Highest Selling Smartphones: ಇವು ವಿಶ್ವದಲ್ಲೇ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ಸ್, ನಿಮ್ಮ ಬಳಿ ಈ ಫೋನ್ ಇದೆಯೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2024 | 11:51 AM

ಕೌಂಟರ್‌ ಪಾಯಿಂಟ್ ರಿಸರ್ಚ್ 2024 ರ ಪ್ರಕಾರ, 10 ಅತ್ಯುತ್ತಮ ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ 4 ಆ್ಯಪಲ್, ರೆಡ್ಮಿ 13C ಮತ್ತು ಸ್ಯಾಮ್‌ಸಂಗ್‌ ಫೋನುಗಳಿವೆ. ಈ ಸ್ಮಾರ್ಟ್‌ಫೋನ್ ವಿಶಿಷ್ಟ ವೈಶಿಷ್ಟ್ಯಗಳು ಮತ್ತು ಕ್ಯಾಮೆರಾವನ್ನು ಹೊಂದಿದೆ. ಈ ಸಾಧನವು ಬಹು-ಕಾರ್ಯಕ್ಕೆ ಉತ್ತಮ ಆಯ್ಕೆಯಾಗಿದೆ.

Highest Selling Smartphones: ಇವು ವಿಶ್ವದಲ್ಲೇ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ಸ್, ನಿಮ್ಮ ಬಳಿ ಈ ಫೋನ್ ಇದೆಯೇ?
ಸಾಂದರ್ಭಿಕ ಚಿತ್ರ
Follow us on

ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಹಲವು ಟಾಪ್ ಬ್ರಾಂಡ್​ನ ಫೋನ್‌ಗಳನ್ನು ಸೇರಿಸಲಾಗಿದೆ. ಇದರಲ್ಲಿ ಸ್ಯಾಮ್​ಸಂಗ್, ಆ್ಯಪಲ್ ಮತ್ತು ರೆಡ್ಮಿ ಫೋನ್‌ಗಳೂ ಸೇರಿವೆ. ಈ ಪಟ್ಟಿಯಲ್ಲಿ ಯಾವ ಮೊಬೈಲ್ ಅನ್ನು ಸೇರಿಸಲಾಗಿದೆ ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ. ಈ ಸ್ಮಾರ್ಟ್‌ಫೋನ್ ವಿಶಿಷ್ಟ ವೈಶಿಷ್ಟ್ಯಗಳು ಮತ್ತು ಕ್ಯಾಮೆರಾವನ್ನು ಹೊಂದಿದೆ. ಇದರ ಮೂಲಕ ನೀವು ಫೋನ್‌ನಲ್ಲಿ ಉತ್ತಮ ಫೋಟೋ-ವಿಡಿಯೋಗ್ರಫಿ ಮಾಡಬಹುದು ಮತ್ತು ಈ ಸಾಧನವು ಬಹು-ಕಾರ್ಯಕ್ಕೆ ಉತ್ತಮ ಆಯ್ಕೆಯಾಗಿದೆ.

ಕೌಂಟರ್‌ ಪಾಯಿಂಟ್ ರಿಸರ್ಚ್ 2024 ರ ಪ್ರಕಾರ, 10 ಅತ್ಯುತ್ತಮ ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ 4 ಆ್ಯಪಲ್, ರೆಡ್ಮಿ 13C ಮತ್ತು ಸ್ಯಾಮ್‌ಸಂಗ್‌ ಫೋನುಗಳಿವೆ.

ಆ್ಯಪಲ್ ಐಫೋನ್ 15 ಮತ್ತು ಸ್ಯಾಮ್​ಸಂಗ್:

ಆ್ಯಪಲ್ ಐಫೋನ್ 15 ಮಾರುಕಟ್ಟೆಗೆ ಬಂದಾಗಿನಿಂದ, ಇದು ಜನರ ಮೆಚ್ಚಿನ ಆಯ್ಕೆ ಆಗಿದೆ. ಈ ಫೋನ್ ಟಾಪ್ 10 ಅತ್ಯುತ್ತಮ ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ಕೌಂಟರ್‌ ಪಾಯಿಂಟ್ ರಿಸರ್ಚ್ 2024 ವರದಿಯ ಪ್ರಕಾರ, 2024 ರ ಮಧ್ಯದಲ್ಲಿ ಐಫೋನ್ 15 ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿದ್ದು, ನಂತರ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಅಷ್ಟೇ ಅಲ್ಲ, 2022ರಲ್ಲಿ ಬಂದ ಆ್ಯಪಲ್ ಐಫೋನ್ 14 ಕೂಡ ಈ ಪಟ್ಟಿಯಲ್ಲಿ ಸೇರಿದೆ.

ಆ್ಯಪಲ್ ಐಫೋನ್ 15 ಬೆಲೆಯ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಇದರ ಆರಂಭಿಕ ಬೆಲೆ 64,900 ರೂ. ಇದರ ಪ್ರೊ ಮ್ಯಾಕ್ಸ್ ಮಾದರಿಯ ಐಫೋನ್15 Pro Max ನ ಆರಂಭಿಕ ಬೆಲೆ ರೂ. 1,28,900 ಆಗಿದೆ. ಆ್ಯಪಲ್ ಐಫೋನ್ 15 ಪ್ರೊನ ಆರಂಭಿಕ ಬೆಲೆ ರೂ. 1,03,999 ಇದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋನುಗಳು:

ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ 5 ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋನ್‌ಗಳು ಸೇರಿವೆ. ಸ್ಯಾಮ್​ಸಂಗ್ ಗ್ಯಾಲಕ್ಸಿ A ಸರಣಿಯಲ್ಲಿ ಗ್ಯಾಲಕ್ಸಿ A15 4G, ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G, ಸ್ಯಾಮ್​ಸಂಗ್ ಗ್ಯಾಲಕ್ಸಿ A05 ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ A35 ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಿವೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ A15 4G ನ ಆರಂಭಿಕ ಬೆಲೆ ರೂ. 12,990 ಆಗಿದೆ, ಇದನ್ನು ಹೊರತುಪಡಿಸಿ ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G ನ ಆರಂಭಿಕ ಬೆಲೆ ರೂ. 15,499 ಆಗಿದೆ.

ಇದನ್ನೂ ಓದಿ: ಶಾಕಿಂಗ್: ವಾಟ್ಸ್​ಆ್ಯಪ್ ಕಾಲ್ ನಿಮ್ಮ ಲೊಕೇಷನ್ ಟ್ರ್ಯಾಕ್ ಮಾಡುತ್ತೆ: ತಕ್ಷಣ ಹೀಗೆ ಮಾಡಿ

ಶವೋಮಿ ರೆಡ್ಮಿ 13C:

ಆ್ಯಪಲ್ ಮತ್ತು ಸ್ಯಾಮ್‌ಸಂಗ್‌ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ನಂತರ, 10,000 ರೂ. ಗಿಂತ ಕಡಿಮೆ ಬೆಲೆಯ ಶವೋಮಿ ಕಂಪನಿಯ ಫೋನ್‌ಗಳು ಸಹ ಸ್ಥಾನ ಪಡೆದಿವೆ. ಶವೋಮಿ ರೆಡ್ಮಿ 13C ಡಿಸೆಂಬರ್ 2023 ರಲ್ಲಿ ಮಾರುಕಟ್ಟೆಗೆ ಬಂತು. ಈ ಸ್ಮಾರ್ಟ್‌ಫೋನ್‌ನ ಬೆಲೆ 10,000 ರೂ. ಗಿಂತ ಕಡಿಮೆ. ಈ ಫೋನ್ ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಈ ಫೋನ್ 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ HD+ ಡಿಸ್‌ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಇದರ ಪ್ರಮುಖ ಹೈಲೇಟ್ಸ್. ಮೀಡಿಯಾಟೆಕ್ ಹಿಲಿಯೊ G85 SoC ಜೊತೆಗೆ Mali G52 GPUನೊಂದಿಗೆ ಬರುತ್ತದೆ. ಟ್ರಿಪಲ್ ಕ್ಯಾಮೆರಾಗಳಿಂದ ಕೂಡಿದ್ದು 50MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು ಆಕ್ಸಿಲರಿ ಲೆನ್ಸ್ ನೀಡಲಾಗಿದೆ. ಮುಂಭಾಗದ ಕ್ಯಾಮೆರಾ 8MP ಶೂಟರ್​ನಲ್ಲಿದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. 5G ಬೆಂಬಲ ಕೂಡ ಪಡೆದುಕೊಂಡಿದ್ದು, ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:48 am, Mon, 9 December 24