Tech Tips: ಕಾರು ಮಾತ್ರವಲ್ಲ, ಈಗ ಸ್ಮಾರ್ಟ್​ಫೋನ್​ಗೂ ಬಂದಿದೆ ಏರ್‌ಬ್ಯಾಗ್: ಕೆಳಗೆ ಬಿದ್ರೆ ಏನೂ ಆಗಲ್ಲ

Phone AirBag: ನಿಮ್ಮ ಕೈಯಿಂದ ಪದೇ ಪದೇ ಫೋನ್ ಬೀಳುತ್ತಿದ್ದರೆ ಈ ಸ್ಟೋರಿ ನಿಮಗಾಗಿ. ಮಾರುಕಟ್ಟೆಗೆ ಫೋನ್ ಏರ್‌ಬ್ಯಾಗ್ ಬಂದಿದೆ. ಫೋನ್ ಬಿದ್ದಾಗ ಏರ್‌ಬ್ಯಾಗ್ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. ನಿಮ್ಮ ಫೋನ್ ಅನ್ನು ಕಾರಿನಂತೆ ಸುರಕ್ಷಿತವಾಗಿರಿಸಲು ಇದು ಸುಲಭವಾದ ಮಾರ್ಗವಾಗಿದೆ.

Tech Tips: ಕಾರು ಮಾತ್ರವಲ್ಲ, ಈಗ ಸ್ಮಾರ್ಟ್​ಫೋನ್​ಗೂ ಬಂದಿದೆ ಏರ್‌ಬ್ಯಾಗ್: ಕೆಳಗೆ ಬಿದ್ರೆ ಏನೂ ಆಗಲ್ಲ
Mobile Air Bag
Follow us
|

Updated on:Feb 01, 2024 | 1:57 PM

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಫೋನ್‌ಗಳ (Phones) ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ, ಅಷ್ಟೇ ಪ್ರೀತಿಸುತ್ತಾರೆ ಕೂಡ. ಆದರೆ ಪ್ರೀಮಿಯಂ ಫೋನ್ ಹೊಂದಿರುವ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಐಫೋನ್ ಬಳಕೆದಾರರಿಗೆ ಫೋನ್ ಬಿದ್ದರೆ ಹೃದಯವೇ ಕಳಚಿ ಬಿದ್ದಂತೆ. ಇದರಿಂದ ಪಾರಾಗಲು, ಹೆಚ್ಚಿನ ಜನರು ತಮ್ಮ ಫೋನ್ ಬಿದ್ದರೆ ಸುರಕ್ಷಿತವಾಗಿ ಉಳಿಯಲು ಬಲವಾದ ಕವರ್ ಅನ್ನು ಖರೀದಿಸಲು ಯೋಚಿಸುತ್ತಾರೆ. ಆದರೆ, ಈಗ ಅಂತಹ ಕವರ್ ಮರೆತು ಬಿಡಿ. ಯಾಕೆಂದರೆ ಇಂದು ನಾವು ನಿಮಗೆ ಕಾರಿನಂತಹ ಸುರಕ್ಷತೆಯನ್ನು ಪಡೆಯುವ ಕವರ್ ಬಗ್ಗೆ ಹೇಳುತ್ತೇವೆ. ಈ ಕವರ್‌ನ ದೊಡ್ಡ ವಿಶೇಷವೆಂದರೆ ಫೋನ್‌ನಲ್ಲಿ ಈ ಕವರ್ ಹಾಕಿದರೆ ಫೋನ್ ಬಿದ್ದ ತಕ್ಷಣ ಏರ್‌ಬ್ಯಾಗ್ ತೆರೆದುಕೊಳ್ಳುತ್ತದೆ. ಇದರಿಂದಾಗಿ ಫೋನ್ ಬಿದ್ದರೆ ಯಾವುದೇ ಹಾನಿ ಆಗುವುದಿಲ್ಲ.

ಏರ್‌ಬ್ಯಾಗ್ ಫೋನ್ ಕವರ್

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಐಫೋನ್ ಕವರ್ ಅನ್ನು ತೋರಿಸಲಾಗಿದೆ. ಇಲ್ಲಿ ಫೋನ್ ಬಿದ್ದ ತಕ್ಷಣ ಏರ್ ಬ್ಯಾಗ್ ತೆರೆದುಕೊಳ್ಳುತ್ತದೆ. ನಂತರ ಫೋನ್‌ನಲ್ಲಿ ಒಂದು ಸಣ್ಣ ಸ್ಕ್ರಾಚ್ ಕೂಡ ಗೋಚರಿಸುವುದಿಲ್ಲ. ಫೋನ್ ಕೆಳಗೆವೇ ಬಿದ್ದಿಲ್ಲ ಎಂಬಂತೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇಲ್ಲಿ ನಾವು ಆ ವೀಡಿಯೊವನ್ನು ಸಹ ಹಂಚಿಕೊಡಿದ್ದೇವೆ.

ಇದನ್ನೂ ಓದಿ
Image
ಕೇವಲ 10,499 ರೂ: ಬಜೆಟ್ ಪ್ರಿಯರನ್ನು ದಂದಾಗಿಸಿದ ಹೊಸ ಟೆಕ್ನೋ ಸ್ಪಾರ್ಕ್ 20
Image
ಆನ್​ಲೈನ್​ನಲ್ಲಿ ವೋಟಾರ್ ಐಡಿ ವಿಳಾಸ ಬದಲಾಯಿಸುವುದು ಹೇಗೆ?
Image
ಓಲಾ ಆ್ಯಪ್​ನಲ್ಲೇ UPI ಪೇಮೆಂಟ್
Image
ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗದಂತೆ ಎಚ್ಚರ ವಹಿಸುವುದು ಹೇಗೆ?

ವಾಟ್ಸ್​ಆ್ಯಪ್​ನಲ್ಲಿ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವುದು ಹೇಗೆ ಗೊತ್ತೇ?

ಏರ್‌ಬ್ಯಾಗ್ ಫೋನ್ ಕವರ್​ನ ವೈರಲ್ ವಿಡಿಯೋ:

View this post on Instagram

A post shared by Vector (@__vector__)

ಏರ್‌ಬ್ಯಾಗ್ ಹೊಂದಿರುವ ಐಫೋನ್ ಕವರ್ ಇದಾಗಿದ್ದು, ಫೋನ್ ಮೇಲಿನಿಂದ ಬಿದ್ದರೂ ಸುರಕ್ಷಿತವಾಗಿರುವುದನ್ನು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಕವರ್‌ನ ಬಣ್ಣವು ಕಿತ್ತಳೆ ಬಣ್ಣದ್ದಾಗಿದೆ. ಇದು ನೋಡಲು ಸಾಕಷ್ಟು ಕ್ಲಾಸಿಯಾಗಿದೆ. ಈ ಕವರ್ ಅನ್ನು ಒಮ್ಮೆ ಬಳಸಿದರೆ, ಅದನ್ನು ಬಹುಶಃ ಪುನಃ ಬಳಸಲಾಗುವುದಿಲ್ಲ ಎಂದು ಹೇಳಲಾಗಿದೆ. ಸದ್ಯ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರವಲ್ಲದೆ ಯೂಟ್ಯೂಬ್‌ನಲ್ಲಿಯೂ ವೈರಲ್ ಆಗುತ್ತಿದೆ.

ಈ ಏರ್‌ಬ್ಯಾಗ್ ಫೋನ್ ಕವರ್​ ಭಾರತಕ್ಕೆ ಇನ್ನಷ್ಟೆ ಬರಬೇಕಿದೆ ಎಂದು ಹೇಳಲಾಗಿದೆ. ಇದು ಯಾವಾಗ ಲಭ್ಯ ಇರುತ್ತದೆ?, ಇದರ ಬೆಲೆ ಎಷ್ಟು? ಎಂಬ ಕುರಿತ ಸಂಪೂರ್ಣ ಮಾಹಿತಿ ಹೊರಬೀಳಬೇಕಷ್ಟೆ. ಸದ್ಯಕ್ಕೆ ಇದು ವಿದೇಶದಲ್ಲಿ ಮಾತ್ರ ಸೇಲ್ ಆಗುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Thu, 1 February 24

ತಾಜಾ ಸುದ್ದಿ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ