ಭಾರತದಲ್ಲಿ ವಿವೋದ 2 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ: ನೂತನ ದರ ಇಲ್ಲಿದೆ

Vivo Price Cut: ನೀವು ಹೊಸ ವಿವೋ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ತನ್ನ ಕೈಗೆಟುಕುವ ಬೆಲೆಯ ವಿವೋ Y27 ಮತ್ತು ಮಧ್ಯಮ ಶ್ರೇಣಿಯ ವಿವೋ T2 ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಕಡಿತಗೊಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವಿವೋದ 2 ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ: ನೂತನ ದರ ಇಲ್ಲಿದೆ
Vivo Smartphones
Follow us
Vinay Bhat
|

Updated on: Feb 03, 2024 | 1:10 PM

ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ವಿವೋ Y200 5G ಯ (Vivo Y200 5G) ಹೊಸ ಸ್ಟೋರೇಜ್ ಸಾಮರ್ಥ್ಯವನ್ನು ಬಿಡುಗಡೆ ಮಾಡುವ ಜೊತೆಗೆ ಹಲವಾರು ಪ್ರಕಟಣೆಗಳನ್ನು ಹೊರಡಿಸಿದೆ. ವಿವೋ Y200 5G ಹ್ಯಾಂಡ್‌ಸೆಟ್ ಅನ್ನು ಮೂಲತಃ ಒಂದೇ 8GB/128GB ಮಾದರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ 8GB/256GB ರೂಪಾಂತರದಲ್ಲಿಯೂ ಲಭ್ಯವಿದೆ. ಹೆಚ್ಚುವರಿಯಾಗಿ, ಕಂಪನಿ ತನ್ನ ಎರಡು ಫೋನುಗಳ ಬೆಲೆಯಲ್ಲಿ ಕೂಡ ಇಳಿಕೆ ಮಾಡಿದೆ. ವಿವೋ Y27 ಮತ್ತು ವಿವೋ T2 5G ಫೋನ್‌ಗಳಿಗೆ ಬೆಲೆ ಕಡಿಮೆ ಮಾಡಲಾಗಿದೆ.

ವಿವೋ Y200 5G ಹೊಸ ರೂಪಾಂತರ

ವಿವೋ Y200 5G ಈಗ ಭಾರತದಲ್ಲಿ 8GB/256GB ಸಂಗ್ರಹಣೆಯಲ್ಲಿ ಲಭ್ಯವಿದೆ. ಇದರ ಬೆಲೆ 23,999 ರೂ ಆಗಿದೆ. 8GB/128GB ಆವೃತ್ತಿಗೆ ರೂ. 21,999 ಇದೆ. ಈ ಹ್ಯಾಂಡ್‌ಸೆಟ್ ಅಮೆಜಾನ್, ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಪಾರ್ಟ್ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಲಭ್ಯವಿರುತ್ತದೆ. ಗ್ರಾಹಕರು ದಿನಕ್ಕೆ 49 ರೂಪಾಯಿಗಳನ್ನು ಪಾವತಿಸುವ ಮೂಲಕ Y200 5G ಅನ್ನು ಸುಲಭವಾದ EMI ಆಯ್ಕೆಯಲ್ಲಿ ಖರೀದಿಸಬಹುದು.

Earbud Songs: ಒಂದೇ ಇಯರ್​ಬಡ್ಸ್​​ನಲ್ಲಿ ಎರಡು ಸಾಂಗ್ ಪ್ಲೇ ಮಾಡೋದು ಹೇಗೆ?

ಇದನ್ನೂ ಓದಿ
Image
ನಥಿಂಗ್ ಫೋನ್ ಪ್ರಿಯರಿಗೆ ಬಂಪರ್ ಸುದ್ದಿ: ಹೊರಬಿತ್ತು ಹೊಸ ವಿಚಾರ
Image
ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿದೆ ಯಾಕೆ?
Image
ಶಾಕಿಂಗ್: ಕೇವಲ 6,799 ರೂ. ಗೆ ಹೊಸ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಲಾವಾ
Image
ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿವೆ ಬೊಂಬಾಟ್ ಸ್ಮಾರ್ಟ್​ಫೋನ್​ಗಳು

ವಿವೋ Y200 ಫೀಚರ್ಸ್:

ಡಿಸ್‌ಪ್ಲೇ : 6.67-ಇಂಚಿನ FHD+ AMOLED ಡಿಸ್‌ಪ್ಲೇ ಜೊತೆಗೆ 2400 ×1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, 800 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಮತ್ತು ಪಂಚ್-ಹೋಲ್ ಕಟೌಟ್ ಇದೆ.

ಪ್ರೊಸೆಸರ್ : ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 1 6nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno GPU ನೀಡಲಾಗಿದೆ.

RAM ಮತ್ತು ಸಂಗ್ರಹಣೆ : 8GB LPDDR4x RAM ಮತ್ತು 128GB/256GB ಸಂಗ್ರಹಣೆಯನ್ನು ಮೈಕ್ರೋ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.

ಓಎಸ್ : ಆಂಡ್ರಾಯ್ಡ್ 13 ಜೊತೆಗೆ ಫನ್‌ಟಚ್ ಓಎಸ್ 13

ಕ್ಯಾಮೆರಾಗಳು : f/1.79 ದ್ಯುತಿರಂಧ್ರದೊಂದಿಗೆ 64MP ಪ್ರಾಥಮಿಕ ಕ್ಯಾಮೆರಾ ಮತ್ತು f/2.4 ದ್ಯುತಿರಂಧ್ರದೊಂದಿಗೆ 2MP ಸಂವೇದಕ, LED ಫ್ಲ್ಯಾಷ್ ಮತ್ತು Aura LED ನೀಡಲಾಗಿದೆ. ಮುಂಭಾಗದ ಕ್ಯಾಮೆರಾ 16MP ನಿಂದ ಕೂಡಿದೆ.

ಬ್ಯಾಟರಿ : 4800mAh ಬ್ಯಾಟರಿ ಜೊತೆಗೆ 44W ಫಾಸ್ಟ್ ಚಾರ್ಜಿಂಗ್.

ವಿವೋ Y27 ಮತ್ತು ವಿವೋ T2 ಬೆಲೆ ಇಳಿಕೆ

ವಿವೋ Y27

ವಿವೋ Y27 ಈಗ 6GB/128GB ಮಾದರಿಗೆ 11,999 ರೂ. ಗಳಲ್ಲಿ ಲಭ್ಯವಿದೆ. ಈ ಹ್ಯಾಂಡ್ಸೆಟ್ ರೂ. 14,999 ಕ್ಕೆ ಬಿಡುಗಡೆಯಾಗಿತ್ತು. ಗ್ರಾಹಕರು SBI, ಯೆಸ್ ಬ್ಯಾಂಕ್, IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, DBS ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು IndusInd ಬ್ಯಾಂಕ್ ಅನ್ನು ಬಳಸಿಕೊಂಡು ವಿ-ಶೀಲ್ಡ್‌ನಂತಹ ಹೆಚ್ಚುವರಿ ಪ್ರಯೋಜನಗಳೊಂದಿಗೆ ರೂ. 1,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಹೊಸ ಬೆಲೆಯು ಫೆಬ್ರವರಿ 1 ರಿಂದ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳ ಮೂಲಕ ಜಾರಿಗೆ ಬರಲಿದೆ.

ವಿವೋ T2 5G

ವಿವೋ T2 ಸ್ಮಾರ್ಟ್​ಫೋನ್ 6GB/128GB ಮಾದರಿಗೆ ರೂ. 15,999 ಮತ್ತು 8GB/128GB ಮಾದರಿಗೆ ರೂ. 17,999 ನಿಗದಿ ಮಾಡಲಾಗಿದೆ. ಹೊಸ ಬೆಲೆ ಫೆಬ್ರವರಿ 1 ರಿಂದ ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್‌ನಲ್ಲಿ ಜಾರಿಗೆ ಬರಲಿದೆ. ಈ ಹ್ಯಾಂಡ್‌ಸೆಟ್ ಮೂಲತಃ 6GB/128GB ಮಾದರಿಗೆ ರೂ. 18,999 ಮತ್ತು 8GB/128GB ಆವೃತ್ತಿಗೆ ರೂ. 20,999 ಇತ್ತು.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ