ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಉಪಯೋಗಿಸದ ವ್ಯಕ್ತಿಯೇ ಇಲ್ಲ. ಸಮೀಕ್ಷೆಯೊಂದರ ಪ್ರಕಾರ, ಇಡೀ ಜಗತ್ತಿನಲ್ಲಿ ಇಂದು ಶೇ. 91 ರಷ್ಟು ಮಂದಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರಂತೆ. ಈ ಹಿಂದೆ ಫೋನ್ಗಳನ್ನು ಸಂವಹನಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಸ್ಮಾರ್ಟ್‌ಫೋನ್ ಎಂಬುದು ಮನರಂಜನೆಯ ಪ್ರಮುಖ ಮಾಧ್ಯಮವಾಗಿ ಬಿಟ್ಟಿದೆ. ಇಂದು ಇಂಟರ್ನೆಟ್ ಕೂಡ 5ಜಿ (5G) ಮೂಲಕ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದರಿಂದ ಸ್ಮಾರ್ಟ್‌ಫೋನ್ ಮೂಲಕ ಜನರು ವಿಡಿಯೋಗಳನ್ನು (Video) ನೋಡುವುದು, ಡೌನ್‌ಲೋಡ್ ಮಾಡುವುದು ಅತ್ಯಂತ ಸುಲಭವಾಗಿದೆ. ಹೀಗಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಅಶ್ಲೀಲ ಚಿತ್ರಗಳನ್ನು ನೋಡುವುದು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ (Ban). ಆದರೂ ಅನೇಕ ಜನರು ಇದನ್ನು ರಹಸ್ಯವಾಗಿ ವೀಕ್ಷಿಸುತ್ತಾರೆ. ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸಿದರೆ, ಅದರಿಂದ ಉಂಟಾಗುವ ತೊಂದರೆ ಬಗ್ಗೆ ತಿಳಿದರೆ ಅಚ್ಚರಿಗೊಳ್ಳುತ್ತೀರಿ. ಇಂತಹ ವಿಡಿಯೋಗಳನ್ನು ವೀಕ್ಷಿಸುವುದು ಕೆಲವು ಜನರಿಗೆ ಚಟ ಆಗಿರುತ್ತದೆ. ಅವರು ಇದನ್ನು ನೋಡಲು ಹಣವನ್ನು ಕೂಡ ಪಾವತಿಸಲು ಸಿದ್ಧರಿರುತ್ತಾರೆ. ಆದರೆ ಇದೊಂದು ದೊಡ್ಡ ಸ್ಕ್ಯಾಮ್ ಎಂಬುದು ನೆನಪಿರಲಿ.
ಈ ರೀತಿ ಹಣ ಕೇಳಿ ಅಶ್ಲೀಲ ಚಿತ್ರವನ್ನು ವೀಕ್ಷಿಸುವಂತೆ ಮಾಡುವವರು ನಿಮ್ಮ ಸ್ಮಾರ್ಟ್‌ಫೋನ್ ಒಳಗೆ ಸುಲಭವಾಗಿ ಕಾಲಿಡಬಹುದು. ನಿಮ್ಮ ಮೊಬೈಲ್ಗೆ ಮಾಲ್‌ವೇರ್ ಅನ್ನು ಸೇರಿಸಬಹುದು, ಎಲ್ಲಾ ಮಾಹಿತಿಯನ್ನು ಕದಿಯಬಹುದು. ಇದರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಆಗಬಹುದು. ದೇಶದಲ್ಲಿ ಈರೀತಿಯ ಅನೇಕ ಪ್ರಕರಣಗಳು ನಡೆಯುತ್ತಲೇ ಇದೆ.
JIO New Plans: ಐಪಿಎಲ್ 2023 ಆಗಮಿಸುತ್ತಿದ್ದಂತೆ ಜಿಯೋದಿಂದ ಬಂಪರ್ ಆಫರ್ ಘೋಷಣೆ
ಇಂಟರ್ನೆಟ್ ಮೂಲಕ ನಾವು ಏನನ್ನು ಬ್ರೌಸ್ ಮಾಡುತ್ತಿದ್ದೇವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಗೂಗಲ್ ಹೊಂದಿದೆ. ನೀವು ಅಶ್ಲೀಲ ಪದಗಳ ಕುರಿತು ಸರ್ಚ್ ಮಾಡಿದರೆ ಇದರ ಆಧಾರದ ಮೇಲೆ ನೀವು ಯಾವುದೇ ಪೇಜ್ ತೆರೆದರೂ ಅದರಲ್ಲಿ ಅಶ್ಲೀಲ ಚಿತ್ರಗಳ ಕುರಿತು ಜಾಹೀರಾತುಗಳು ಕಾಣಿಸುತ್ತದೆ. ನಿಮ್ಮ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ಅಂತೆಯೆ ಅನೇಕ ಬಾರಿ ಜನರು ಅಶ್ಲೀಲ ವೆಬ್‌ಸೈಟ್‌ಗಳಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಇದರ ಜೊತೆಗೆ ನಿಮಗೆ ತಿಳಿಯದೆ ಮತ್ತೊಂದು ಫೈಲ್ ಕೂಡ ಡೌನ್‌ಲೋಡ್ ಆಗುತ್ತದೆ. ಅಶ್ಲೀಲ ವಿಡಿಯೋ ಜೊತೆಗೆ ಮಾಲ್‌ವೇರ್ ಫೈಲ್ ಕೂಡ ಡೌನ್‌ಲೋಡ್ ಆಗಿ ನಿಮ್ಮ ವೈಯಕ್ತಿಕ ಫೋಟೋಗಳನ್ನು ಕದಿಯುತ್ತದೆ. ನಂತರ ಅವರು ನಿಮ್ಮನ್ನ ಬ್ಲ್ಯಾಕ್ ಮೇಲ್ ಮಾಡಬಹುದು. ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಯಾವುದೇ ವಿಷಯದ ಕುರಿತು ಸರ್ಚ್ ಮಾಡಿದರೆ ಅಥವಾ ಅಶ್ಲೀಲ ವಿಡಿಯೋವನ್ನು ವೀಕ್ಷಿಸುತ್ತಿದ್ದರೆ ಅದನ್ನು ಗುಪ್ತಚರ ಏಜೆನ್ಸಿಗಳು ಗಮನಿಸುತ್ತಿವೆ ಎಂಬುದು ನೆನಪಿರಬೇಕು. ಇದರಿಂದ ನಿಮಗೆ ಆಪತ್ತು ಉಂಟಾಗಬಹುದು.
ಅಶ್ಲೀಲ ಚಿತ್ರ ಮತ್ತು ಅಶ್ಲೀಲ ವಿಡಿಯೋಗಳನ್ನು ನೋಡುವುದರಿಂದ ಅನೇಕ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಕುತೂಹಲಕ್ಕೆ ನೋಡುವ ಕೇಳುವ ಅಶ್ಲೀಲ ವಿಚಾರಗಳು ಬರಬರುತ್ತಾ ವ್ಯಸನವಾಗಿ ತಿರುಗುತ್ತದೆ. ಇದು ವ್ಯಕ್ತಿಯ ಭಾವೋದ್ರೇಕಕ್ಕೆ ಕಾರಣವಾಗುವುದು. ಅದರಲ್ಲೂ ಹದಿ ಹರೆಯದವರಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕರಿಗೆ ಚಹಾ, ಕಾಫೀ, ಮದ್ಯ, ಸಿಗರೇಟ್‍ನಂತಹ ಚಟಗಳಂತೆ ಅಶ್ಲೀಲ ಚಿತ್ರಗಳ ವೀಕ್ಷಣೆಯೂ ಒಂದು ಚಟವಾಗಿ ಪರಿರ್ವನೆಯಾಗುತ್ತದೆ. ಹಾಗಾಗಿ ಈ ಬಗೆಯ ವಿಡಿಯೋಗಳನ್ನು ನೋಡುವುದು ನಿಲ್ಲಿಸಿದರೆ ಉತ್ತಮ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ