WhatsApp Tips: ಶಾಕಿಂಗ್: ವಾಟ್ಸ್ಆ್ಯಪ್ ಕಾಲ್ ನಿಮ್ಮ ಲೊಕೇಷನ್ ಟ್ರ್ಯಾಕ್ ಮಾಡುತ್ತೆ: ತಕ್ಷಣ ಹೀಗೆ ಮಾಡಿ
ವಾಟ್ಸ್ಆ್ಯಪ್ ಮೂಲಕ ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಫೋಟೋಗಳು, ವಿಡಿಯೋಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳುತ್ತೀರಿ. ಕಂಪನಿಯು ಇದನ್ನು ಅತ್ಯಂತ ಸುರಕ್ಷಿತ ವೇದಿಕೆ ಎಂದು ಕರೆಯುತ್ತದೆ, ಆದರೆ ನೀವು ಮಾಡುವ ಒಂದು ತಪ್ಪು ನಿಮಗೆ ದೊಡ್ಡ ತೊಂದರೆ ಉಂಟುಮಾಡಬಹುದು.
ವಾಟ್ಸ್ಆ್ಯಪ್ ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಇದು ಭಾರತದಲ್ಲಿ 55 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ವಾಟ್ಸ್ಆ್ಯಪ್ ನಲ್ಲಿ ಸಂದೇಶಗಳನ್ನು ಕಳುಹಿಸುವುದರ ಜೊತೆಗೆ, ಆಡಿಯೋ-ವಿಡಿಯೋ ಕರೆಯನ್ನು ಸಹ ಮಾಡಬಹುದು. ಆದಾಗ್ಯೂ, ಇತ್ತೀಚೆಗೆ ವಾಟ್ಸ್ಆ್ಯಪ್ ನಿಂದ ಡಿಜಿಟಲ್ ವಂಚನೆಯ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ.
ವಾಟ್ಸ್ಆ್ಯಪ್ ಮೂಲಕ ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಫೋಟೋಗಳು, ವಿಡಿಯೋಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳುತ್ತೀರಿ. ಕಂಪನಿಯು ಇದನ್ನು ಅತ್ಯಂತ ಸುರಕ್ಷಿತ ವೇದಿಕೆ ಎಂದು ಕರೆಯುತ್ತದೆ, ಆದರೆ ನೀವು ಮಾಡುವ ಒಂದು ತಪ್ಪು ನಿಮಗೆ ದೊಡ್ಡ ತೊಂದರೆ ಉಂಟುಮಾಡಬಹುದು.
ವಾಟ್ಸ್ಆ್ಯಪ್ ನಲ್ಲಿ ನೀವು ಕರೆ ಮಾಡುವಾಗ ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಬಹುದು. ಆದಾಗ್ಯೂ, ನಿಮ್ಮ ಫೋನ್‌ನಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಮಾಡುವ ಮೂಲಕ ನೀವು ಲೋಕೇಷನ್ ಟ್ರ್ಯಾಕಿಂಗ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ವಾಟ್ಸ್ಆ್ಯಪ್ ಕರೆ ಮಾಡಲು ಇಂಟರ್ನೆಟ್ ಅಗತ್ಯವಿದೆ. ಕರೆ ಸಮಯದಲ್ಲಿ, ವಾಟ್ಸ್ಆ್ಯಪ್ ಮೂಲಕ ಒಂದು ಸಾಧನದಿಂದ ಇನ್ನೊಂದಕ್ಕೆ ಸಂಪರ್ಕಿಸಬಹುದು. ಕೆಲವೊಮ್ಮೆ ಸ್ಕ್ಯಾಮರ್‌ಗಳು ವಾಟ್ಸ್ಆ್ಯಪ್ ಮೂಲಕ ನಿಮಗೆ ಆಡಿಯೋ ವಿಡಿಯೋ ಕರೆಗಳನ್ನು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಈ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಲೊಕೇಷನ್ ಟ್ರ್ಯಾಕಿಂಗ್ ಅನ್ನು ನಿಲ್ಲಿಸಬಹುದು.
IP ವಿಳಾಸದಲ್ಲಿ ಕರೆಗಳ ವೈಶಿಷ್ಟ್ಯ: ಮೆಟಾದ ಈ ತ್ವರಿತ ಸಂದೇಶ ರವಾನೆ ವೇದಿಕೆಯಲ್ಲಿ, ಕರೆಗಳಲ್ಲಿ IP ವಿಳಾಸವನ್ನು ರಕ್ಷಿಸಿ ಎಂಬ ವೈಶಿಷ್ಟ್ಯವನ್ನು ಒದಗಿಸಲಾಗಿದೆ. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ, ಕರೆ ಸಮಯದಲ್ಲಿ ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಯಾರಿಗೂ ಸಾಧ್ಯವಿಲ್ಲ. ಈ ವೈಶಿಷ್ಟ್ಯವು ವಾಟ್ಸ್ಆ್ಯಪ್ ಸಂವಹನಕ್ಕಾಗಿ ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ.
ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು, ಮೊದಲು ನಿಮ್ಮ ಫೋನ್‌ನಲ್ಲಿ ವಾಟ್ಸ್ಆ್ಯಪ್ ಅನ್ನು ತೆರೆಯಿರಿ. ಈಗ ಮುಖಪುಟದ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ. ಇದರ ನಂತರ ವಾಟ್ಸ್ಆ್ಯಪ್ ನ ಸೆಟ್ಟಿಂಗ್ಸ್ ಮತ್ತು ಗೌಪ್ಯತೆ ವೈಶಿಷ್ಟ್ಯಕ್ಕೆ ಹೋಗಿ. ಇಲ್ಲಿ ನೀವು ಅಂಡ್ವಾನ್ಸ್ಡ್ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಮುಂದುವರಿಯಿರಿ.
ಮುಂದಿನ ವಿಂಡೋದಲ್ಲಿ ನೀವು ಪ್ರೊಟೆಕ್ಟ್ ಐಪಿ ಅಂಡ್ರಸ್ ಇನ್ ಕಾಲ್ (ಕರೆಗಳಲ್ಲಿ IP ವಿಳಾಸವನ್ನು ರಕ್ಷಿಸು) ಆಯ್ಕೆಯನ್ನು ಕಾಣಬಹುದು. ನೀವು ಇದನ್ನು ಆನ್ ಮಾಡಿದರೆ ಕರೆ ಸಮಯದಲ್ಲಿ ರಿಸೀವರ್‌ನಿಂದ ನಿಮ್ಮ IP ವಿಳಾಸವನ್ನು ಮರೆಮಾಡಲಾಗುತ್ತದೆ. ಇದು ಲೊಕೇಷನ್ ಟ್ರ್ಯಾಕಿಂಗ್ ಅನ್ನು ನಿಲ್ಲಿಸುತ್ತದೆ.
ಇದನ್ನೂ ಓದಿ: ಸ್ಮಾರ್ಟ್ ಟಿವಿಯನ್ನು ಸ್ವಚ್ಛವಾಗಿಡಲು ಏನೆಲ್ಲ ಮಾಡಬೇಕು?: ಈ 8 ಹಂತಗಳನ್ನು ಅನುಸರಿಸಿ
ವಾಟ್ಸ್ಆ್ಯಪ್ನಲ್ಲಿ ಹೊಸ ಟೈಪಿಂಗ್ ಇಂಡಿಕೇಟರ್:
ಮೆಟಾ ವಾಟ್ಸ್ಆ್ಯಪ್ಗಾಗಿ ಹೊಸ ವೈಶಿಷ್ಟ್ಯವನ್ನು ಘೋಷಿಸಿದೆ. ಇದರ ಮೂಲಕ ಯಾರಾದರೂ ಮೆಸೇಜ್ ಟೈಪ್ ಮಾಡುವಾಗ ಇದು ನಿಮಗೆ ತೋರಿಸುತ್ತದೆ. ಈ ವೈಶಿಷ್ಟ್ಯವು ಟೈಪ್ ಮಾಡುತ್ತಿರುವ ವ್ಯಕ್ತಿಯ ಪ್ರೊಫೈಲ್ ಚಿತ್ರದೊಂದಿಗೆ ನಿಮ್ಮ ಚಾಟ್ ಡಿಸ್ಪ್ಲೇಯ ಕೆಳಭಾಗದಲ್ಲಿ ‘….’ ಈ ದೃಶ್ಯ ಸೂಚನೆಗಳನ್ನು ಪ್ರದರ್ಶಿಸುತ್ತದೆ. ಒಂದೇ ಸಮಯದಲ್ಲಿ ಅನೇಕ ಜನರು ಮೆಸೇಜ್ಗಳನ್ನು ಕಳುಹಿಸುವ ಗ್ರೂಪ್ ಚಾಟ್‌ಗಳಲ್ಲಿ ಇದು ವಿಶೇಷವಾಗಿ ಸಹಾಯಕವಾಗಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಬಳಸುವ ಪ್ರತಿಯೊಬ್ಬರಿಗೂ ಇದು ಲಭ್ಯವಾಗುತ್ತಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ