ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ವಿವೋ Y200 5G ಯ (Vivo Y200 5G) ಹೊಸ ಸ್ಟೋರೇಜ್ ಸಾಮರ್ಥ್ಯವನ್ನು ಬಿಡುಗಡೆ ಮಾಡುವ ಜೊತೆಗೆ ಹಲವಾರು ಪ್ರಕಟಣೆಗಳನ್ನು ಹೊರಡಿಸಿದೆ. ವಿವೋ Y200 5G ಹ್ಯಾಂಡ್‌ಸೆಟ್ ಅನ್ನು ಮೂಲತಃ ಒಂದೇ 8GB/128GB ಮಾದರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ 8GB/256GB ರೂಪಾಂತರದಲ್ಲಿಯೂ ಲಭ್ಯವಿದೆ. ಹೆಚ್ಚುವರಿಯಾಗಿ, ಕಂಪನಿ ತನ್ನ ಎರಡು ಫೋನುಗಳ ಬೆಲೆಯಲ್ಲಿ ಕೂಡ ಇಳಿಕೆ ಮಾಡಿದೆ. ವಿವೋ Y27 ಮತ್ತು ವಿವೋ T2 5G ಫೋನ್‌ಗಳಿಗೆ ಬೆಲೆ ಕಡಿಮೆ ಮಾಡಲಾಗಿದೆ.
ವಿವೋ Y200 5G ಈಗ ಭಾರತದಲ್ಲಿ 8GB/256GB ಸಂಗ್ರಹಣೆಯಲ್ಲಿ ಲಭ್ಯವಿದೆ. ಇದರ ಬೆಲೆ 23,999 ರೂ ಆಗಿದೆ. 8GB/128GB ಆವೃತ್ತಿಗೆ ರೂ. 21,999 ಇದೆ. ಈ ಹ್ಯಾಂಡ್‌ಸೆಟ್ ಅಮೆಜಾನ್, ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಪಾರ್ಟ್ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಲಭ್ಯವಿರುತ್ತದೆ. ಗ್ರಾಹಕರು ದಿನಕ್ಕೆ 49 ರೂಪಾಯಿಗಳನ್ನು ಪಾವತಿಸುವ ಮೂಲಕ Y200 5G ಅನ್ನು ಸುಲಭವಾದ EMI ಆಯ್ಕೆಯಲ್ಲಿ ಖರೀದಿಸಬಹುದು.
Earbud Songs: ಒಂದೇ ಇಯರ್ಬಡ್ಸ್ನಲ್ಲಿ ಎರಡು ಸಾಂಗ್ ಪ್ಲೇ ಮಾಡೋದು ಹೇಗೆ?
ಡಿಸ್‌ಪ್ಲೇ : 6.67-ಇಂಚಿನ FHD+ AMOLED ಡಿಸ್‌ಪ್ಲೇ ಜೊತೆಗೆ 2400 ×1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, 800 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಮತ್ತು ಪಂಚ್-ಹೋಲ್ ಕಟೌಟ್ ಇದೆ.
ಪ್ರೊಸೆಸರ್ : ಕ್ವಾಲ್ಕಂ ಸ್ನಾಪ್ಡ್ರಾಗನ್ 4 Gen 1 6nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno GPU ನೀಡಲಾಗಿದೆ.
RAM ಮತ್ತು ಸಂಗ್ರಹಣೆ : 8GB LPDDR4x RAM ಮತ್ತು 128GB/256GB ಸಂಗ್ರಹಣೆಯನ್ನು ಮೈಕ್ರೋ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.
ಓಎಸ್ : ಆಂಡ್ರಾಯ್ಡ್ 13 ಜೊತೆಗೆ ಫನ್‌ಟಚ್ ಓಎಸ್ 13
ಕ್ಯಾಮೆರಾಗಳು : f/1.79 ದ್ಯುತಿರಂಧ್ರದೊಂದಿಗೆ 64MP ಪ್ರಾಥಮಿಕ ಕ್ಯಾಮೆರಾ ಮತ್ತು f/2.4 ದ್ಯುತಿರಂಧ್ರದೊಂದಿಗೆ 2MP ಸಂವೇದಕ, LED ಫ್ಲ್ಯಾಷ್ ಮತ್ತು Aura LED ನೀಡಲಾಗಿದೆ. ಮುಂಭಾಗದ ಕ್ಯಾಮೆರಾ 16MP ನಿಂದ ಕೂಡಿದೆ.
ಬ್ಯಾಟರಿ : 4800mAh ಬ್ಯಾಟರಿ ಜೊತೆಗೆ 44W ಫಾಸ್ಟ್ ಚಾರ್ಜಿಂಗ್.
ವಿವೋ Y27
ವಿವೋ Y27 ಈಗ 6GB/128GB ಮಾದರಿಗೆ 11,999 ರೂ. ಗಳಲ್ಲಿ ಲಭ್ಯವಿದೆ. ಈ ಹ್ಯಾಂಡ್ಸೆಟ್ ರೂ. 14,999 ಕ್ಕೆ ಬಿಡುಗಡೆಯಾಗಿತ್ತು. ಗ್ರಾಹಕರು SBI, ಯೆಸ್ ಬ್ಯಾಂಕ್, IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, DBS ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು IndusInd ಬ್ಯಾಂಕ್ ಅನ್ನು ಬಳಸಿಕೊಂಡು ವಿ-ಶೀಲ್ಡ್‌ನಂತಹ ಹೆಚ್ಚುವರಿ ಪ್ರಯೋಜನಗಳೊಂದಿಗೆ ರೂ. 1,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಹೊಸ ಬೆಲೆಯು ಫೆಬ್ರವರಿ 1 ರಿಂದ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳ ಮೂಲಕ ಜಾರಿಗೆ ಬರಲಿದೆ.
ವಿವೋ T2 5G
ವಿವೋ T2 ಸ್ಮಾರ್ಟ್‌ಫೋನ್ 6GB/128GB ಮಾದರಿಗೆ ರೂ. 15,999 ಮತ್ತು 8GB/128GB ಮಾದರಿಗೆ ರೂ. 17,999 ನಿಗದಿ ಮಾಡಲಾಗಿದೆ. ಹೊಸ ಬೆಲೆ ಫೆಬ್ರವರಿ 1 ರಿಂದ ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್‌ನಲ್ಲಿ ಜಾರಿಗೆ ಬರಲಿದೆ. ಈ ಹ್ಯಾಂಡ್‌ಸೆಟ್ ಮೂಲತಃ 6GB/128GB ಮಾದರಿಗೆ ರೂ. 18,999 ಮತ್ತು 8GB/128GB ಆವೃತ್ತಿಗೆ ರೂ. 20,999 ಇತ್ತು.
ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ