Vivo V21e 5G: ಭಾರತದಲ್ಲಿ ವಿವೋ V21e 5G ಬಿಡುಗಡೆ; ದರ, ವೈಶಿಷ್ಟ್ಯ ಮತ್ತಿತರ ಮಾಹಿತಿಗಳು ಇಲ್ಲಿವೆ

| Updated By: Srinivas Mata

Updated on: Jun 25, 2021 | 12:56 PM

ವಿವೋ ಕಂಪೆನಿಯು ಹೊಸ ವಿವೋ ವಿ21ಇ 5Gಯೊಂದಿಗೆ ವಿವೋ- ವಿ ಸರಣಿಗೆ ಹೊಸ ಬದಲಾವಣೆ ತಂದಿದೆ. 8GB RAM+ 128GB ವೇರಿಯಂಟ್ ದರ ರೂ. 24,990 ಇದೆ. ಈ ಫೋನ್ ಬಗ್ಗೆ ಇನ್ನಷ್ಟು ವಿವರಗಳಿಗಾಗಿ ಮುಂದೆ ಓದಿ.

Vivo V21e 5G: ಭಾರತದಲ್ಲಿ ವಿವೋ V21e 5G ಬಿಡುಗಡೆ; ದರ, ವೈಶಿಷ್ಟ್ಯ ಮತ್ತಿತರ ಮಾಹಿತಿಗಳು ಇಲ್ಲಿವೆ
ವಿವೋ ವಿ21ಇ 5G
Follow us on

ವಿವೋ ಕಂಪೆನಿಯು ಹೊಸ ವಿವೋ ವಿ21ಇ 5Gಯೊಂದಿಗೆ ವಿವೋ- ವಿ ಸರಣಿಗೆ ಹೊಸ ಬದಲಾವಣೆ ತಂದಿದೆ. 2021ರ ಏಪ್ರಿಲ್​ನಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವಿವೋ ವಿ21 5Gಗೆ ಅಲ್ಪ ಸ್ವಲ್ಪ ಬದಲಾವಣೆ ಜತೆಗೆ ಹೊಸ ಸ್ಮಾರ್ಟ್​ಫೋನ್ ಬಂದಿದೆ. ಡ್ಯುಯಲ್ (ಎರಡು) ಹಿಂಬದಿಯ ಕ್ಯಾಮೆರಾ ಇದೆ. ವಿವೋದ ಇತರ ವಿ ಸರಣಿಯ ಫೋನ್​ಗಳಂತೆಯೇ ವಿವೋ ವಿ21ಇ 5G ಫೋನ್ ಸೆಲ್ಫೀ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತದೆ. 32 ಮೆಗಾಪಿಕ್ಸೆಲ್​ನ ಫ್ರಂಟ್​ ಕ್ಯಾಮೆರಾ ಇದ್ದು, ಸೂಪರ್ ನೈಟ್ ಸೆಲ್ಫಿ ಹಾಗೂ ಕಡಿಮೆ ಬೆಳಕು ಇರುವ ಕಡೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಎಕ್ಸ್​ಟ್ರೀಮ್ ಮೋಡ್ ಸಪೋರ್ಟ್ ಮಾಡುತ್ತದೆ.

ಮಿಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಇದ್ದು, ಇದನ್ನು ಕೈಗೆಟುಕವ ಸ್ಮಾರ್ಟ್​ಫೋನ್​ನಲ್ಲಿ 5G ಸಂಪರ್ಕ ತರುವುದಕ್ಕಾಗಿ ರೂಪಿಸಲಾಗಿದೆ. ​ಇದೇ ಚಿಪ್​ಸೆಟ್ ಭಾರತದಲ್ಲಿ ಹಲವು ಫೋನ್​ಗಳಲ್ಲಿ ಬಳಸಲಾಗಿದೆ. ರಿಯಲ್​ಮಿ 8 5G, ರಿಯಲ್​ಮಿ ನರ್​ಜೋ 30 5G, ಪೋಕೋ M3 ಪ್ರೋ 5G ಇವೆಲ್ಲಕ್ಕೂ ಬಳಸಲಾಗಿದೆ. ಅಂದಹಾಗೆ ವಿವೋ ವಿ21ಇಯಲ್ಲಿ 4G ಸಹ ದೊರೆಯುತ್ತದೆ. ಅದರಲ್ಲಿ ಕ್ವಾಲ್​ಕಾಮ್ ಸ್ನ್ಯಾಪ್​ಡ್ರ್ಯಾಗನ್ 720G ಚಿಪ್​ಸೆಟ್​ ಇದ್ದು, ಅದು ಮಲೇಷ್ಯಾದಲ್ಲಿ ಲಭ್ಯ ಇದೆ. ಜಾಗತಿಕ ಮಟ್ಟದಲ್ಲಿ ಯಾವಾಗ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ.

ಇನ್ನು ವಿವೋ ವಿ21ಇ 5G ಮೊಬೈಲ್​ಫೊನ್ 6.44 ಇಂಚಿನ ಫುಲ್​- ಎಚ್​ಡಿ+ AMOLED ಡಿಸ್​ಪ್ಲೇ ಜತೆಗೆ 20:9 ಆಸ್ಪೆಕ್ಟ್ ರೇಷಿಯೋದೊಂದಿಗೆ ಬರುತ್ತದೆ. ಸಿಂಗಲ್ ಸೆಲ್ಫಿ ಕ್ಯಾಮೆರಾಗೆ ವಾಟರ್​ಡ್ರಾಪ್ ಸ್ಟೈಲ್ ನಾಚ್ ಇದೆ. ಫೋನ್ 7.67 ಮಿಲಿಮೀಟರ್ ದಪ್ಪವಿದೆ ಹಾಗೂ 167 ಗ್ರಾಮ್ ತೂಕವಿದೆ. ಆಕ್ಟಾಕೋರ್ ಮಿಡಿಯಾಟೆಕ್ ಡೈಮೆನ್ಸಿಟ 700 ಚಿಪ್​ಸೆಟ್​ ಜತೆಗೆ 8GB RAM + 3GB ವಿಸ್ತೃತ ವರ್ಚುವಲ್ RAM ಇದೆ. 128 GBಯ ಸಂಗ್ರಹವನ್ನು ಹೈಬ್ರಿಡ್ ಕಾರ್ಡ್ ಸ್ಲಾಟ್​ನೊಂದಿಗೆ ವಿಸ್ತರಿಸಿಕೊಳ್ಳಬಹುದು. ಈ ಫೋನ್ ColourOS 1.1 ಔಟ್​-ಆಫ್​-ದ-ಬಾಕ್ಸ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ.

5G ಕನೆಕ್ಟಿವಿಟಿ ಸಪೋರ್ಟ್ ಮಾಡುತ್ತದೆ. ಇನ್ನು ಇದರಲ್ಲಿರುವ ಡ್ಯುಯಲ್ (ಎರಡು) ಹಿಂಬದಿಯ ಕ್ಯಾಮೆರಾ 64 ಮೆಗಾಪಿಕ್ಸೆಲ್, ಜತೆಗೆ f/1.79 ಅಪರ್ಚರ್ ಹೊಂದಿದೆ. 8 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಶೂಟರ್ ಜತೆಗೆ ಆಟೋ ಫೋಕಸ್ ಸಪೋರ್ಟ್ ಜತೆಗೆ f/2.2 ಅಪರ್ಚರ್ ಹೊಂದಿದೆ. ಮೊದಲೇ ತಿಳಿಸಿದಂತೆ ಸೆಲ್ಫಿಗೆ 32 ಮೆಗಾಪಿಕ್ಸೆಲ್ ಇದೆ. ಕ್ಯಾಮೆರಾ ಆ್ಯಪ್​ನಲ್ಲಿ ಸ್ಲೋ-ಮೋ, ಟೈಮ್- ಲ್ಯಾಪ್ಸ್, ಪ್ರೊ, ಎಆರ್​ ಸ್ಟಿಕ್ಕರ್ಸ್, ಡಾಕ್, ಡಬಲ್ ಎಕ್ಸ್​ಪೋಷರ್ ಹೀಗೆ ಇನ್ನಷ್ಟು ಮೋಡ್​ಗಳೊಂದಿಗೆ ಬರುತ್ತದೆ. ಹಿಂಬದಿಯ ಕ್ಯಾಮೆರಾ ಕಪ್ಪು ಬಣ್ಣದ ಫಿನಿಷ್ ಜತೆಗೆ ಬರುತ್ತದೆ.

ವಿವೋ ವಿ21ಇ 5Gಯಲ್ಲಿ ಬ್ಲ್ಯೂಟೂಥ್ v5.1, ಡ್ಯುಯಲ್ ಬ್ಯಾಂಡ್ ವೈ-ಫೈ, ಫಿಂಗರ್​ಪ್ರಿಂಟ್, 4000 mAh ಬ್ಯಾಟರಿ ಮತ್ತು ಅದಕ್ಕೆ ಸಪೋರ್ಟ್ ಮಾಡುವಂಥ 44W ಫಾಸ್ಟ್ ಚಾರ್ಜಿಂಗ್ ಇದೆ. ಈ ಫೋನ್ 0ಯಿಂದ 72 ಪರ್ಸೆಂಟ್ ಚಾರ್ಜಿಂಗ್ ಕೇವಲ 30 ನಿಮಿಷದಲ್ಲಿ ಆಗುತ್ತದೆ. 8GB RAM+ 128GB ವೇರಿಯಂಟ್ ದರ ರೂ. 24,990 ಇದೆ. ಡಾರ್ಕ್ ಪರ್ಲ್, ಸನ್​ಸೆಟ್ ಜಾಝ್ ಬಣ್ಣಗಳಲ್ಲಿ ವಿವೋ ಇ- ಸ್ಟೋರ್ ಮೂಲಕ ದೊರೆಯುತ್ತದೆ.

ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ವಿವೋ ಸಂಸ್ಥೆಯ ಹೊಚ್ಚಹೊಸ ಸ್ಮಾರ್ಟ್‌ಫೋನ್; V21e 5G ವಿಶೇಷತೆಗಳೇನು?

(Vivo V21e 5G mobile phone launched in India. Price, features, specification and other details explained here)