ಪ್ರಸಿದ್ಧ ವಿವೋ ಕಂಪನಿ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದನ್ನು ಹೆಚ್ಚಿಸುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಮೊಬೈಲ್ ಅನ್ನು ಲಾಂಚ್ ಮಾಡುತ್ತಿದೆ. ಇದೀಗ ಇಂದು ತನ್ನ ಮತ್ತೊಂದು ಹೊಸ ವಿವೋ T2 ಪ್ರೊ 5G (Vivo T2 Pro 5G) ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ರಿಲೀಸ್ ಮಾಡಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ಐಕ್ಯೂ Z7 ಪ್ರೊ ನಂತೆಯೇ ಇದೆ. T2 ಪ್ರೊನಲ್ಲಿ ಆಕರ್ಷಕವಾದ ಡಿಸ್ ಪ್ಲೇ, ಬಿಗ್ ಬ್ಯಾಟರಿ, ಬಲಿಷ್ಠ ಪ್ರೊಸೆಸರ್ ಆಯ್ಕೆ ನೀಡಲಾಗಿದೆ. ಈ ಹೊಸ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿವೋ T2 ಪ್ರೊ 5G ಸ್ಮಾರ್ಟ್‌ಫೋನ್ ದೇಶದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 23,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ ಇದರ 256GB ಸ್ಟೋರೇಜ್ ಮಾದರಿ ಬೆಲೆ 24,999 ರೂ. ಆಗಿದೆ. ಈ ಫೋನಿನ ಮೊದಲ ಮಾರಾಟವು ಸೆಪ್ಟೆಂಬರ್ 29 ರಂದು ಸಂಜೆ 7:00 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ. ಬಿಡುಗಡೆಯ ಭಾಗವಾಗಿ, ಕಂಪನಿಯು ಮಾರಾಟದ ಕೊಡುಗೆಗಳನ್ನು ಘೋಷಿಸಿದ್ದು, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ರೂ. 2,000 ರಿಯಾಯಿತಿ ಇದೆ.
ವಿವೋ T2 ಪ್ರೊನಲ್ಲಿ ನೀವು ಬಾಗಿದ ಡಿಸ್ ಪ್ಲೇ ಮತ್ತು ಸ್ಲಿಮ್ ವಿನ್ಯಾಸವನ್ನು ಪಡೆಯುತ್ತೀರಿ. ಈ ಸ್ಮಾರ್ಟ್‌ಫೋನ್ ತುಂಬಾ ಹಗುರವಾಗಿದೆ. 6.78-ಇಂಚಿನ ಡಿಸ್ ಪ್ಲೇಯೊಂದಿಗೆ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಸಾಧನವು ಆಂಡ್ರಾಯ್ಡ್ 13 OS ಮೂಲಕ ರನ್ ಆಗುತ್ತಿದೆ.
ಭಾರತದಲ್ಲಿ ಬಹುನಿರೀಕ್ಷಿತ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಬಿಡುಗಡೆ
ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 64-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ರಿಂಗ್ ಆಕಾರದಲ್ಲಿ LED ಫ್ಲ್ಯಾಷ್ ಇದೆ. ದ್ವಿತೀಯ ಸಂವೇದಕವು 2-ಮೆಗಾಪಿಕ್ಸೆಲ್ನಿಂದ ಕೂಡಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈ 5G ಫೋನ್ನಲ್ಲಿ 4,600mAh ಬ್ಯಾಟರಿಯನ್ನು ನೀಡಲಾಗಿದ್ದು, 66W ಬೇಗದ ಚಾರ್ಜಿಂಗ್ ಬೆಂಬಲವಿದೆ. ಮಾರುಕಟ್ಟೆಯಲ್ಲಿರುವ ಹಲವಾರು ಬ್ರ್ಯಾಂಡ್‌ಗಳಿಗಿಂತ ಭಿನ್ನವಾಗಿ ವಿವೋ T2 ಪ್ರೊ ಫೋನ್‌ನೊಂದಿಗೆ ಬಾಕ್ಸ್‌ನಲ್ಲಿ ವೇಗದ ಚಾರ್ಜರ್ ಅನ್ನು ಸಹ ವಿವೋ ಒದಗಿಸುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಬ್ಲೂಟೂತ್ 5.3, IP52 ನೀರು ಮತ್ತು ಧೂಳಿನ ಪ್ರತಿರೋಧ, Wi-Fi 6, ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ