Realme C55: ರಿಯಲ್ ಮಿ C55 ಸ್ಮಾರ್ಟ್‌ಫೋನ್ ಮಾರಾಟ ಆರಂಭ: ಇದು ಬಜೆಟ್ ಬೆಲೆಯ ಬೆಸ್ಟ್ ಫೋನ್
ಭರ್ಜರಿ ಬ್ಯಾಟರಿ, ಉತ್ತಮ ಪ್ರೊಸೆಸರ್, ಕ್ಯಾಮೆರಾದಿಂದ ಕೂಡಿರುವ ಬಜೆಟ್ ಬೆಲೆಯ ರಿಯಲ್ ಮಿ C5 ಫೋನ್ ಇದೀಗ ಖರೀದಿಗೆ ಸಿಗುತ್ತಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಭಾರತದಲ್ಲಿ ಈಗೇನಿದ್ದರು ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳ (Budget Smartphone) ಕಾಲ. ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ನಾಲ್ಕು ಮೊಬೈಲ್ಗಳು ಬಜೆಟ್ ಬೆಲೆಗೆ ಬಿಡುಗಡೆ ಆಗುತ್ತವೆ. ಇದರಲ್ಲಿ ರಿಯಲ್ ಮಿ (Realme) ಕಂಪನಿಯ ಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಇದಕ್ಕಾಗಿಯೆ ಕಂಪನಿ ಹೆಚ್ಚಾಗಿ 15,000 ರೂ. ಒಳಗೆ ಆಕರ್ಷಕ ಫೀಚರ್ಗಳ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡುತ್ತಿದೆ. ಈ ಸಾಲಿಗೆ ಕಳೆದ ವಾರ ರಿಯಲ್ ಮಿ C55 (Realme C55) ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಸೇರ್ಪಡೆ ಮಾಡಿತ್ತು. ಭರ್ಜರಿ ಬ್ಯಾಟರಿ, ಉತ್ತಮ ಪ್ರೊಸೆಸರ್, ಕ್ಯಾಮೆರಾದಿಂದ ಕೂಡಿರುವ ಈ ಬಜೆಟ್ ಬೆಲೆಯ ಫೋನ್ ಇದೀಗ ಖರೀದಿಗೆ ಸಿಗುತ್ತಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಬೆಲೆ ಎಷ್ಟು-ಆಫರ್ ಏನು?:
ರಿಯಲ್ ಮಿ C55 ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ಗೆ 10,999 ರೂ. ಇದೆ. ಅಂತೆಯೆ 6GB RAM + 64GB ವೇರಿಯಂಟ್‌ಗೆ 11,999 ರೂ. ನಿಗದಿ ಮಾಡಲಾಗಿದೆ. ಇನ್ನು 8GB RAM + 128GB ಸ್ಟೋರೇಜ್ ಆಯ್ಕೆಗೆ 13,999 ರೂ. ಇದೆ. ಈ ಫೋನ್ ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಹಾಗೂ ರಿಯಲ್ ಮಿಯ ಅಧಿಕೃತ ಸೈಟ್ ಮೂಲಕ ಮಾರಾಟ ಕಾನುತ್ತಿದೆ. ಗ್ರಾಹಕರು HDFC ಮತ್ತು ICICI ಬ್ಯಾಂಕ್ ಮೂಲಕ ಪಡೆದುಕೊಂಡರೆ 1,000 ರೂ. ಗಳ ಇನ್‌ಸ್ಟಂಟ್ ರಿಯಾಯಿತಿ ಪಡೆಯಬಹುದು.
Tech Tips: ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಅನ್ನು ಕೆಲವೇ ಜನರಿಗೆ ಕಾಣುವಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
ಏನು ಫೀಚರ್ಸ್?:
ರಿಯಲ್ ಮಿ C55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಪಂಚ್-ಹೋಲ್ ನಾಚ್ ಕಟೌಟ್ ಶೈಲಿಯನ್ನು ಪಡೆದುಕೊಂಡಿದೆ. ಬೆಲೆಗೆ ತಕ್ಕಂತೆ ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 13 ಆಧಾರಿತ ರಿಯಲ್ ಮಿ UI 4.0 ನಲ್ಲಿ ರನ್ ಆಗಲಿದೆ. ಮೆಮೋರಿ ಕಾರ್ಟ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದಾಗಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್ ಅಳವಡಿಸಲಾಗಿದೆ.
ರಿಯಲ್ ಮಿ C55 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. 29 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಸೈಂಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. 3.5mm ಆಡಿಯೋ ಜ್ಯಾಕ್ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Tue, 28 March 23