ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ವಿವೋ ಸಂಸ್ಥೆಯ ಹೊಚ್ಚಹೊಸ ಸ್ಮಾರ್ಟ್‌ಫೋನ್; V21e 5G ವಿಶೇಷತೆಗಳೇನು?
V21e 5G ಸ್ಮಾರ್ಟ್ ಫೋನ್ 8ಜಿಬಿ RAM ಮತ್ತು 128 ಜಿಬಿ ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಅಲ್ಲದೆ ಮೆಮೊರಿ ಕಾರ್ಡ್ ಬಳಸಿ ಇನ್ನೂ ಹೆಚ್ಚಿನ ಸ್ಟೋರೆಜ್ ಸಾಮರ್ಥ್ಯವನ್ನು ಹೊಂದುವ ಅವಕಾಶ ಕೂಡ V21e 5Gಇರಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರೀಯತೆಯನ್ನು ಪಡೆದಿರುವ ವಿವೋ ಸಂಸ್ಥೆ ಸದ್ಯ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಜೂನ್ ತಿಂಗಳ 24ನೇ ತಾರೀಖಿನಂದು ಭಾರತದಲ್ಲಿ V21e 5G ಹ್ಯಾಂಡ್ ಸೆಟ್ ಅನ್ನು ಅನಾವರಣ ಮಾಡಲು ವಿವೋ ಕಂಪನಿ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ V21e 5G ಅನಾವರಣದ ದಿನಾಂಕದ ಬಗ್ಗೆ ವಿವೋ ಕಂಪನಿಯಿಂದ ಅಧೀಕೃತವಾಗಿ ಮಾಹಿತಿ ದೊರೆತಿಲ್ಲವಾದರೂ, ಆಕರ್ಷಕ ಫೀಚರ್ ಜೊತೆಗೆ ಮೂಡಿ ಬಂದಿರುವ ಈ ಸ್ಮಾರ್ಟ್ ಫೋನ್ ಬಗೆಗಿನ ಕೆಲವು ವಿವರಗಳು ಸದ್ಯ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ.
ಭಾರತದಲ್ಲಿ V-ಸರಣಿಯ ಈ ಹ್ಯಾಂಡ್ ಸೆಟ್ ಪೋನ್ 6.44 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ AMOLED ಡಿಸ್ಪ್ಲೇ ಹೊಂದಿರಲಿದ್ದು, ಇದು FHD + ರೆಸಲ್ಯೂಶನ್ ನೀಡುತ್ತದೆ. V21e 5G ಸ್ಮಾರ್ಟ್ ಫೋನ್ 8ಜಿಬಿ RAM ಮತ್ತು 128 ಜಿಬಿ ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, 24,999 ರೂಪಾಯಿಗೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಟಿಪ್ಪರ್ ಉಲ್ಲೇಖಿಸಿದೆ.
V21e 5G ಸ್ಮಾರ್ಟ್ ಫೋನ್ ಓಕ್ಟಾ ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700SoC, Mail-G57 MC2A ಅನ್ನು ಜಿಪಿಯು ಜತೆಗೆ ಸಂಯೋಜಿಸಲಾಗಿದೆ. V21e 5G ಸ್ಮಾರ್ಟ್ ಫೋನ್ 8ಜಿಬಿ RAM ಮತ್ತು 128 ಜಿಬಿ ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಮೆಮೊರಿ ಕಾರ್ಡ್ ಬಳಸಿ ಇನ್ನೂ ಹೆಚ್ಚಿನ ಸ್ಟೋರೆಜ್ ಸಾಮರ್ಥ್ಯವನ್ನು ಹೊಂದುವ ಅವಕಾಶ ಕೂಡ V21e 5Gಇರಲಿದೆ.
#BlockYourDate! ?️ The stylish new #vivoV21e is launching on 24th June, 2021 at 5 PM. #DelightEveryMoment #MostStylish5G pic.twitter.com/haeFnfwpZ8
— Vivo India (@Vivo_India) June 20, 2021
V21e 5G ಸ್ಮಾರ್ಟ್ ಫೋನ್ ಎರಡು ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದ್ದು, ಒಂದು ಕ್ಯಾಮರಾ 64MP ಪಿಕ್ಸೆಲ್ ಸೆನ್ಸಾರ್, ಇನ್ನೊಂದು 8 MP ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಆಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಇದರಲ್ಲಿ ಇರಲಿದೆ. ಜತೆಗೆ 32MP ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ ಇರಲಿದೆ.
Vivo V21e 5G ◾8GB+128GB : ₹24,990
— the_tech_guy (@_the_tech_guy) June 19, 2021
V21e 5G ಸ್ಮಾರ್ಟ್ ಫೋನ್ನ ಬ್ಯಾಟರಿ ಸಾಮರ್ಥ್ಯ ಕೂಡ ಉತ್ತಮವಾಗಿರಲಿದ್ದು 4,400mAh ಹೊಂದಿದೆ. ಇದು W44ವೇಗಗತಿಯ ಚಾರ್ಚಿಂಗ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ಬ್ಲೂಟೂತ್, ವೈಫೈ ಇರಲಿದೆ.
ಇದನ್ನೂ ಓದಿ:
Flipkart Apple Days sale: iPhoneಗಳಿಗೆ ಭರ್ಜರಿ ರಿಯಾಯಿತಿ; ತಿಂಗಳಿಗೆ ಕೇವಲ 899 ರೂ ಕಟ್ಟಿ iPhone 6 ಖರೀದಿಸಿ
Paytm Mall Flagship Fest Sale 2021: ಪೇಟಿಎಂ ಮಾಲ್ ಹಬ್ಬದ ಮಾರಾಟದಲ್ಲಿ ಪ್ರೀಮಿಯಂ ಮೊಬೈಲ್ ಫೋನ್ಗಳು ಸಸ್ತಾ
Published On - 12:04 pm, Mon, 21 June 21