೃಷ್ಟಿಸಿದ ಈ ಫೋನ್ಗೆ ಇಂದುಕೂಡ ಭರ್ಜರಿ ಬೇಡಿಕೆ ಇದೆ. ಈ ವರೆಗೆ ಒಟ್ಟು 650,000 ಯುನಿಟ್ ಸೇಲ್ ಆಗಿದೆಯಂತೆ. ಇದೀಗ ಕಂಪನಿ ನಥಿಂಗ್ ಫೋನ್ 2 (Nothing Phone 2) ಕೆಲಸದಲ್ಲಿ ನಿರತವಾಗಿದೆ. ಸಮಯ ತೆಗೆದುಕೊಂಡು ಆಕರ್ಷಕ ಫೀಚರ್ಗಳನ್ನು ಸೇರಿಸಿ ನಥಿಂಗ್ ಫೋನ್ 2 ಬಿಡುಗಡೆ ಆಗಲಿದೆಯಂತೆ.
ಇತ್ತೀಚೆಗಷ್ಟೆ ನಥಿಂಗ್ ಕಂಪನಿಯ ಮೂಲಗಳು ಹೇಳಿರುವ ಪ್ರಕಾರ, ನಾವು ಉತ್ತಮವಾಗಿ ಮಾಡುವುದರತ್ತ ಮಾತ್ರ ಗಮನಹರಿಸಿದ್ದೇವೆ ಮತ್ತು ಇತರ ಕಂಪನಿಗಳಂತೆ ನಾವು ವರ್ಷಕ್ಕೆ ಡಜನ್‌ಗಟ್ಟಲೆ ಉತ್ಪನ್ನಗಳನ್ನು ಬಿಡುಗಡೆಗೊಳಿಸುವುದಿಲ್ಲ. ನಾವು ನಮ್ಮ ಬಳಕೆದಾರರಿಗೆ ಮತ್ತಷ್ಟು ಉತ್ತಮ ಸೇವೆಗಳನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿರುವುದಾಗಿ ಎಂದು ಹೇಳಿದ್ದರು. ನಥಿಂಗ್ ಫೋನ್ 2 ತಯಾರಿಕೆಯಲ್ಲಿ ಕಂಪನಿ ಬ್ಯುಸಿ ಆಗಿದ್ದರೆ ಇದರ ಫೀಚರ್ ಕುರಿತ ಮಾಹಿತಿಯೊಂದು ಸೋರಿಕೆ ಆಗಿದೆ.
ನೂತನವಾಗಿ ಬಿಡುಗಡೆ ಆಗಲಿರುವ ನಥಿಂಗ್ ಫೋನ್ 2 ನಲ್ಲಿ ಸ್ನಾಪ್ಡ್ರಾಗನ್ 8 ಸರಣಿಯ ಪ್ರೊಸೆಸರ್ ಇರಲಿದೆಯಂತೆ. ಇದು ಸ್ನಾಪ್ಡ್ರಾಗನ್ 8+ Gen 1 ಚಿಪ್ಸೆಟ್ ಆಗಿರಲಿದೆ ಎಂಬ ಮಾಹಿತಿ ಲೀಕ್ ಆಗಿದೆ. ಈ ಮೊದಲು ಬಿಡುಗಡೆ ಆದ ನಥಿಂಗ್ ಫೋನ್ 1 ನಲ್ಲಿ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 778G+ SoC ಪ್ರೊಸೆಸರ್ ಅಳವಡಿಸಲಾಗಿತ್ತು. ಸ್ನಾಪ್ಡ್ರಾಗನ್ 8+ Gen 1 ಸಾಕಷ್ಟು ಬಲಿಷ್ಠವಾಗಿದ್ದು ಯಾವುದೇ ತೊಂದರೆ ಇಲ್ಲದೆ ಹೈ ಸ್ಪೀಡ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಎಷ್ಟೇ ದೊಡ್ಡ ಘಾತ್ರದ ಗೇಮ್ಗಳಿದ್ದರೂ ಇದು ಸಪೋರ್ಟ್ ಮಾಡುತ್ತದೆ.
ನಥಿಂಗ್ ಫೋನ್ 1 ಹೇಗಿದೆ?:
ನಥಿಂಗ್ ಫೋನ್ 1ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.55 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಡಿಸ್ ಪ್ಲೇ ಹೊಂದಿದೆ. ಈ ಡಿಸ್ ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್ ಇದೆ. OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್ ನೀಡಲಾಗಿದೆ. ಈ ಫೋನ್ ನಲ್ಲಿರುವ ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್ ಸಂಗ್ JN1 ಸೆನ್ಸಾರ್ ಹೊಂದಿದೆ. ಇದು EIS ಇಮೇಜ್ ಸ್ಟೆಬಿಲೈಸೇಶನ್, 114-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಮ್ಯಾಕ್ರೋ ಮೋಡ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
4500mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ V5.2, NFC, GPS, GLONASS, ಗೆಲಿಲಿಯೋ ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಇದಲ್ಲದೆ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP53 ರೇಟಿಂಗ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಮೂರು ಮೈಕ್ರೊಫೋನ್‌ಗಳನ್ನು ಸಹ ಫೋನ್‌ನಲ್ಲಿ ನೀಡಲಾಗಿದೆ. ಇದರ ಆರಂಭಿಕ ಬೆಲೆ 27,999 ರೂ. ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Tue, 7 March 23