Smartphones: ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿವೆ ಬೊಂಬಾಟ್ ಸ್ಮಾರ್ಟ್​ಫೋನ್​ಗಳು: ಇಲ್ಲಿದೆ ಪಟ್ಟಿ

Upcoming Smartphones: ಈ ಹಿಂದೆ ಕೇವಲ ಸಂದೇಶ ಮತ್ತು ದೂರವಾಣಿ ಕರೆಗಳಿಗೆ ಬಳಸುತ್ತಿದ್ದ ಫೋನ್‌ಗಳು ಈಗ ಹೆಚ್ಚಿದ ತಂತ್ರಜ್ಞಾನದಿಂದ ಪ್ರತಿಯೊಂದು ಸಣ್ಣ ಅಗತ್ಯಕ್ಕೂ ಅನಿವಾರ್ಯವಾಗಿವೆ. ಈ ಹಿನ್ನಲೆಯಲ್ಲಿ ನಿರೀಕ್ಷೆಗೂ ಮೀರಿದ ಬೇಡಿಕೆಯ ಹಿನ್ನಲೆಯಲ್ಲಿ ಪ್ರತಿ ತಿಂಗಳು ಅನೇಕ ಫೋನುಗಳು ಬಿಡುಗಡೆ ಆಗುತ್ತವೆ. ಅದರಂತೆ ಫೆಬ್ರವರಿಯಲ್ಲಿ ರಿಲೀಸ್ ಆಗಲಿರುವ ಫೋನುಗಳ ಪಟ್ಟಿ ನೋಡಿ.

Smartphones: ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿವೆ ಬೊಂಬಾಟ್ ಸ್ಮಾರ್ಟ್​ಫೋನ್​ಗಳು: ಇಲ್ಲಿದೆ ಪಟ್ಟಿ
Smartphones
Follow us
Vinay Bhat
|

Updated on: Feb 02, 2024 | 1:42 PM

ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿದ ಬೇಡಿಕೆಯ ಹಿನ್ನಲೆಯಲ್ಲಿ ಸ್ಮಾರ್ಟ್​ಫೋನ್​ಗಳು (Smartphones) ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿದೆ. 2024ರ ಮೊದಲ ತಿಂಗಳು ಜನವರಿಯಲ್ಲಿ ಕೂಡ ಅನೇಕ ಮೊಬೈಲ್​ಗಳು ರಿಲೀಸ್ ಆಗಿದ್ದವು. ಸ್ಯಾಮ್​ಸಂಗ್, ಒನ್​ಪ್ಲಸ್, ಒಪ್ಪೋ, ಇನ್ಫಿನಿಕ್ಸ್ ಕಂಪನಿಗಳು ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿತ್ತು. ಅದರಂತೆ ಫೆಬ್ರವರಿಯಲ್ಲಿ ಕೂಡ ಮಾರುಕಟ್ಟೆಗೆ ಕೆಲ ಫೋನುಗಳು ಅಪ್ಪಳಿಸಲಿವೆ. ನೀವು ಹೊಸ ಮೊಬೈಲ್ ಖರೀದಿಸುವ ಪ್ಲಾನ್​ನಲ್ಲಿದ್ದರೆ ಇವುಗಳ ಆಯ್ಕೆಯನ್ನು ಕೂಡ ಪರಿಗಣಿಸಬಹುದು. ಹಾಗಾದರೆ, ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಸ್ಮಾರ್ಟ್​ಫೋನ್​ಗಳನ್ನು ನೋಡೋಣ.

ಐಕ್ಯೂ ನಿಯೋ 9 ಪ್ರೊ

ಫೆಬ್ರವರಿ 22, 2024 ರಂದು ಭಾರತದಲ್ಲಿ ಐಕ್ಯೂ ತನ್ನ ಹೊಸ ಸ್ಮಾರ್ಟ್‌ಫೋನ್ ಐಕ್ಯೂ ನಿಯೋ 9 ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಇದು ಸ್ನಾಪ್​ಡ್ರಾಗನ್ 8 Gen 3 ಮೊಬೈಲ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಡ್ಯುಯಲ್ ಟೋನ್ ಲೆದರ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಆಕರ್ಷಕವಾಗಿದೆ. 12GB+512GB ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ, 144Hz ರಿಫ್ರೆಶ್ ದರದೊಂದಿಗೆ 5,000 mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ರೂ. 40 ಸಾವಿರದ ಅಡಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Budget 2024 PDF Download: ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಇದನ್ನೂ ಓದಿ
Image
ಒಂದೇ ಇಯರ್​ಬಡ್ಸ್​​ನಲ್ಲಿ ಎರಡು ಸಾಂಗ್ ಪ್ಲೇ ಮಾಡಿ
Image
ಬಿಡುಗಡೆಯಾದ ಒಂದೇ ತಿಂಗಳಲ್ಲಿ ಬೆಲೆ ಇಳಿಕೆ: ಪೋಕೋ M6 5G ಫೋನಿಗೆ ಡಿಮ್ಯಾಂಡ್
Image
ಪೇಟಿಎಂ ಫಾಸ್​ಟ್ಯಾಗ್ ನಿಲ್ಲಿಸಬೇಕಿಲ್ಲ; ಆರ್​ಬಿಐ ನಿರ್ಬಂಧಕ್ಕೇನು ಕಾರಣ
Image
ಕಾರು ಮಾತ್ರವಲ್ಲ, ಸ್ಮಾರ್ಟ್​ಫೋನ್​ಗೂ ಬಂದಿದೆ ಏರ್‌ಬ್ಯಾಗ್: ಹೇಗಿದೆ ನೋಡಿ

ಹಾನರ್ X9B

ಪ್ರಸಿದ್ಧ ಹಾನರ್ ಕಂಪನಿ ತನ್ನ ಹೊಸ ಹಾನರ್ X9B ಯೊಂದಿಗೆ ಭಾರತಕ್ಕೆ ಮತ್ತೆ ಬರಲು ಸಿದ್ಧವಾಗಿದೆ. ಈ ಫೋನ್ 108 MP ಪ್ರಾಥಮಿಕ ಕ್ಯಾಮೆರಾ, 5,800 mAh ಬ್ಯಾಟರಿ, 6.78 ಇಂಚಿನ ಕರ್ವ್ಡ್ AMOLED ಡಿಸ್ಪ್ಲೇ, ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ OS 7.2, ಸ್ನಾಪ್​ಡ್ರಾಗನ್ 6 Gen 1 SoC ಅನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಭಾರತದಲ್ಲಿ ರೂ. 30 ಸಾವಿರದೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ನಥಿಂಗ್ ಫೋನ್ 2A

ಸ್ಮಾರ್ಟ್‌ಫೋನ್ ಪ್ರಿಯರು ಕಾದು ಕುಳಿತಿರುವ ಫೋನ್ ಎಂದರೆ ಅದು ನಥಿಂಗ್ ಫೋನ್ 2A. ಕಂಪನಿಯು ಫೆಬ್ರವರಿ 26 ರಿಂದ 29 ರವರೆಗೆ ನಿಗದಿಪಡಿಸಲಾದ MWC 2024 ಈವೆಂಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಲಿದೆ. ಈ ಫೋನ್ 50MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಕ್ಯಾಮೆರಾ, 120Hz AMOLED ಡಿಸ್ಪ್ಲೇ ಮತ್ತು 32MP ಅಥವಾ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಬೆಲೆ ಸುಮಾರು ರೂ. 33 ಸಾವಿರ ಇರಬಹುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7200 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ವಿವೋ V30 5G

ವಿವೋ ತನ್ನ ಹೊಸ ವಿವೋ V30 5G ಜಾಗತಿಕ ರೂಪಾಂತರವನ್ನು ಸ್ನಾಪ್​ಡ್ರಾಗನ್ 7 Gen 3 ಮತ್ತು 3D ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಿದೆ. 12 GB + 12 GB ವರ್ಚುವಲ್ RAM ಈ ಫೋನ್‌ನ ವಿಶೇಷತೆಗಳು. ಈ ಫೋನ್ ಅನ್ನು ಎರಡು ಬಣ್ಣ ಆಯ್ಕೆಗಳೊಂದಿಗೆ ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ವರದಿಯಾಗಿದೆ. ಚೀನಾದಲ್ಲಿ ಬಿಡುಗಡೆಯಾದ ವಿವೋ S15 ಸರಣಿಯ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಹೇಳಲಾಗೊದೆ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್