ನಥಿಂಗ್ ಫೋನ್ ಪ್ರಿಯರಿಗೆ ಬಂಪರ್ ಸುದ್ದಿ: ನಥಿಂಗ್ 2A ಬಗ್ಗೆ ಹೊರಬಿತ್ತು ಹೊಸ ವಿಚಾರ

Nothing Phone 2A: ನಥಿಂಗ್ ಫೋನ್ 2A ಫೋನ್‌ನ ನಿಖರವಾದ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ. ಆದರೆ, ಈ ಸ್ಮಾರ್ಟ್‌ಫೋನ್‌ ಕೆಲವು ಜನಪ್ರಿಯ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಹೊಸ ಫೋನ್ (2A) ಟೋನ್ ಡೌನ್ ಆವೃತ್ತಿಯಾಗಿದೆ. ಇದು ನಥಿಂಗ್ ಫೋನ್ (2) ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ.

ನಥಿಂಗ್ ಫೋನ್ ಪ್ರಿಯರಿಗೆ ಬಂಪರ್ ಸುದ್ದಿ: ನಥಿಂಗ್ 2A ಬಗ್ಗೆ ಹೊರಬಿತ್ತು ಹೊಸ ವಿಚಾರ
Nothing Phone 2A
Follow us
Vinay Bhat
|

Updated on:Feb 03, 2024 | 12:36 PM

ಪ್ರಪಂಚದಾದ್ಯಂತ ಸ್ಮಾರ್ಟ್‌ಫೋನ್‌ಗಳ (Smartphones) ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎಲ್ಲಾ ಕಂಪನಿಗಳು ಕಾಲಕಾಲಕ್ಕೆ ಹೊಸ ಮೊಬೈಲ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಆದರೆ ಈ ಸ್ಮಾರ್ಟ್‌ಫೋನ್‌ಗಳ ಪೈಕಿ ಕೆಲವು ಬ್ರಾಂಡ್‌ಗಳ ಫೋನ್‌ಗಳು ಮಾತ್ರ ಹೆಚ್ಚು ಜನಪ್ರಿಯತೆಯನ್ನು ಹೊಂದಿವೆ. ಈ ಪಟ್ಟಿಯಲ್ಲಿ, ನಥಿಂಗ್ ಫೋನ್ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ನಥಿಂಗ್ ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದೆ. ಜನರು ನೂತನ ನಥಿಂಗ್ ಫೋನ್​ಗೆ ಕಾದು ಕುಳಿತಿದ್ದಾರೆ. ಅಂತವರಿಗೆ ಕಂಪನಿ ನಥಿಂಗ್ ಫೋನ್ 2A ಬಿಡುಗಡೆ ಮಾಡಲು ಸಜ್ಜಾಗಿದೆ.

ನಥಿಂಗ್ ಫೋನ್ 2A ಫೋನ್‌ನ ನಿಖರವಾದ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ. ಆದರೆ, ಈ ಸ್ಮಾರ್ಟ್‌ಫೋನ್‌ ಕೆಲವು ಜನಪ್ರಿಯ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಹೊಸ ಫೋನ್ (2A) ಟೋನ್ ಡೌನ್ ಆವೃತ್ತಿಯಾಗಿದೆ. ಇದು ನಥಿಂಗ್ ಫೋನ್ (2) ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ. ನಥಿಂಗ್ ಫೋನ್ (2A) ದೈನಂದಿನ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುವ ಮೂಲಕ ಕೋರ್ ಬಳಕೆದಾರರ ಅಗತ್ಯಗಳನ್ನು ದ್ವಿಗುಣಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಬೆಲೆ ಇಳಿಕೆ: ಪೋಕೋ M6 5G ಫೋನಿಗೆ ಭರ್ಜರಿ ಡಿಮ್ಯಾಂಡ್

ಇದನ್ನೂ ಓದಿ
Image
ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿದೆ ಯಾಕೆ?
Image
ಶಾಕಿಂಗ್: ಕೇವಲ 6,799 ರೂ. ಗೆ ಹೊಸ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಲಾವಾ
Image
ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿವೆ ಬೊಂಬಾಟ್ ಸ್ಮಾರ್ಟ್​ಫೋನ್​ಗಳು
Image
ಒಂದೇ ಇಯರ್​ಬಡ್ಸ್​​ನಲ್ಲಿ ಎರಡು ಸಾಂಗ್ ಪ್ಲೇ ಮಾಡಿ

ನಥಿಂಗ್ ಫೋನ್ (2) ಭಾರತದಲ್ಲಿ ರೂ. 44,999 ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಆಗಿತ್ತು. ಇದೀಗ ಫೋನ್ (2A) ಬೆಲೆ ರೂ. 40,000ಕ್ಕಿಂತ ಕಡಿಮೆ ಇರಬಹುದೆಂದು ಅಂದಾಜಿಸಲಾಗಿದೆ. ನಥಿಂಗ್ (2A) ರೂ. 35,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಬಹುದು. ಕಂಪನಿಯು ನಥಿಂಗ್ (2A) ಗ್ಲಿಫ್ ಡೆವಲಪರ್ ಕಿಟ್ ಅನ್ನು ಬಿಡುಗಡೆ ಮಾಡುವುದಾಗಿ ಕೂಡ ಘೋಷಿಸಿದೆ. ಗ್ಲಿಫ್ ಇಂಟರ್ಫೇಸ್ ಅನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಈ ಫೋನ್ ಥರ್ಡ್ ಪಾರ್ಟಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ನೀಡುತ್ತದೆ.

ನಥಿಂಗ್ ಫೋನ್ 2A 120Hz ರಿಫ್ರೆಶ್ ದರದೊಂದಿಗೆ OLED ಡಿಸ್​ಪ್ಲೇಯನ್ನು ಹೊಂದಿದೆ. ಈ ವೈಶಿಷ್ಟ್ಯವು ಸಾಮಾನ್ಯವಾಗಿ ಭಾರತದಲ್ಲಿ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಕಂಡುಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಸುಮಾರು 6.7 ಇಂಚುಗಳಷ್ಟು ಡಿಸ್​ಪ್ಲೇ ಗಾತ್ರವನ್ನು ಹೊಂದಿದೆ. ಇದು 8GB + 128GB ರೂಪಾಂತರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಆಂಡ್ರಾಯ್ಡ್ 14 OS ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. 50 MP ಕ್ಯಾಮೆರಾ ಸೆಟಪ್‌ನೊಂದಿಗೆ, ಈ ಫೋನ್ ಕ್ಯಾಮೆರಾ ಪ್ರಿಯರನ್ನು ಆಕರ್ಷಿಸಲಿದೆ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published On - 12:35 pm, Sat, 3 February 24