Realme Narzo 50 5G: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಮತ್ತೊಂದು ಪವರ್​ಫುಲ್ ಫೋನ್: ಯಾವುದು?

| Updated By: Vinay Bhat

Updated on: May 15, 2022 | 2:28 PM

Realme Narzo 50 Pro 5G: ಭಾರತದಲ್ಲಿ ರಿಯಲ್‌ ಮಿ ನಾರ್ಜೊ 50 ಮತ್ತು ರಿಯಲ್‌ ಮಿ ನಾರ್ಜೊ 50 ಪ್ರೊ ಸ್ಮಾರ್ಟ್‌ಫೋನ್‌ ಇದೇ ಮೇ 18 ರಂದು ಮಧ್ಯಾಹ್ನ 12:30ಕ್ಕೆ ಬಿಡುಗಡೆ ಆಗಲಿದೆ. ಇದರಲ್ಲಿ ರಿಯಲ್‌ ಮಿ ನಾರ್ಜೊ 50 ಎರಡು ಆಯ್ಕೆಯಲ್ಲಿ ರಿಲೀಸ್ ಆಗಿದೆ ಎನ್ನಲಾಗಿದೆ.

Realme Narzo 50 5G: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಮತ್ತೊಂದು ಪವರ್​ಫುಲ್ ಫೋನ್: ಯಾವುದು?
Realme Narzo 50 5G
Follow us on

ರಿಯಲ್ ಮಿ ಕಂಪನಿ ಭಾರತದಲ್ಲಿ ಇತ್ತೀಚೆಗಷ್ಟೆ ತನ್ನ ಕಡೆಯಿಂದ ಇದೇ ಮೊದಲ ಬಾರಿಗೆ 150W ಫಾಸ್ಟ್ ಚಾರ್ಜರ್​ನ ರಿಯಲ್‌ ಮಿ ಜಿಟಿ ನಿಯೋ 3 (Realme GT Neo 3) ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೆ ಇದೀಗ ಮತ್ತೆರಡು ಹೊಸ ಫೋನ್ ಅನ್ನು ಅನಾವರಣ ಮಾಡಲು ಸಿದ್ಧತೆ ನಡೆಸುತ್ತಿದೆ. ಅದುವೇ ಹೊಸ ರಿಯಲ್‌ ಮಿ ನಾರ್ಜೊ 50 5ಜಿ (Realme Narzo 50 5G) ಮತ್ತು ರಿಯಲ್‌ ಮಿ ನಾರ್ಜೊ 50 ಪ್ರೊ (Realme Narzo 50 Pro 5G). ಬಲಿಷ್ಠ ಬ್ಯಾಟರಿ, ಅತ್ಯುತ್ತಮ ಕ್ಯಾಮೆರಾ, ಮೀಡಿಯಾಟೆಕ್‌ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿರುವ ಈ ಫೋನ್ ಸಾಕಷ್ಟು ವಿಶೇಷವಾಗಿದೆ. ಹಾಗಾದ್ರೆ ಈ ರಿಯಲ್‌ ಮಿ ನಾರ್ಜೊ 50 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ?, ಇದರ ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ.

ಭಾರತದಲ್ಲಿ ರಿಯಲ್‌ ಮಿ ನಾರ್ಜೊ 50 ಮತ್ತು ರಿಯಲ್‌ ಮಿ ನಾರ್ಜೊ 50 ಪ್ರೊ ಸ್ಮಾರ್ಟ್‌ಫೋನ್‌ ಇದೇ ಮೇ 18 ರಂದು ಮಧ್ಯಾಹ್ನ 12:30ಕ್ಕೆ ಬಿಡುಗಡೆ ಆಗಲಿದೆ. ಇದರಲ್ಲಿ ರಿಯಲ್‌ ಮಿ ನಾರ್ಜೊ 50 ಎರಡು ಆಯ್ಕೆಯಲ್ಲಿ ರಿಲೀಸ್ ಆಗಿದೆ ಎನ್ನಲಾಗಿದೆ. ಇದರ 4GB RAM ಮತ್ತು 128GB ಸ್ಟೋರೇಜ್ ಮಾದರಿ ಹಾಗೂ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಖರೀದಿಗೆ ಸಿಗಲಿದೆ. ಇದರ ಬೆಲೆ ಎಷ್ಟೆಂದು ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 20,000 ಎಊ. ಒಳಗೆ ಇರಬಹುದೆಂದು ಅಂದಾಜಿಸಲಾಗಿದೆ.

ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ HD ಅಮೊಲೊಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಒಳಗೊಂಡಿದೆ. ಮೀಡಿಯಾಟೆಕ್‌  ಡೈಮೆನ್ಸಟಿಟಿ 810 SoC ಪ್ರೊಸೆಸರ್‌ ಅಥವಾ ಮೀಡಿಯಾಟೆಕ್‌  ಡೈಮೆನ್ಸಟಿಟಿ 920 SoC ಬಲವನ್ನು ಪಡೆದಿರುವ ಸಾಧ್ಯತೆ ಇದೆ. ಇದು ರಿಯಲ್‌ಮಿ UI 3.0 ಜೊತೆಗೆ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ವರ್ಚುವಲ್ ಮೆಮೊರಿಯಾಗಿ ಬಳಸಿಕೊಳ್ಳುವ ಮೂಲಕ ಲಭ್ಯವಿರುವ ಮೆಮೊರಿಯನ್ನು 11GB ವರೆಗೆ ವಿಸ್ತರಿಸಲು ಡೈನಾಮಿಕ್ RAM ವಿಸ್ತರಣೆ ವೈಶಿಷ್ಟ್ಯವನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ
Moto Days Sale: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಗ್ರಾಹಕರಿಗಾಗಿ ಮೋಟೋ ಡೇಸ್ ಸೇಲ್‌ ಆರಂಭ
Best Smartphone: ಮೇ ತಿಂಗಳಲ್ಲಿ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ
100 ಜಾಗತಿಕ ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ಕೂ ಸಹ-ಸಂಸ್ಥಾಪಕ ರಾಧಾಕೃಷ್ಣಗೆ ಸ್ಥಾನ
Sony Xperia Ace 3: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಸೋನಿ ಎಕ್ಸ್‌ಪಿರಿಯಾ ಏಸ್‌ 3 ಫೋನ್: ಬೆಲೆ ಎಷ್ಟು?

ಈ ಫೋನಿನ ಕ್ಯಾಮೆರಾ ಭರ್ಜರಿ ಆಗಿದ್ದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಆಗಿದೆ. ಆದರೆ, ಮೂರನೇ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮೆರಾದ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ರಿಯಲ್‌ ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ 5,000mAh ಅಥವಾ 4800 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಎನ್ನಲಾಗಿದೆ. ಇದು 33W ಸೂಪರ್ಡಾರ್ಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕೇವಲ 70 ನಿಮಿಷಗಳಲ್ಲಿ 0-100% ಚಾರ್ಜ್ ಆಗುತ್ತದಂತೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ ಮತ್ತು GPS ನಿಂದ ಕೂಡಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Sun, 15 May 22