ಶಾಕಿಂಗ್: ಭಾರತದಲ್ಲಿ ಕೇವಲ 6,799 ರೂ. ಗೆ ಹೊಸ ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಲಾವಾ
Lava Yuva 3 Launched: ಪ್ರಸಿದ್ಧ ಲಾವಾ ಕಂಪನಿ ಭಾರತದಲ್ಲಿ ಹೊಸ ಲಾವಾ ಯುವ 3 ಫೋನ್ನೊಂದಿಗೆ ಪುನಃ ಬಂದಿದೆ. ಇದೊಂದು ಬಜೆಟ್ ಫೋನಾಗಿದ್ದು, ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 6,799 ರೂ. ನಿಗದಿ ಮಾಡಲಾಗಿದೆ.
ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಲಾವಾ ಕಂಪನಿ ಇದೀಗ ಹೊಸ ಫೋನ್ನೊಂದಿಗೆ ಪುನಃ ಬಂದಿದೆ. ದೇಶದಲ್ಲಿ ಲಾವಾ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಲಾವಾ ಯುವ 3 (Lava Yuva 3) ಅನ್ನು ಬಿಡುಗಡೆ ಮಾಡಿದೆ. ಯುವಾ 3 6.5 ಇಂಚಿನ HD + ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಬಂದಿದೆ. ಲಾವಾ ಯುವ 3 ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಲಾವಾ ಯುವ 3 ಬೆಲೆ:
ಬೆಲೆಯ ಬಗ್ಗೆ ಮಾತನಾಡುವುದಾದರೆ, ಲಾವಾ ಯುವ 3 ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 6,799 ರೂ. ಆಗಿದೆ. ಅಂತೆಯೆ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 7,299 ರೂ. ಈ ಸ್ಮಾರ್ಟ್‌ಫೋನ್ ಫೆಬ್ರವರಿ 7 ರಿಂದ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಫೆಬ್ರವರಿ 10, 2024 ರಿಂದ ಲಾವಾದ ರಿಟೇಲ್ ನೆಟ್‌ವರ್ಕ್ ಮತ್ತು ಲಾವಾ ಇ-ಸ್ಟೋರ್‌ನಲ್ಲಿ ಲಭ್ಯವಿರುತ್ತದೆ. ಈ ಫೋನ್ ಎಕ್ಲಿಪ್ಸ್ ಬ್ಲಾಕ್, ಕಾಸ್ಮಿಕ್ ಲ್ಯಾವೆಂಡರ್ ಮತ್ತು ಗ್ಯಾಲಕ್ಸಿ ವೈಟ್ ಬಣ್ಣಗಳಲ್ಲಿ ಅನಾವರಣಗೊಂಡಿದೆ.
ಕಾರು ಮಾತ್ರವಲ್ಲ, ಈಗ ಸ್ಮಾರ್ಟ್ಫೋನ್ಗೂ ಬಂದಿದೆ ಏರ್‌ಬ್ಯಾಗ್: ಕೆಳಗೆ ಬಿದ್ರೆ ಏನೂ ಆಗಲ್ಲ
ಲಾವಾ ಯುವ 3 ಫೀಚರ್ಸ್:
ಲಾವಾ ಯುವ 3 ಸ್ಮಾರ್ಟ್‌ಫೋನ್ 6.5 ಇಂಚಿನ HD + ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ರೆಸಲ್ಯೂಶನ್ 720 * 1600 ಪಿಕ್ಸೆಲ್ಗಳು ಮತ್ತು ರಿಫ್ರೆಶ್ ದರ 90Hz ಆಗಿದೆ. ಈ ಸ್ಮಾರ್ಟ್‌ಫೋನ್ 4GB RAM ಅನ್ನು ಹೊಂದಿದೆ, ಇದನ್ನು ವರ್ಚುವಲ್ RAM ಮೂಲಕ 4GB ವರೆಗೆ ಹೆಚ್ಚಿಸಬಹುದು. 64GB ಅಥವಾ 128GB ಸಂಗ್ರಹಣೆಯ ಆಯ್ಕೆ ಇದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು. ಯುವಾ 3 ಯುನಿಸಾಕ್ ಟಿ606 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡುತ್ತಾ, ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಟ್ರಿಪಲ್ AI ಕ್ಯಾಮೆರಾ ಇದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಎರಡು ವರ್ಷಗಳವರೆಗೆ ಭದ್ರತಾ ನವೀಕರಣಗಳು ಮತ್ತು ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್‌ಗಳನ್ನು ಕ್ಲೈಮ್ ಮಾಡುತ್ತದೆ.
ಉಳಿದಂತೆ ಈ ಫೋನ್ನಲ್ಲಿ ಭದ್ರತೆಗಾಗಿ ಫೇಸ್ ಅನ್‌ಲಾಕ್ ವೈಶಿಷ್ಟ್ಯ ನೀಡಲಾಗಿದೆ. ಯುವಾ 3 ಪ್ರೀಮಿಯಂ ಬ್ಯಾಕ್ ವಿನ್ಯಾಸದೊಂದಿಗೆ ಸೈಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi 802.11 b/g/n/ac, USB ಟೈಪ್ C ಪೋರ್ಟ್, ಬ್ಲೂಟೂತ್ V5.0, ಮತ್ತು ಆಡಿಯೋ ಜಾಕ್ 3.5mm ಸೇರಿವೆ.
ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ