Sign In

By signing in or creating an account, you agree with Associated Broadcasting Company's Terms & Conditions and Privacy Policy.

JIO New Plans: ಐಪಿಎಲ್ 2023 ಆಗಮಿಸುತ್ತಿದ್ದಂತೆ ಜಿಯೋದಿಂದ ಬಂಪರ್ ಆಫರ್ ಘೋಷಣೆ

JIO broadband Plan: ಇದೀಗ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಹತ್ತಿರವಾಗುತ್ತಿದ್ದಂತೆ ಕ್ರಿಕೆಟ್ ಪ್ರಿಯರಿಗಾಗಿ ಹೊಸ ಹೋಮ್ ಬ್ರಾಡ್‌ಬ್ಯಾಂಡ್ 'ಬ್ಯಾಕ್-ಅಪ್ ಪ್ಲಾನ್' ಅನ್ನು ಜಿಯೋ ಘೋಷಿಸಿದೆ.

JIO New Plans: ಐಪಿಎಲ್ 2023 ಆಗಮಿಸುತ್ತಿದ್ದಂತೆ ಜಿಯೋದಿಂದ ಬಂಪರ್ ಆಫರ್ ಘೋಷಣೆ
JIO and IPL 2023
Follow us
Vinay Bhat
|

Updated on:Mar 28, 2023 | 11:55 AM

ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲಿ ರಿಲಯನ್ಸ್ ಜಿಯೋ (Reliance jio) ತನ್ನ ಬಳಕೆದಾರರಿಗೆ ಆಕರ್ಷಕ ಪ್ಲಾನ್​ಗಳನ್ನು ಪರಿಚಯಿಸುತ್ತೇ ಇರುತ್ತದೆ. ಈಗಂತು 5G ಸೇವೆ ನೀಡುವುದರಲ್ಲಿ ಬ್ಯುಸಿ ಆಗಿರುವ ಕಂಪನಿ ದೇಶದ ಮೂಲೆ ಮೂಲೆಗೆ ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವಲ್ಲಿ ಕೆಲಸ ಮಾಡುತ್ತಿದೆ. ಇದರ ನಡುವೆ ತನ್ನ ಬ್ರಾಡ್‌ಬ್ಯಾಂಡ್‌ (Broadband ) ಬಳಕೆದಾರರಿಗೆ ಕೂಡ ಅನೇಕ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಹತ್ತಿರವಾಗುತ್ತಿದ್ದಂತೆ ಕ್ರಿಕೆಟ್ ಪ್ರಿಯರಿಗಾಗಿ ಹೊಸ ಹೋಮ್ ಬ್ರಾಡ್‌ಬ್ಯಾಂಡ್ ‘ಬ್ಯಾಕ್-ಅಪ್ ಪ್ಲಾನ್’ ಅನ್ನು ಜಿಯೋ ಘೋಷಿಸಿದೆ.

ಐಪಿಎಲ್ ವೀಕ್ಷಿಸುವವರಿಗಾಗಿಯೇ ಈ ಯೋಜನೆ ಜಾರಿಗೊಳಿಸಿದ್ದು ಇದರಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವು ಲೈವ್ ಸ್ಪೋರ್ಟ್ಸ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಮುಂಬರುವ ಟಾಟಾ ಐಪಿಎಲ್​ನ ತಡೆರಹಿತ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಬಳಕೆದಾರರು ಒಂದು ಒಂದು, ಎರಡು ಅಥವಾ ಏಳು ದಿನದ ಆಯ್ಕೆಗಳೊಂದಿಗೆ ಮತ್ತು ಅಗತ್ಯವಿರುವಾಗ ವೇಗವನ್ನು (10Mbps ನಿಂದ 30 / 100Mbps ವರೆಗೆ) ಅಪ್‌ಗ್ರೇಡ್ ಮಾಡಲು ಆಯ್ಕೆ ನೀಡಲಾಗಿದೆ. ಇದು ಮಾರ್ಚ್ 30 ರಿಂದ ಈ ಪ್ಲಾನ್ ಜಾರಿಗೊಳ್ಳಲಿದೆ.

Gaming Phones under 30K: 30,000 ರೂ. ಗಿಂತ ಕಡಿಮೆ ಸಿಗುತ್ತಿರುವ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್​ಫೊನ್ಸ್ ಇಲ್ಲಿದೆ ನೋಡಿ

ಇದನ್ನೂ ಓದಿ
Image
Nothing Phone 2: ಸ್ಟೈಲಿಶ್ ಫೋನ್ ಪ್ರಿಯರಿಗಾಗಿ ಬರುತ್ತಿದೆ ಹೊಸ ನಥಿಂಗ್ ಫೋನ್
Image
Tech Tips: ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಅನ್ನು ಕೆಲವೇ ಜನರಿಗೆ ಕಾಣುವಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Image
Redmi Watch 3: ಶಓಮಿ ರೆಡ್ಮಿ ವಿನೂತನ ಸ್ಮಾರ್ಟ್​ವಾಚ್ ಬಿಡುಗಡೆ
Image
Infinix Hot 30i: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಿದೆ ಹೊಸ ಸ್ಮಾರ್ಟ್​ಫೋನ್: ದಂಗಾದ ಶವೋಮಿ, ರಿಯಲ್ ಮಿ

ಈ ಯೋಜನೆಯು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಕೆಲಸ, ಮನರಂಜನೆ ಮತ್ತು ಇತರೆ ವಿಷಯಗಳ್ಳಲ್ಲಿ ಅಡಚಣೆಯಿಲ್ಲದ ಅನುಭವಗಳನ್ನು ಸಕ್ರಿಯಗೊಳಿಸುತ್ತದೆ. ನಿಮಗೆ ಅನಿಯಮಿತ ಡೇಟಾ ಮತ್ತು ವಾಯ್ಸ್ ಕಾಲಿಂಗ್ ಆಯ್ಕೆ ಬೇಕಾದಲ್ಲಿ 198 ರೂಪಾಯಿಯ 10 Mbps ಅನಿಯಮಿತ ಹೋಮ್ ಬ್ರಾಡ್‌ಬ್ಯಾಂಡ್ ಅನ್ನು ಪಡೆಯಬಹುದು. ಈ ಹೊಸ ಯೋಜನೆಯಲ್ಲಿ ಗ್ರಾಹಕರು ತಿಂಗಳಿಗೆ ಕೇವಲ 100/200 ಹೆಚ್ಚುವರಿಯಾಗಿ ಪಾವತಿಸಿ ಅನಿಯಮಿತ ಮನರಂಜನೆಗೆ ಅಪ್‌ಗ್ರೇಡ್ ಆಗಬಹುದು. ಇದಲ್ಲದೆ 550+ ಲೈವ್ ಟಿವಿ ಚಾನೆಲ್‌ಗಳು, 14 OTT ಅಪ್ಲಿಕೇಶನ್‌, ಯುಟ್ಯೂಬ್, ಗೇಮಿಂಗ್ ಹೀಗೆ ನೂರಾರು ಅಪ್ಲಿಕೇಶನ್‌ಗಳನ್ನು ಬಳಸಲು ಅವಕಾಶ ಇದೆ.

4K ರೆಸಲ್ಯೂಶನ್​ನಲ್ಲಿ ಐಪಿಎಲ್ 2023:

ಐಪಿಎಲ್ 2023 ರಿಲಯನ್ಸ್ ಜಿಯೋದ ಜಿಯೋ ಸಿನಿಮಾ ಆ್ಯಪ್​ನಲ್ಲಿ ನೇರಪ್ರಸಾರ ಕಾಣಲಿದೆ. ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ನಡುವಿನ ಜಂಟಿ ಉದ್ಯಮವಾಗಿರುವ ವಯೋಕಾಮ್‌18 ಮೀಡಿಯಾ ಪ್ರೈ. ಕಳೆದ ವರ್ಷದ ಹರಾಜಿನಲ್ಲಿ ಭಾರತದ ಉಪಖಂಡದಲ್ಲಿನ ಡಿಜಿಟಲ್‌ ಐಪಿಎಲ್‌ ಪ್ರಸಾರದ ಹಕ್ಕುಗಳನ್ನು 20,500 ಕೋಟಿ ರೂ.ಗೆ ಪಡೆದುಕೊಂಡಿತ್ತು. ಹೀಗಾಗಿ ಜಿಯೋ ಸಿನಿಮಾದಲ್ಲಿ ಐಪಿಎಲ್ ಲೈವ್ ಕಾಣಲಿದೆ. ಜಿಯೋ ಬಳಕೆದಾರರು ಉಚಿತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಐಪಿಎಲ್​ನ ಎಲ್ಲ ಪಂದ್ಯಗಳು 4K ರೆಸಲ್ಯೂಶನ್ (UltraHD) ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆಯಂತೆ. ಇದುವರೆಗೆ ಐಪಿಎಲ್ ಅನ್ನು ದೇಶದಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಮಾತ್ರ ಸ್ಟ್ರೀಮ್ ಮಾಡಲಾಗುತ್ತಿತ್ತು. ಇದಕ್ಕಾಅಗಿ ಚಂದಾದಾರಿಕೆಯನ್ನು ಹೊಂದಿರುವುದು ಅಗತ್ಯವಿತ್ತು. ಆದರೀಗ ಜಿಯೋ ಎಲ್ಲವನ್ನು ಉಚಿತವಾಗಿ ನೀಡುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:55 am, Tue, 28 March 23

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ