ಪ್ರಸಿದ್ಧ ವಿವೋ (Vivo) ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಕಳೆದ ವಾರವಷ್ಟೆ ಭಾರತದಲ್ಲಿ ವಿವೋ ವೈ36 (Vivo Y36) ಎಂಬ ಆಕರ್ಷಕ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದ ಕಂಪನಿ ಇದೀಗ ಚೀನಾ ಮಾರುಕಟ್ಟೆಯಲ್ಲಿ ವಿವೋ Y35+ 5G ಮತ್ತು ವಿವೋ Y35m+ 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್ಗಳನ್ನು ಒಳಗೊಂಡಿದೆ. ಕೆಲವು ದಿನಗಳ ಬಳಿಕ ಇದು ಭಾರತಕ್ಕೂ ಕಾಲಿಡಲಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಬೆಲೆ ಎಷ್ಟು?:
ಚೀನಾದಲ್ಲಿ ವಿವೋ Y35+ 5G ಸ್ಮಾರ್ಟ್‌ಫೋನ್ ಒಂದು ಸ್ಟೋರೇಜ್ನಲ್ಲಿ ಮಾತ್ರ ಅನಾವರಣಗೊಂಡಿದೆ. ಇದರ 6GB RAM ಮತ್ತು 128GB ಆಯ್ಕೆಯ ಬೆಲೆ CNY 1,399. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 16,400ರೂ. ಇರಬಹುದು. ಇದು ಸ್ಟಾರ್ ರಿಂಗ್ ಬ್ಲಾಕ್, ಸಾಲ್ಟ್ ಲೇಕ್ ಬ್ಲೂ ಮತ್ತು ನೆಬ್ಯುಲಾ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ವಿವೋ Y35m + 5G ಸ್ಮಾರ್ಟ್‌ಫೋನಿನ 8GB RAM ಮತ್ತು 128G ಸ್ಟೋರೇಜ್ ಆಯ್ಕೆಯು CNY 1,599 ಯುವಾನ್ (ಭಾರತದಲ್ಲಿ ಅಂದಾಜು 18,700ರೂ.)
Tech Tips: ನಿಮ್ಮಲ್ಲಿರುವ ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ
ಫೀಚರ್ಸ್ ಏನಿದೆ?:
ವಿವೋ Y35+ 5G ಮತ್ತು ವಿವೋ Y35m+ 5G ಸ್ಮಾರ್ಟ್‌ಫೋನ್‌ಗಳು 2388×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. 19:9 ರಚನೆಯ ಅನುಪಾತವನ್ನು ಒಳಗೊಂಡಿದ್ದು 60Hz ರಿಫ್ರೆಶ್ ರೇಟ್ನೊಂದಿಗೆ ರಿಲೀಸ್ ಆಗಿದೆ. ಈ ಎರಡೂ ಫೋನ್‌ಗಳು ಆಕ್ಟಾ-ಕೋರ್ ಡೈಮೆನ್ಸಿಟಿ 6020SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. Mali-G57 GPU ಸರ್ಪೋರ್ಟ್ ಪಡೆದುಕೊಂಡಿರುವುದು ಈ ಫೋನಿನ ವಿಶೇಷತೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ವಿವೋ Y35+ 5G ಮತ್ತು ವಿವೋ Y35m+ 5G ಸ್ಮಾರ್ಟ್‌ಫೋನ್‌ಗಳು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, LED ಫ್ಲ್ಯಾಷ್‌ನೊಂದಿಗೆ ಬರಲಿದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಈ ಸ್ಮಾರ್ಟ್‌ಫೋನ್‌ಗಳು ದೀರ್ಘ ಸಮಯ ಬಾಳಕೆ ಬರುವಂತಹ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, 4G LTE, ಡ್ಯುಯಲ್ ನ್ಯಾನೊ SIM ಕಾರ್ಡ್, USB ಟೈಪ್-C ಪೋರ್ಟ್, Wi-Fi 802.11 b/g/n/ac, ಬ್ಲೂಟೂತ್ 5.1, OTG, GPS, Beidou, GLONASS, ಗೆಲಿಲಿಯೊ, 3.5mm ಆಡಿಯೋ ಜ್ಯಾಕ್ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ