Tech Tips: ನಿಮ್ಮ ಪ್ರದೇಶದಲ್ಲಿ ಯಾವ ನೆಟ್‌ವರ್ಕ್ ಉತ್ತಮವಾಗಿದೆ?: ಕಂಡುಹಿಡಿಯಲು ಜಸ್ಟ್ ಹೀಗೆ ಮಾಡಿ
ಇದಕ್ಕೆ ನಿಮ್ಮ ಪ್ರದೇಶದಲ್ಲಿ ಹೆಚ್ಚು ನೆಟ್‌ವರ್ಕ್ ಹೊಂದಿರುವ ಟೆಲಿಕಾಂ ಆಪರೇಟರ್‌ನ ಸಿಮ್ ಅನ್ನು ನೀವು ಪಡೆಯಬೇಕೆಂದರೆ ಸಿಮ್ ಖರೀದಿಸುವ ಮೊದಲು, ನಿಮ್ಮ ಪ್ರದೇಶದಲ್ಲಿ ಯಾವ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿದೆ ಎಂದು ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಬೇಕು. ಇದು ಹೇಗೆ?.
ಇತ್ತೀಚಿನ ದಿನಗಳಲ್ಲಿ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾದ ರೀಚಾರ್ಜ್ ಯೋಜನೆಗಳು ದುಬಾರಿಯಾಗಿವೆ. ಇದರಿಂದ ಮೊಬೈಲ್ ಬಳಕೆದಾರರ ಮಾಸಿಕ ಖರ್ಚು ಕೂಡ ಹೆಚ್ಚಾಗಿದೆ. ಇದಲ್ಲದೇ ದೇಶಾದ್ಯಂತ ಮೊಬೈಲ್ ಬಳಕೆದಾರರು ಕಳಪೆ ನೆಟ್ ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಲ್ ಡ್ರಾಪ್ ಮತ್ತು ಮೊಬೈಲ್ ಸಿಗ್ನಲ್ ಕೊರತೆಯಿಂದಾಗಿ ಬಳಕೆದಾರರಿಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ಬಳಕೆದಾರರು ತಮ್ಮ ಕಚೇರಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ಆದಾಗ್ಯೂ, ಈ ಎಲ್ಲ ಸಮಸ್ಯೆಯನ್ನು ತಪ್ಪಿಸಲು ಒಂದು ಉಪಾಯವಿದೆ. ಇದಕ್ಕೆ ನಿಮ್ಮ ಪ್ರದೇಶದಲ್ಲಿ ಹೆಚ್ಚು ನೆಟ್‌ವರ್ಕ್ ಹೊಂದಿರುವ ಟೆಲಿಕಾಂ ಆಪರೇಟರ್‌ನ ಸಿಮ್ ಅನ್ನು ನೀವು ಪಡೆಯಬೇಕು. ಸಿಮ್ ಖರೀದಿಸುವ ಮೊದಲು, ನಿಮ್ಮ ಪ್ರದೇಶದಲ್ಲಿ ಯಾವ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿದೆ ಎಂದು ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಬೇಕು. ಇದು ಹೇಗೆ?.
ಈ 2 ವಿಧಾನಗಳ ಮೂಲಕ ಸಿಗ್ನಲ್ ಹುಡುಕಿ:
ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಸಿಮ್ ಕಾರ್ಡ್ ಬಳಕೆದಾರರು nperf ಮತ್ತು ಓಪನ್ ಸಿಗ್ನಲ್ ಸಹಾಯದಿಂದ ಆನ್‌ಲೈನ್‌ನಲ್ಲಿ ಮೊಬೈಲ್ ನೆಟ್ವರ್ಕ್ ಅನ್ನು ಪತ್ತೆ ಮಾಡಬಹುದು. ನಂತರ, ನಿಮ್ಮ ಪ್ರದೇಶದಲ್ಲಿ ಉತ್ತಮ ನೆಟ್‌ವರ್ಕ್ ಇರುವ ಕಂಪನಿಯ ಸಿಮ್ ಕಾರ್ಡ್ ಅನ್ನು ನೀವು ಖರೀದಿಸಬಹುದು. ಇಲ್ಲಿ ಓಪನ್ ಸಿಗ್ನಲ್ ಮೊಬೈಲ್ ಅಪ್ಲಿಕೇಶನ್ ಆಗಿದೆ. Nperf ನೀವು 2G, 3G, 4G ಮತ್ತು 5G ನೆಟ್‌ವರ್ಕ್‌ಗಳನ್ನು ಪತ್ತೆಹಚ್ಚುವ ಸಹಾಯದ ವೆಬ್‌ಸೈಟ್ ಆಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಬಳಕೆದಾರರಿಗೆ ಓಪನ್ ಸಿಗ್ನಲ್ ಅಪ್ಲಿಕೇಶನ್ ಲಭ್ಯವಿದೆ.
ಈ ರೀತಿಯ ನೆಟ್‌ವರ್ಕ್ ವ್ಯಾಪ್ತಿಯನ್ನು ಹುಡುಕಿ:
nperf ಜಾಗತಿಕ ವೆಬ್‌ಸೈಟ್ ಆಗಿದೆ. ಈ ವೆಬ್‌ಸೈಟ್ ಆನ್‌ಲೈನ್‌ನಲ್ಲಿ ದೇಶದ ಎಲ್ಲಾ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯ ಲಭ್ಯತೆಯನ್ನು ತೋರಿಸುತ್ತದೆ. ಉತ್ತಮ ವಿಷಯವೆಂದರೆ ಈ ವೆಬ್‌ಸೈಟ್ ಸಂಪೂರ್ಣವಾಗಿ ಉಚಿತವಾಗಿದೆ. ಇದರ ಬಳಕೆಗೆ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
nperf ವೆಬ್‌ಸೈಟ್‌ನಿಂದ ನೆಟ್‌ವರ್ಕ್ ವ್ಯಾಪ್ತಿಯನ್ನು ಹುಡುಕುವುದು ಹೇಗೆ?:
ಮೊದಲಿಗೆ nperf ವೆಬ್‌ಸೈಟ್ nperf.com ಗೆ ಭೇಟಿ ನೀಡಿ.
ನಂತರ ಮೇಲ್ಭಾಗದಲ್ಲಿರುವ ಮೈ ಅಕೌಂಟ್ ಆಯ್ಕೆಯಲ್ಲಿ ವಿವರಗಳನ್ನು ನಮೂದಿಸುವ ಮೂಲಕ ಪ್ರೊಫೈಲ್ ಅನ್ನು ರಚಿಸಿ.
ನೀವು nperf ವೆಬ್‌ಸೈಟ್‌ನಲ್ಲಿ ಡ್ಯಾಶ್‌ಬೋರ್ಡ್ ಅನ್ನು ನೋಡುತ್ತೀರಿ, ಅಲ್ಲಿ ಮ್ಯಾಪ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ದೇಶ ಮತ್ತು ಮೊಬೈಲ್ ನೆಟ್‌ವರ್ಕ್ ಆಯ್ಕೆಯನ್ನು ಆರಿಸಿ.
ಇದನ್ನೂ ಓದಿ: ಇವು ವಿಶ್ವದಲ್ಲೇ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ಸ್, ನಿಮ್ಮ ಬಳಿ ಈ ಫೋನ್ ಇದೆಯೇ?
ಇದರ ನಂತರ ಸ್ಥಳ ಅಥವಾ ನಗರವನ್ನು ಹುಡುಕಿ.
ಈಗ ಮೊಬೈಲ್ ಬಳಕೆದಾರರು ತಮ್ಮ ಪ್ರದೇಶದ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಬಿಎಸ್ಎನ್ಎಲ್ ಸಿಗ್ನಲ್ ಅನ್ನು ಹುಡುಕಲು ಸಾಧ್ಯವಾಗುತ್ತದೆ.
ಓಪನ್ ಸಿಂಗನಲ್ ಅಪ್ಲಿಕೇಶನ್‌ನೊಂದಿಗೆ ನೆಟ್‌ವರ್ಕ್ ಅನ್ನು ಹೇಗೆ ಹುಡುಕುವುದು?:
ಮೊದಲನೆಯದಾಗಿ, ಆಂಡ್ರಾಯ್ಡ್ ಅಥವಾ ಐಒಎಸ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆಪ್ ಸ್ಟೋರ್‌ನಿಂದ ಓಪನ್ ಸಿಗ್ನಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
ಇದಾದ ನಂತರ ನೀವು ಕೆಳಭಾಗದಲ್ಲಿ 5 ಆಯ್ಕೆಗಳನ್ನು ನೋಡುತ್ತೀರಿ.
ಇದರಲ್ಲಿ ನೀವು ಮೂರನೇ ಆಯ್ಕೆಯ ಮ್ಯಾಪ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ನೀವು ಸ್ಥಳ, ಆಪರೇಟರ್ ಮತ್ತು ನೆಟ್‌ವರ್ಕ್ ಪ್ರಕಾರವನ್ನು ಆಯ್ಕೆ ಮಾಡಬೇಕು. ಇದರ ನಂತರ ನಿಮ್ಮ ಪ್ರದೇಶದಲ್ಲಿ ಪ್ರಸ್ತುತ ಮೊಬೈಲ್ ನೆಟ್ವರ್ಕ್ ಅನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗುತ್ತದೆ.
ಈ ಅಪ್ಲಿಕೇಶನ್‌ನಲ್ಲಿ ನೀವು ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಕವರೇಜ್ ಅನ್ನು ಪಡೆಯುತ್ತೀರಿ.
ಮ್ಯಾಪ್ನಲ್ಲಿ ಗೋಚರಿಸುವ ಹಸಿರು ಲೈನ್ಗಳು ಉತ್ತಮ ನೆಟ್‌ವರ್ಕ್ ವ್ಯಾಪ್ತಿಯನ್ನು ಸೂಚಿಸುತ್ತವೆ. ಹಾಗೆಯೇ ಕೆಂಪು ಎಂದರೆ ನೆಟ್ ವರ್ಕ್ ಚೆನ್ನಾಗಿಲ್ಲ. ಹಳದಿ ಎಂದರೆ ಕಡಿಮೆ ನೆಟ್‌ವರ್ಕ್ ಕವರೇಜ್ ಇದೆ ಎಂದರ್ಥ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ