ಪವರ್ ಬ್ಯಾಂಕ್​ನಲ್ಲಿ ಈ 5 ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಮನೆಯಿಂದ ಹೊರಗಿಡಿ

Power Bank Damage Signs: ಹಾಳಾದ ಪವರ್ ಬ್ಯಾಂಕ್ ಅನ್ನು ಬಳಸುವುದು ತುಂಬಾ ಅಪಾಯಕಾರಿ. ಇದನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದು ಬ್ಯಾಟರಿಯನ್ನು ಹೊಂದಿದ್ದು, ದೋಷಪೂರಿತವಾಗಿದ್ದರೆ ಸ್ಫೋಟಕ್ಕೆ ಕಾರಣವಾಗಬಹುದು.

ಪವರ್ ಬ್ಯಾಂಕ್​ನಲ್ಲಿ ಈ 5 ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಮನೆಯಿಂದ ಹೊರಗಿಡಿ
Power Bank
Follow us
Vinay Bhat
|

Updated on: Feb 03, 2024 | 2:13 PM

ಪವರ್ ಬ್ಯಾಂಕ್ (Power Bank) ಇಂದು ನಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸಿದೆ. ಇದು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಆದರೆ, ಹಾಳಾದ ಪವರ್ ಬ್ಯಾಂಕ್ ನಿಮಗೆ ಅಪಾಯವಾಗಬಹುದು ಎಂದು ತಿಳಿದಿದೆಯೇ?. ಪವರ್ ಬ್ಯಾಂಕ್​ನಲ್ಲಿ ಕೂಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಸ್ವತಃ ಪವರ್ ಬ್ಯಾಂಕ್ ನಿಮಗೆ ತೋರಿಸುತ್ತದೆ. ನೀವು ಈ ಸಿಗ್ನಲ್ ಅನ್ನು ಗುರುತಿಸಬೇಕಷ್ಟೆ. ಪವರ್ ಬ್ಯಾಂಕ್‌ನಲ್ಲಿ ಕೆಲವು ಲಕ್ಷಣಗಳು ಗೋಚರಿಸುತ್ತವೆ, ಹಾಗೆ ಕಂಡುಬಂದರೆ ಅದರಲ್ಲಿ ದೋಷವಿದೆ ಎಂದು ಅರ್ಥ.

ಹಾಳಾದ ಪವರ್ ಬ್ಯಾಂಕ್ ಅನ್ನು ಬಳಸುವುದು ತುಂಬಾ ಅಪಾಯಕಾರಿ. ಇದನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದು ಬ್ಯಾಟರಿಯನ್ನು ಹೊಂದಿದ್ದು, ದೋಷಪೂರಿತವಾಗಿದ್ದರೆ ಸ್ಫೋಟಕ್ಕೆ ಕಾರಣವಾಗಬಹುದು. ನಿಮ್ಮ ಪವರ್ ಬ್ಯಾಂಕ್‌ನಲ್ಲಿ ಈ 5 ಲಕ್ಷಣಗಳು ಕಂಡುಬಂದರೆ, ಅದನ್ನು ಬಳಸಬೇಡಿ ಮತ್ತು ಹೊಸ ಪವರ್ ಬ್ಯಾಂಕ್ ಖರೀದಿಸಿ.

ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿವೆ ಬೊಂಬಾಟ್ ಸ್ಮಾರ್ಟ್​ಫೋನ್​ಗಳು: ಇಲ್ಲಿದೆ ಪಟ್ಟಿ

ಇದನ್ನೂ ಓದಿ
Image
ಭಾರತದಲ್ಲಿ ವಿವೋದ 2 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ
Image
ನಥಿಂಗ್ ಫೋನ್ ಪ್ರಿಯರಿಗೆ ಬಂಪರ್ ಸುದ್ದಿ: ಹೊರಬಿತ್ತು ಹೊಸ ವಿಚಾರ
Image
ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿದೆ ಯಾಕೆ?
Image
ಶಾಕಿಂಗ್: ಕೇವಲ 6,799 ರೂ. ಗೆ ಹೊಸ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಲಾವಾ
  • ನಿಮ್ಮ ಪವರ್ ಬ್ಯಾಂಕ್ ಊದಿಕೊಂಡಂತೆ ಕಂಡುಬಂದರೆ, ತಕ್ಷಣವೇ ಅದನ್ನು ಬಳಸುವುದನ್ನು ನಿಲ್ಲಿಸಿ ಮತ್ತು ಅದನ್ನು ಮನೆಯಿಂದ ಹೊರಗಿಡಿ. ಇದು ಅಪಾಯದ ಸೂಚನೆ ಆಗಿದೆ. ಊದಿಕೊಂಡ ನಂತರ ಇದರಲ್ಲಿ ಬೆಂಕಿ ಕಾಣಿಸಬಹುದು ಅಥವಾ ಸ್ಫೋಟಕ್ಕೆ ಕಾರಣವಾಗಬಹುದು.
  • ಪವರ್ ಬ್ಯಾಂಕ್ ಬಳಸುವಾಗ ಅಥವಾ ಚಾರ್ಜ್ ಮಾಡುವಾಗ ಹೆಚ್ಚು ಬಿಸಿಯಾಗುತ್ತಿದ್ದರೆ, ಅದರ ಬಳಕೆಯನ್ನು ನಿಲ್ಲಿಸಬೇಕು. ಇದು ಸಹ ಅಪಾಯವಾಗಿದೆ. ಇದು ನಿಮಗೆ ಹಾನಿಯನ್ನು ಉಂಟುಮಾಡಬಹುದು.
  • ಪವರ್ ಬ್ಯಾಂಕ್‌ನಿಂದ ಪ್ಲಾಸ್ಟಿಕ್ ಉರಿಯುವ ಅಥವಾ ಕರಗಿದಂತಹ ವಾಸನೆ ಬಂದರೆ, ಅದು ಹಾಲಾಗಿದೆ ಎಂದು ಅರ್ಥ. ಅಂತಹ ಪರಿಸ್ಥಿತಿಯಲ್ಲಿ, ಪವರ್ ಬ್ಯಾಂಕ್ ಅನ್ನು ಬಳಸಬೇಡಿ.
  • ಪವರ್ ಬ್ಯಾಂಕ್ ಸೋರುತ್ತಿದ್ದರೆ ಅಥವಾ ಏನಾದರೂ ಸೋರಿಕೆಯಾಗುತ್ತಿದ್ದರೆ ಅದನ್ನು ಬಳಸಬೇಡಿ. ಅಂತಹ ಪರಿಸ್ಥಿತಿಯಲ್ಲಿ ಕರೆಂಟ್ ಶಾಕ್ ಸಂಭವಿಸಬಹುದು.
  • ಪವರ್ ಬ್ಯಾಂಕ್ ಮೊದಲಿಗಿಂತ ಕಡಿಮೆ ಚಾರ್ಜ್ ಮಾಡುತ್ತಿದ್ದರೆ, ಪವರ್ ಬ್ಯಾಕಪ್ ಕಾರ್ಯಕ್ಷಮತೆ ಉತ್ತಮವಾಗಿಲ್ಲ ಎಂದರ್ಥ. ಹಾಳಾದ ಪೋರ್ಟ್ ಅಥವಾ ಕೇಬಲ್ ಇತ್ಯಾದಿಗಳಿಂದ ಚಾರ್ಜಿಂಗ್ ಸಮಸ್ಯೆಗಳು ಉಂಟಾಗಬಹುದು. ಹೀಗಾದಲ್ಲಿ ಅದನ್ನು ಬಳಸಬೇಡಿ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ