Tech Tips: ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ನಿಮ್ಮ ಮೊಬೈಲ್ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?

ನೀವು ನಿಮ್ಮ ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಿಮ್ ನಂಬರ್ ಅನ್ನು ಬೇರೆಯವರಿಗೆ ವರ್ಗಾವಣೆ ಮಾಡುವ ಮೊದಲು ಕಂಪನಿಗಳು ಹಲವಾರು ಪ್ರಮುಖ ಕೆಲಸಗಳನ್ನು ಮಾಡುತ್ತವೆ. ಮೊದಲನೆಯದಾಗಿ, ನೀವು 60 ದಿನಗಳವರೆಗೆ ಸಿಮ್ ಅನ್ನು ರಿಚಾರ್ಜ್ ಮಾಡದಿದ್ದಾಗ ಅದು ನಿಷ್ಕ್ರಿಯಗೊಳ್ಳುತ್ತದೆ.

Tech Tips: ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ನಿಮ್ಮ ಮೊಬೈಲ್ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2024 | 3:14 PM

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡ್ಯುಯಲ್ ಸಿಮ್ ಬಳಸುವುದು ಕಾಮನ್ ಆಗಿದೆ. ಒಂದು ಸಿಮ್ ಅನ್ನು ತನ್ನ ವೈಯಕ್ತಿಕ ಅಥವಾ ಕುಟುಂಬಕ್ಕಾಗಿ ಇಟ್ಟಿದ್ದರೆ ಇನ್ನೊಂದು ಸಿಮ್ ಅನ್ನು ಕೆಲಸದ ವಿಚಾರಕ್ಕೆಂದು ಇಟ್ಟುಕೊಂಡಿರುತ್ತಾರೆ. ಕೆಲವರು ಮೂರು, ನಾಲ್ಕು ಸಿಮ್ ಅನ್ನು ಕೂಡ ಬಳಸುವವರಿದ್ದಾರೆ. ಹೆಚ್ಚಿನವರು ವೈಯಕ್ತಿಕ ಸಿಮ್ ಅಥವಾ ತುರ್ತು ಸಮಯಕ್ಕೆಂದು ಇಟ್ಟಿರುವ ಸಿಮ್​ಗೆ ರಿಚಾರ್ಜ್ ಮಾಡಲು ಮರೆತುಬಿಡುತ್ತಾರೆ. ಇಂದು ಮೊಬೈಲ್ ರಿಚಾರ್ಜ್ ಬೆಲೆ ಗಗನಕ್ಕೇರಿರುವುದು ಕೂಡ ಇದಕ್ಕೊಂದು ಕಾರಣ. ಆದರೆ, ನೀವು ಹೀಗೆ ರಿಚಾರ್ಜ್ ಮಾಡದೆ ಸಿಮ್ ಅನ್ನು ಇಟ್ಟರೆ ಅದನ್ನು ಕಂಪನಿ ಬ್ಲಾಕ್ ಮಾಡುತ್ತದೆ. ಬಳಿಕ ಆ ನಂಬರ್ ಅನ್ನು ಇನ್ನೊಬ್ಬರಿಗೆ ನೀಡಲಾಗುತ್ತದೆ.

ಟೆಲಿಕಾಂ ನಿಯಮದಂತೆ ನಿರ್ಧಿಷ್ಟ ಅವದಿಯ ಒಳಗೆ ಒಂದು ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗುತ್ತದೆ. ಆದರೆ, ಹೆಚ್ಚಿನ ಜನರು ಹೀಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಏಕೆಂದರೆ, ಕೆಲವರಿಗೆ ಆ ಸಂಖ್ಯೆಯು ವಿಶೇಷವಾಗಿರುತ್ತದೆ ಅಥವಾ ಪ್ರಮುಖ ಕೆಲಸಗಳಿಗೆ ಆ ನಂಬರ್ ನೀಡಿರುತ್ತಾರೆ. ಹಾಗಾದರೆ ನೀವು ನಿಮ್ಮ ಸಿಮ್​ಗೆ ರಿಚಾರ್ಜ್ ಮಾಡದಿದ್ದರೆ ಕಂಪನಿ ಎಷ್ಟು ದಿನಗಳಲ್ಲಿ ಬೇರೆಯವರಿಗೆ ಆ ನಂಬರ್ ನೀಡುತ್ತದೆ ಎಂಬುದನ್ನು ನೋಡೋಣ.

ನೀವು ನಿಮ್ಮ ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಿಮ್ ನಂಬರ್ ಅನ್ನು ಬೇರೆಯವರಿಗೆ ವರ್ಗಾವಣೆ ಮಾಡುವ ಮೊದಲು ಕಂಪನಿಗಳು ಹಲವಾರು ಪ್ರಮುಖ ಕೆಲಸಗಳನ್ನು ಮಾಡುತ್ತವೆ. ಮೊದಲನೆಯದಾಗಿ, ನೀವು 60 ದಿನಗಳವರೆಗೆ ಸಿಮ್ ಅನ್ನು ರಿಚಾರ್ಜ್ ಮಾಡದಿದ್ದಾಗ ಅದು ನಿಷ್ಕ್ರಿಯಗೊಳ್ಳುತ್ತದೆ. ಇದಾದ ಬಳಿಕ ಪುನಃ ರಿಚಾರ್ಜ್ ಮಾಡಲೆಂದು 6 ರಿಂದ 9 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಸಂದರ್ಭ ನೀವು ಆ ಸಂಖ್ಯೆಯನ್ನು ರೀಚಾರ್ಜ್ ಮಾಡಿ ಮತ್ತೆ ಸಕ್ರಿಯಗೊಳಿಸಬಹುದು.

ನಂತರವೂ ನೀವು ಸಿಮ್ ಬಳಸದಿದ್ದರೆ, ಕಂಪನಿಯು ಹಲವಾರು ಎಚ್ಚರಿಕೆಗಳನ್ನು ನೀಡುತ್ತದೆ. ಅಂತಿಮವಾಗಿ ಕಂಪನಿಯು ಸಿಮ್ ಬ್ಲಾಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ನಂತರ ಕೆಲವೇ ತಿಂಗಳುಗಳಲ್ಲಿ ಈ ಸಿಮ್ ಸಂಖ್ಯೆಯನ್ನು ಇನ್ನೊಬ್ಬ ಬಳಕೆದಾರರಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಸಿಮ್ ಅನ್ನು ವರ್ಗಾಯಿಸಲು ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ.

ಇದನ್ನೂ ಓದಿ: ನಿಮ್ಮ ಪ್ರದೇಶದಲ್ಲಿ ಯಾವ ನೆಟ್‌ವರ್ಕ್ ಉತ್ತಮವಾಗಿದೆ?: ಕಂಡುಹಿಡಿಯಲು ಜಸ್ಟ್ ಹೀಗೆ ಮಾಡಿ

ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿದರೆ ಏನು ಮಾಡಬೇಕು?:

ಟೆಲಿಕಾಂ ಅನಾಲಿಟಿಕ್ಸ್​ ಫಾರ್ ಫ್ರಾಡ್​ ಮ್ಯಾನೇಜ್​ಮೆಂಟ್​ ಆ್ಯಂಡ್ ಕನ್​ಸ್ಯೂಮರ್​ ಪ್ರೊಟೆಕ್ಷನ್ (TAFCOP) ಮೂಲಕ ಸಿಮ್ ಕಾರ್ಡ್​ ಪರಿಶೀಲನೆಗೆ ಭಾರತೀಯ ದೂರಸಂಪರ್ಕ ಇಲಾಖೆ ಅವಕಾಶ ಕಲ್ಪಿಸಿದೆ. ಈ ವೆಬ್​ಸೈಟ್ ಮೂಲಕ ನಮ್ಮ ದಾಖಲೆಗಳನ್ನು ಬಳಸಿ ಬೇರೆ ಯಾರಾದರೂ ಸಿಮ್ ಖರೀದಿಸಿದ್ದಾರೆಯೇ ಅಥವಾ ಉಪಯೋಗಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯಬಹುದು.

ಇದಕ್ಕಾಗಿ ಕೇಂದ್ರ ಸರ್ಕಾರದ ಅಧಿಕೃತ ವೆಬ್​ಸೈಟ್ ಆಗಿರುವ ಸಂಚಾರ್​ಸಾಥಿಗೆ ಭೇಟಿ ನೀಡಿ

ಸಂಚಾರ್​ಸಾಥಿ ವೆಬ್​ಸೈಟ್​​ನ ಹೋಮ್​ ಪೇಜ್​ನಲ್ಲಿ Know your mobile connections TAFCOP ಎಂಬುದನ್ನು ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ

ನಿಮ್ಮ ಮೊಬೈಲ್​ಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿದ ಕೂಡಲೇ ಲಾಗಿನ್ ಆಗುತ್ತದೆ

ನಿಮ್ಮ ಹೆಸರಿನ ದಾಖಲೆಯಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬುದು ಸಂಖ್ಯೆ ಸಹಿತ ಅಲ್ಲಿ ಕಾಣಿಸುತ್ತದೆ

ಸಂಖ್ಯೆಗಳ ಎದುರಿಗೆ Not My Number, Not Required, Required ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ

ಒಂದು ವೇಳೆ ನೀವು ಖರೀದಿ ಮಾಡದೇ ಇರುವ ಸಂಖ್ಯೆ ಯಾವುದಾದರೂ ಅಲ್ಲಿ ಕಾಣಿಸಿದರೆ Not My Number ಅಥವಾ Not Required ಆಯ್ಕೆಯನ್ನು ಕ್ಲಿಕ್ ಮಾಡಿ ರಿಪೋರ್ಟ್ ಮಾಡಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ