ವಿವೋ ಕಂಪನಿ ಭಾರತದಲ್ಲಿ ಈಗೀಗ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಮತ್ತೊಂದು ನೂತನ ಫೋನಿನ ಬಿಡುಗಡೆ ಬಗ್ಗೆ ಘೋಷಿಸಿದ್ದು ದಿನಾಂಕವನ್ನು ಕೂಡ ಪ್ರಕಟಿಸಿದೆ. ಭಾರತದಲ್ಲಿ ಸೆಪ್ಟೆಂಬರ್ 22 ರಂದು ವಿವೋ T2 ಪ್ರೊ (Vivo T2 Pro) ಸ್ಮಾರ್ಟ್ಫೋನ್ ಬಿಡುಗಡೆ ಆಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಈ ಬಗ್ಗೆ ಖಚಿತ ಪಡಿಸಿದೆ. ಬಿಡುಗಡೆಗು ಮುನ್ನ ವಿವೋ T2 ಪ್ರೊ ಸ್ಮಾರ್ಟ್ಫೋನ್ನ ಕೆಲ ಫೀಚರ್ಗಳು ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ.
ವಿವೋ T2 ಪ್ರೊ ಸ್ಮಾರ್ಟ್ಫೋನ್ ಐಕ್ಯೂ Z7 ಪ್ರೊ ಫೋನಿನ ಮರುಬ್ರಾಂಡ್ ಎಂದು ಹೇಳಲಾಗಿದೆ. ಈ ಫೋನ್ 6.78-ಇಂಚಿನ FHD+ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು ಪಂಚ್-ಹೋಲ್ ಕಟೌಟ್ ಅನ್ನು ಹೊಂದಿರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಮೂಲಕ ARM Mali-G610 GPU ನೊಂದಿಗೆ ಜೋಡಿಸಲ್ಪಟ್ಟಿದೆ.
ಬಿಡುಗಡೆಗೆ ಸಿದ್ಧವಾದ ಶವೋಮಿ ಕಂಪನಿಯ ಅತ್ಯಂತ ದುಬಾರಿ ಸ್ಮಾರ್ಟ್ಫೋನ್: ಯಾವುದು ನೋಡಿ
ಕ್ಯಾಮೆರಾ ವಿಚಾರಕ್ಕೆ ಬಂದರೆ, ವಿವೋ T2 ಪ್ರೊ 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ.
ವಿವೋ T2 ಪ್ರೊ ಫೋನಿನಲ್ಲಿ 66W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,600mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಆಂಡ್ರಾಯ್ಡ್ 13-ಆಧಾರಿತ Funtouch OS ಮೂಲಕ ರನ್ ಆಗುತ್ತದೆ. ಈ ಫೋನ್ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದ್ದು, ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1161 ಸ್ಕೋರ್ ಮತ್ತು ಮಲ್ಟಿ-ಕೋರ್ ಕಾರ್ಯಕ್ಷಮತೆಯಲ್ಲಿ 2625 ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ವಿವೋ T2 ಪ್ರೊ ಬೆಲೆ (ನಿರೀಕ್ಷಿತ)
ಭಾರತದಲ್ಲಿ ಬಿಡುಗಡೆಯಾದ ಐಕ್ಯೂ Z7 ಪ್ರೊ ಮೂಲ ಮಾದರಿ 23,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಹೀಗಾಗಿ ವಿವೋ T2 ಪ್ರೊ ಕೂಡ ಅದೇ ಶ್ರೇಣಿಯಲ್ಲಿ ನಿರೀಕ್ಷಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Mon, 18 September 23