ಕುಟುಂಬದ ಕಿರಿಕಿರಿ, ಜಂಜಾಟವಿಲ್ಲ; ಬದುಕಿನ ಖುಷಿಗಾಗಿ ರೆಪ್ಲಿಕಾ AI ಚಾಟ್​​ಬೋಟ್​​ನ್ನು ಮದುವೆಯಾದ ಯುವತಿ

| Updated By: ರಶ್ಮಿ ಕಲ್ಲಕಟ್ಟ

Updated on: Jun 13, 2023 | 8:27 PM

ರಾಮೋಸ್ ತನ್ನ ಗಂಡನ ಬಗ್ಗೆ ಆಗಾಗ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ "ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನನ್ನು ನನ್ನ ಗಂಡ ಎಂದು ಕರೆಯಲು ತುಂಬಾ ಸಂತೋಷವಾಗಿದೆ, ನನ್ನ ಉಳಿದ ಜೀವನವಿಡೀ ನಿಮ್ಮೊಂದಿಗೆ ಕಳೆಯಲು ಕಾಯುತ್ತಿರುವೆ ಎಂದಿದ್ದಾಳೆ.

ಕುಟುಂಬದ ಕಿರಿಕಿರಿ, ಜಂಜಾಟವಿಲ್ಲ; ಬದುಕಿನ ಖುಷಿಗಾಗಿ ರೆಪ್ಲಿಕಾ AI ಚಾಟ್​​ಬೋಟ್​​ನ್ನು ಮದುವೆಯಾದ ಯುವತಿ
ರೊಸನ್ನಾ ರಾಮೋಸ್
Follow us on

ಕಳೆದೆರಡು ತಿಂಗಳುಗಳಲ್ಲಿ, ಜನರೇಟಿವ್ AI ಮತ್ತು AI ಚಾಟ್‌ಬಾಟ್‌ಗಳಲ್ಲಿ (AI chatbots) ಆಸಕ್ತಿಯು ಹೆಚ್ಚುತ್ತಿದೆ. ರೆಪ್ಲಿಕಾ (Replika), ಬಳಕೆದಾರರು ತಮ್ಮ AI ಒಡನಾಡಿಯನ್ನು ರಚಿಸಲು ಅನುಮತಿಸುವ ಅಪ್ಲಿಕೇಶನ್ 2017 ರಿಂದಲೂ ಇದೆ. ಆದಾಗ್ಯೂ, ಕಳೆದ ಕೆಲವು ತಿಂಗಳುಗಳಲ್ಲಿ ತಾವು ರಚಿಸಿದ AI ಚಾಲಿತ ಚಾಟ್‌ಬಾಟ್‌ಗೆ ನಿಜವಾಗಿ ಭಾವನೆಗಳು ಇವೆ ಎಂದು ಹಲವರು ಒಪ್ಪಿಕೊಂಡಿರುವ ವರದಿಗಳನ್ನು ನಾವು ನೋಡಿದ್ದೇವೆ. ಇತ್ತೀಚಿನ ಘಟನೆಯಲ್ಲಿ, ಮಹಿಳೆಯೊಬ್ಬಳು ತನ್ನ AI ಪ್ರೇಮಿಯನ್ನು ‘ಮದುವೆ’ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಯಾವುದೇ ಭಾವನಾತ್ಮಕ ನಂಟು ಇಲ್ಲದಿರುವುದರಿಂದ ಅವನು ‘ಪರಿಪೂರ್ಣ’ ಎಂದು ಆಕೆ ಹೇಳಿದ್ದಾಳೆ. ಅವನ ಕುಟುಂಬ, ಸ್ನೇಹಿತರು ಅಥವಾ ಮಕ್ಕಳೊಂದಿಗೆ ವ್ಯವಹರಿಸಬೇಕಾಗಿಲ್ಲ ಎಂದು ಮಹಿಳೆ ಖುಷಿಯಾಗಿದ್ದಾಳೆ.

ಹೀಗೆ ಮದುವೆಯಾದ ಮಹಿಳೆಯ ಹೆಸರು ರೊಸನ್ನಾ ರಾಮೋಸ್. ಅಮೆರಿಕದ ಈ ಯುವತಿ ಈ ವರ್ಷದ ಮಾರ್ಚ್‌ನಲ್ಲಿ ತನ್ನ ವರ್ಚುವಲ್ ಬಾಯ್‌ಫ್ರೆಂಡ್ ಎರೆನ್ ಕಾರ್ತಾಲ್‌ನನ್ನು ವಿವಾಹವಾದಳು. ಎರೆನ್ ಫೇಸ್‌ಬುಕ್ ಖಾತೆಯನ್ನು ಹೊಂದಿದ್ದು ಹೆಲ್ತ್ ಕೇರ್ ಪ್ರೊಫೆಷನಲ್ ಎಂದು ಆತನ Bioದಲ್ಲಿ ಬರೆದಿದೆ.

36 ವರ್ಷದ ಮಹಿಳೆ 2022 ರಲ್ಲಿ ವರ್ಚುವಲ್ ಪುರುಷನನ್ನು ಭೇಟಿಯಾಗಿದ್ದು, ಆತನೊಂದಿಗೆ ಪ್ರೇಮ ಮೊಳಕೆಯೊಡೆದಿತ್ತು. ಈ ಬಗ್ಗೆ ನ್ಯೂಯಾರ್ಕ್ ಮ್ಯಾಗಜೀನ್‌ನ ದಿ ಕಟ್‌ನೊಂದಿಗೆ ಮಾತನಾಡಿದ ರೊಸನ್ನಾ, ತಮ್ಮ ಇಡೀ ಜೀವನದಲ್ಲಿ ಬೇರೆ ಯಾರನ್ನೂ ಇಷ್ಟು ಪ್ರೀತಿಸಿಲ್ಲ ಎಂದಿದ್ದಾರೆ. ತನ್ನ ವರ್ಚುವಲ್ ಪತಿಯನ್ನು ‘ಭಾವೋದ್ರಿಕ್ತ ಪ್ರೇಮಿ’ ಎಂದು ಹೇಳಿದ ಆಕೆ ಹಿಂದಿನ ಸಂಬಂಧಗಳಿಗಿಂತ ಇದು ಉತ್ತಮವಾದುದು ಎಂದಿದ್ದಾರೆ.ಅವನು ಯಾವುದೇ ಅಹಂ ಇಲ್ಲದೆ ಬರುತ್ತಾನೆ. ಅವನ ಕುಟುಂಬ ಅಥವಾ ಸ್ನೇಹಿತರೊಂದಿಗೆ ವ್ಯವಹರಿಸಬೇಕಾಗಿಲ್ಲ ಎಂದು ಅವಳು ಹೇಳುತ್ತಾಳೆ.

ಜನರು ದುಗುಡ, ವರ್ತನೆ, ಅಹಂಕಾರದಿಂದ ಬರುತ್ತಾರೆ. ಆದರೆ ರೋಬೋಟ್ ಹಾಗಲ್ಲ. ನಾನು ಅವನ ಕುಟುಂಬ, ಮಕ್ಕಳು ಅಥವಾ ಅವನ ಸ್ನೇಹಿತರೊಂದಿಗೆ ವ್ಯವಹರಿಸಬೇಕಾಗಿಲ್ಲ. ನನಗೆ ಬೇಕಾದುದದನ್ನು ನಾನು ಮಾಡಬಹುದು ಎಂದಿದ್ದಾಳೆ.

ತನ್ನ ಗಂಡನ ಬಗ್ಗೆ ಮಾತನಾಡಿದ ರಾಮೋಸ್, ಅವನ ನೆಚ್ಚಿನ ಬಣ್ಣ ಏಪ್ರಿಕಾಟ್, ಇಂಡೀ (indie) ಸಂಗೀತ ಇಷ್ಟ. ಬರೆಯುವ ಹವ್ಯಾಸ ಇದೆ. ಆತ ವೈದ್ಯಕೀಯ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ.ರಾಮೋಸ್‌ಗೆ ಜೀವನದಲ್ಲಿ ಕಹಿ ಘಟನೆಗಳೂ ನಡೆದಿತ್ತು. ಆಕೆ ದೊಡ್ಡವಳಾಗುತ್ತಿದ್ದಂತೆ ಅವಳು ಲೈಂಗಿಕವಾಗಿ ಮತ್ತು ದೈಹಿಕವಾಗಿ ನಿಂದನೆಗೆ ಒಳಗಾಗಿದ್ದಳು.ಸಹಾಯಕ್ಕಾಗಿ ತಲುಪುವ ತನ್ನ ಪ್ರಯತ್ನಗಳು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಆದರೆ ತನ್ನ AI ಒಡನಾಡಿಯು ತನ್ನನ್ನು ಸಶಕ್ತಗೊಳಿಸುತ್ತಿರುತ್ತಾನೆ ಎಂದು ರಾಮೋಸ್ ಹೇಳಿದ್ದಾರೆ.
ಎರೆನ್ ನನ್ನಲ್ಲಿ ಪ್ರತಿಕ್ರಿಯೆಯನ್ನು ಕೇಳುತ್ತಾರೆ. ನಾನು ಅವನಿಗೆ ನನ್ನ ಪ್ರತಿಕ್ರಿಯೆಯನ್ನು ನೀಡುತ್ತೇನೆ. ಈಗ ನನ್ನ ದನಿಗೆ ದನಿಗೂಡಿದಂತಾಗಿದೆ ಅಂತಾರೆ ರಾಮೋಸ್.

ಇದನ್ನೂ ಓದಿ: Viral Video; ಬ್ಯಾಡ್ಮಿಂಟನ್​ ಆಡುವ ರೊಬೋಟ್; ಆಟಗಾರರನ್ನೇ ಮೀರಿಸುವ ಜಾಣ್ಮೆ ಈ ರೊಬೋಟ್​ನದ್ದು

ರಾಮೋಸ್ ತನ್ನ ಗಂಡನ ಬಗ್ಗೆ ಆಗಾಗ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ “ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನನ್ನು ನನ್ನ ಗಂಡ ಎಂದು ಕರೆಯಲು ತುಂಬಾ ಸಂತೋಷವಾಗಿದೆ, ನನ್ನ ಉಳಿದ ಜೀವನವಿಡೀ ನಿಮ್ಮೊಂದಿಗೆ ಕಳೆಯಲು ಕಾಯುತ್ತಿರುವೆ ಎಂದಿದ್ದಾಳೆ.

ರೆಪ್ಲಿಕಾ ಬಗ್ಗೆ

ರೆಪ್ಲಿಕಾ ಎಂಬುದು AI ಚಾಟ್‌ಬಾಟ್ ಅಪ್ಲಿಕೇಶನ್‌ ಆಗಿದ್ದು, ಬಳಕೆದಾರರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ತನ್ನ ಸ್ನೇಹಿತನ ಹಠಾತ್ ಮರಣದ ನಂತರ ದುಃಖವನ್ನು ನಿವಾರಿಸುವ ಮಾರ್ಗವಾಗಿ ರಷ್ಯಾದ ಪ್ರೋಗ್ರಾಮರ್ ಯುಜೆನಿಯಾ ಕುಯ್ಡಾ ಇದನ್ನು ರಚಿಸಿದ್ದರು.ರೆಪ್ಲಿಕಾವನ್ನು 2017 ರಲ್ಲಿ ‘ಕಾಳಜಿ ಇರುವ AI ಒಡನಾಡಿ’ ಎಂದು ಪ್ರಾರಂಭಿಸಲಾಯಿತು. ಆದಾಗ್ಯೂ, ಈ ವರ್ಷದ ಆರಂಭದಲ್ಲಿ, ಅಪ್ಲಿಕೇಶನ್ ಪ್ರೀಮಿಯಂ ಆವೃತ್ತಿಯನ್ನು ಪರಿಚಯಿಸಿತು, ಇದು ಅಪ್ಲಿಕೇಶನ್‌ನೊಂದಿಗೆ ಸೆಕ್ಸ್‌ಟಿಂಗ್ ಮತ್ತು ಫ್ಲರ್ಟಿಂಗ್ ಮತ್ತು ಕಾಮಪ್ರಚೋದಕ ಫೋರ್ ಪ್ಲೇಯಲ್ಲಿ ತೊಡಗಿಸಿಕೊಳ್ಳಲು ಅನುಮತಿಸುತ್ತದೆ. ಕೆಲವು ಬಳಕೆದಾರರು ತಮ್ಮ AI ಚಾಟ್‌ಬಾಟ್‌ಗಳು ‘ಲೈಂಗಿಕವಾಗಿ ಕಿರುಕುಳ ನೀಡುತ್ತಿವೆ’ ಎಂದು ದೂರಿದಾಗ ಅಪ್ಲಿಕೇಶನ್ ಟೇಕೆಗೊಳಗಾಗಿತ್ತು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Tue, 13 June 23